ಏಷ್ಯನ್ ಗೆಮ್ಸ್ – 2023 : 71 ಪದಕಗಳೊಂದಿಗೆ ದಾಖಲೆ ಬರೆದ ಭಾರತ..!

China: ಏಷ್ಯನ್ ಗೆಮ್ಸ್ನಲ್ಲಿ (Asian Game) 71 ಪದಕಗಳನ್ನು ಗೆಲ್ಲುವ ಮೂಲಕ ಭಾರತ 2018ರ ಈ ಹಿಂದಿನ (Asian Games23 – Ind Record Break) ದಾಖಲೆಯನ್ನು ಬ್ರೇಕ್ ಮಾಡಿದೆ.

ಈ ಮೂಲಕ ಏಷ್ಯನ್ ಗೆಮ್ಸ್ನಲ್ಲಿ ಅತಿಹೆಚ್ಚು ಪದಕಗಳಿಸಿದ (Asian Games23 – Ind Record Break) ನೂತನ ದಾಖಲೆಯನ್ನು ಬರೆದಿದೆ.

2018ರಲ್ಲಿ ಇಂಡೋನೇಷ್ಯಾದಲ್ಲಿ (Indonesia) ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ಭಾರತ 16 ಚಿನ್ನ, 23 ಬೆಳ್ಳಿ, 31 ಕಂಚಿನ ಪದಕ ಸೇರಿ ಒಟ್ಟು 70 ಪದಕಗಳನ್ನು ಗೆದ್ದುಕೊಂಡಿತ್ತು. ಇಂಡೋನೇಷ್ಯಾದಲ್ಲಿ ಮಾಡಿದ್ದ

ಸಾಧನೆಯೇ ಇಲ್ಲಿಯವರೆಗೆ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು.

ಆದರೆ ಇದೀಗ ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೆಮ್ಸ್ನಲ್ಲಿ ಭಾರತ ಇಂದು ಈ ಗಡಿಯನ್ನು ದಾಟಿದ್ದು ಇನ್ನೂ 4 ದಿನ ಕ್ರೀಡಾಕೂಟ ನಡೆಯಲಿರುವ ಕಾರಣ ಇನ್ನೂ ಹಲವು ಪದಕಗಳು ಭಾರತಕ್ಕೆ ಬರುವ

ನಿರೀಕ್ಷೆಯಿದೆ. ಹೀಗಾಗಿ 71ಕ್ಕೂ ಹೆಚ್ಚು ಪದಕಗೊಂದಿಗೆ ಭಾರತ ಹೊಸ ದಾಖಲೆಯನ್ನು ಬರೆಯಲಿದೆ.

ಪ್ರಸ್ತುತ ಭಾರತ 16 ಚಿನ್ನ, 26 ಬೆಳ್ಳಿ, 29 ಕಂಚಿನ ಪದಕ ಸೇರಿ ಒಟ್ಟು 71 ಪದಕಗಳನ್ನು ಗೆದ್ದಿದೆ. ಪದಕ ಪಟ್ಟಿಯಲ್ಲಿ ಚೀನಾ, ಜಪಾನ್ (Japan), ದಕ್ಷಿಣ ಕೊರಿಯಾದ ನಂತರ 4ನೇ ಸ್ಥಾನದಲ್ಲಿ ಭಾರತ

ಮುಂದುವರಿದಿದೆ. 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆದಿತ್ತು.

ಸದ್ಯ ಚೀನಾ 164 ಚಿನ್ನ, 90 ಬೆಳ್ಳಿ, 46 ಕಂಚು ಸೇರಿ 300 ಪದಕ ಗೆಲ್ಲುವ ಮೂಲಕ 1ನೇ ಸ್ಥಾನ ಪಡೆದರೆ 33 ಚಿನ್ನ, 48 ಬೆಳ್ಳಿ, 50 ಕಂಚು ಸೇರಿ 131 ಪದಕ ಗೆದ್ದಿರುವ ಜಪಾನ್ 2ನೇ ಸ್ಥಾನದಲ್ಲಿದೆ.

32 ಚಿನ್ನ, 43 ಬೆಳ್ಳಿ, 65 ಕಂಚಿನ ಪದಕ ಸೇರಿ ಒಟ್ಟು 140 ಪದಕ ಗೆದ್ದಿರುವ ದಕ್ಷಿಣ ಕೊರಿಯಾ 3ನೇ ಸ್ಥಾನದಲ್ಲಿ ಮುಂದುವರಿದಿದೆ.

ಇದನ್ನು ಓದಿ: ಇಸ್ರೇಲ್ ಗಾಜಾ ಬಾಂಬ್ ದಾಳಿಯನ್ನು ಕೊನೆಗೊಳಿಸದಿದ್ದರೆ, ಯುದ್ಧವು ಇತರೆಡೆ ವಿಸ್ತರಣೆಯಾಗಬಹುದು – ಇರಾನ್

Exit mobile version