ಭಾಷಣ ಮಾಡುತ್ತಲೇ ವೇದಿಕೆ ಮೇಲೆ ಕಣ್ಣೀರಿಟ್ಟ ಅಸಾದುದ್ದೀನ್ ಓವೈಸಿ!

asaduddin owaisi

ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ(Central Government) ಮುಸ್ಲಿಮರ ವಿರುದ್ದ ಯುದ್ದ ಸಾರಿದೆ. ದೇಶದಲ್ಲಿ ನಿರಂತರವಾಗಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿವೆ.

ಇತ್ತೀಚೆಗೆ ಮಧ್ಯಪ್ರದೇಶದ(Madhyapradesh) ಖರ್ಗೋನ್ ಹಿಂಸಾಚಾರ ಮತ್ತು ದೆಹಲಿಯ(New Delhi) ಜಹಂಗೀರ್‍ಪುರಿ ಘಟನೆಗಳಲ್ಲಿ ಮುಸ್ಲಿಮರ ಮನೆಗಳನ್ನು ಅನ್ಯಾಯವಾಗಿ ಒಡೆದು ಹಾಕಲಾಗಿದೆ ಎಂದು ಎಐಎಂಐಎಂ(AIMIM) ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ(Asaduddin Owaisi)ಭಾವುಕರಾಗಿ ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು. ಸದಾ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಿದ್ದ ಅಸಾದುದ್ದೀನ್ ಓವೈಸಿ ಈಗ ಕಣ್ಣೀರು ಹಾಕಿ ಸುದ್ದಿಯಾಗಿದ್ದಾರೆ.

ವೇದಿಕೆ ಮೇಲೆ ಓವೈಸಿ ಕಣ್ಣೀರು ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಹೈದ್ರಾಬಾದ್‍ನಲ್ಲಿ ನಮಾಜ್ ಮುಗಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಮಧ್ಯಪ್ರದೇಶದ ಖಾರ್ಗೋನ್ ಮತ್ತು ದೆಹಲಿಯ ಜಹಾಂಗೀರ್‍ಪುರಿ ಘಟನೆಗಳನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಈ ಘಟನೆಗಳಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ. ಕಾರಣವಿಲ್ಲದೇ ಅವರ ಮನೆಗಳನ್ನು ಕೆಡವಲಾಗಿದೆ. ಆದರೆ ಈ ರೀತಿಯ ಘಟನೆಗಳಿಂದ ಧೈರ್ಯ ಕಳೆದುಕೊಳ್ಳಬೇಡಿ.

ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನೊಳಗೆ ಈ ಬಗ್ಗೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಇನ್ನು ಹೈದ್ರಾಬಾದ್‍ನ ಮೆಕ್ಕಾ ಮಸೀದಿಯ ‘ಜಲ್ಸೆ ಯಾಮ್-ಉಲ್-ಕುರಾನ್’ ಆವರಣದಲ್ಲಿ ಇನ್ನೊಂದು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಮುಸ್ಲಿಮರ ವಿರುದ್ದ ದ್ವೇಷ ಹರಡುವ ಕೆಲಸ ಮಾಡುತ್ತಿದೆ. ಸದ್ಯ ದೇಶದಲ್ಲಿ ಬಿಜೆಪಿ ಮುಸ್ಲಿಮರ ವಿರುದ್ದ ದ್ವೇಷದ ಬಿರುಗಾಳಿ ಎಬ್ಬಿಸಿದೆ. ಆದರೆ ದೇಶದ ಎಲ್ಲ ಮುಸ್ಲಿಮರು ಧೈರ್ಯ ಮತ್ತು ತಾಳ್ಮೆ ಕಳೆದುಕೊಳ್ಳಬಾರದು. ಸಂವಿಧಾನದ ಮೀತಿಯಲ್ಲೇ ಇದರ ವಿರುದ್ದ ಹೋರಾಟ ನಡೆಸಬೇಕು.

ಬಿಜೆಪಿಯೂ ಮುಸ್ಲಿಮರ ಮೇಲೆ ಅತಿಯಾದ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಕೂಡಲೇ ಇದನ್ನು ಬಿಜೆಪಿ ನಿಲ್ಲಿಸಬೇಕೆಂದು ಆಗ್ರಹಿಸಿದರು.

Exit mobile version