ಪೊಲೀಸರಿಗೆ ಬೆದರಿಕೆ ಹಾಕಿದ ಅಸಾದುದ್ದೀನ್ ಓವೈಸಿ

ಲಕ್ನೋ ಡಿ 24 : ಅಖಿಲ ಭಾರತ ಮಜ್ಲಿಸ್-ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ)ಪಕ್ಷದ ನಾಯಕ ಹೈದರಾಬಾದ್ ಸಂಸದ ಅಸಾದುದ್ದೀನ್‌ ಓವೈಸಿಯವರು ಸಭೆಯೊಂದರಲ್ಲಿ ಉತ್ತರ ಪ್ರದೇಶದ ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ನಿಮ್ಮೊಂದಿಗಿರಲು ಸಾಧ್ಯವಿಲ್ಲ. ನಾವು ಎಂದಿಗೂ ನಿಮ್ಮ ದೌರ್ಜನ್ಯವನ್ನು ಎಂದಿಗೂ ನಾವು ಮರೆಯುವುದಿಲ್ಲ, ಅಲ್ಲಾ ತನ್ನ ಶಕ್ತಿಯಿಂದ ನಿಮ್ಮನ್ನು ಖಂಡಿತವಾಗಿಯೂ ನಾಶಮಾಡುತ್ತಾನೆ ಎಂದಿದ್ದಾರೆ.

ಪರಿಸ್ಥಿತಿ ಬದಲಾಗುತ್ತದೆ, ಆಗ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ, ಯೋಗಿ ಅವರು ಮಠಕ್ಕೆ, ಮೋದಿಯವರು ಪರ್ವತಗಳತ್ತ ಹೋಗುತ್ತಾರೆ ನಿಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ ಎಂದು ಬೆದರಿಕೆ ಹಾಕಿದರು. ಓವೈಸಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರರು, ಓವೈಸಿಯನ್ನು ತರಾಟೆಗೆ ತೆಗೆದುಕೊಂಡರು, ದೇಶದಲ್ಲಿ ಯಾವಾಗ ಔರಂಗಜೇಬ್ ಮತ್ತು ಬಾಬರ್‌ನಂತವರು ದುಷ್ಕೃತ್ಯವೆಸಗಲು ಬರುತ್ತಾರೆ, ಮಹಾರಾಣಾ ಪ್ರತಾಪ್, ಶಿವಾಜಿ, ಯೋಗಿ ಮತ್ತು ಮೋದಿಯಂಥವರು ಹುಟ್ಟಿಕೊಳ್ಳುತ್ತಾರೆ ಎಂದರು.

ಸಭೆ ಸಮಾರಂಭ ರ್ಯಾಲಿಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಸೂಚನೆ :

ದೇಶದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಹಾವಳಿ ಹೆಚ್ಚುತ್ತಿದೆ. ಈ ನಡುವೆ ಉತ್ತರ ಪ್ರದೇಶ ಚುನಾವಣೆಯೂ ಸಮೀಪಿಸುತ್ತಿದೆ. ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಚುನಾವಣೆಯನ್ನು ಮುಂದೂಡಿ, ಪ್ರಚಾರಕ್ಕಾಗಿ ನಡೆಸುವ ಸಭೆ-ಸಮಾರಂಭ, ರ‍್ಯಾಲಿಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗ ಹಾಗೂ ಪ್ರಧಾನಿ ಮೋದಿ ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಸಲಹೆ ನೀಡಿದೆ.

ಒಂದು ವೇಳೆ ರ್ಯಾಲಿಗಳನ್ನು ನಿಲ್ಲಿಸದಿದ್ದರೆ, ಕೊರೊನಾ ಎರಡನೇ ಅಲೆಗಿಂತ ಭೀಕರವಾಗಿ ಮೂರನೇ ಅಲೆಯು ವ್ಯಾಪಕವಾಗಿ ಹರಡಿ ಆತಂಕ ಸೃಷ್ಟಿಸಬಹುದು ಎಂದು ಕೋರ್ಟ್‌ ಎಚ್ಚರಿಸಿದೆ.

ಈಗಾಗಲೇ ಹಲವು ದೇಶಗಳಲ್ಲಿ ಕೊರೊನಾ ಮೂರನೇ ಅಲೆಯ ಪರಿಣಾಮ ಉಂಟಾಗಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಜನತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸೋಂಕಿನಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚೀನಾ, ಜರ್ಮನಿ, ನೆದರ್ಲ್ಯಾಂಡ್‌ನಂಥ ದೇಶಗಳು ಭಾಗಶಃ ಲಾಕ್‌ಡೌನ್‌ ವಿಧಿಸಿವೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ

Exit mobile version