ನಿಮ್ಮದೇ ಪಕ್ಷದ ಹಿರಿಯ ನಾಯಕರು ಹಿಂದಿಯನ್ನೇ ರಾಷ್ಟ್ರಭಾಷೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು ನೆನಪಿದೆಯೇ? : ಡಾ. ಅಶ್ವಥ್ ನಾರಾಯಣ್!

ashwath narayan

ಭಾರತದ ಕೇಂದ್ರ ಗೃಹ ಸಚಿವರಾದ(Central HomeMinister) ಅಮಿತ್ ಶಾ(Amit Shah) ಅವರು ಶುಕ್ರವಾರ(Friday) ಮಾತನಾಡಿದ್ದು, ಇಂಗ್ಲೀಷ್(English) ಭಾಷೆಗೆ ಪರ್ಯಾಯವಾಗಿ ಹಿಂದಿ(Hindi) ಬಳಕೆಯಾಗಬೇಕೇ ಹೊರೆತು ಪ್ರಾದೇಶಿಕ ಭಾಷೆಗಳಲ್ಲ ಎಂದು ಹೇಳಿಕೆ ನೀಡಿದರು. ಅಮಿತ್ ಶಾ ಅವರ ಹೇಳಿಕೆ ಬೆನ್ನಲ್ಲೇ, ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ಬುಗಿಲೆದ್ದಿವೆ. ಕನ್ನಡವೂ ಪ್ರಾದೇಶಿಕ ಭಾಷೆಗೆ ಸೇರಿದ್ದು, ನಾವು ನಮ್ಮ ಭಾಷೆಗೆ ಆದ್ಯತೆ ನೀಡುತ್ತೇವೆ ವಿನಃ ಹಿಂದಿ ಭಾಷೆಗೆ ಆದ್ಯತೆ ನೀಡೋದಿಲ್ಲ, ಹಿಂದಿ ಹೇರಿಕೆಯನ್ನು ಸಹಿಸೊದಿಲ್ಲ ಎಂದು ಕೆಲ ಕನ್ನಡಪರ ಸಂಘಟನೆಗಳು ಹೇಳಿಕೆ ನೀಡಿವೆ.

ಅಮಿತ್ ಶಾ ಅವರ ಹೇಳಿಕೆ ಒಂದು ವಿವಾದಾತ್ಮಕ ಹೇಳಿಕೆ ಎಂದು ರಾಜಕೀಯ ವಲಯದಲ್ಲಿ ಒಬ್ಬರಂತೆ ಒಬ್ಬರು ತಮ್ಮದೇ ಶೈಲಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಸದ್ಯ ಈ ಕುರಿತು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯನವರು(Siddaramaiah) ಮಾತನಾಡಿದ್ದು, ಹಿಂದಿ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ಸಾಂಸ್ಕೃತಿಕ ಭಯೋತ್ಪಾದನೆ ಎಂದು ಹೇಳಿದರು.

ಸಿದ್ದರಾಮಯ್ಯನವರ ಹೇಳಿಕೆಯನ್ನು ವಿರೋಧಿಸಿದ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ್ ಅವರು, ಹೇಳಿಕೆ ತಿರುಚುವ ಕಲೆಯನ್ನು ಕರಗತ ಮಾಡಿಕೊಂಡಿರುವ ಸಿದ್ದರಾಮಯ್ಯನವರೇ, ಮಾನ್ಯ ಗೃಹ ಸಚಿವರು ಆಂಗ್ಲ ಭಾಷೆ ಬದಲು ಹಿಂದಿ ಬಳಸಬೇಕೆಂದು ಹೇಳಿದ್ದೇ ಹೊರತು ಯಾವುದೇ ಪ್ರಾದೇಶಿಕ ಭಾಷೆಯ ಬದಲಾಗಿ ಅಲ್ಲ. ಆದ್ರೆ, ನಿಮ್ಮದೇ ಪಕ್ಷದ ಹಿರಿಯ ನಾಯಕರು ಹಿಂದಿಯನ್ನೇ ರಾಷ್ಟ್ರಭಾಷೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು ನೆನಪಿದೆಯೇ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

Exit mobile version