ಅಸ್ಸಾಂ ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ 100 ರೂ. ಪ್ರೋತ್ಸಾಹ ಧನ

ಬೆಂಗಳೂರು, ಜ. 06:‌ ಅಸ್ಸಾಂ ಸರ್ಕಾರ ಹೆಣ್ಣು ಮಕ್ಕಳ ವಿಷಯದಲ್ಲಿ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದ್ದು, ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಪ್ರತಿದಿನ ನೂರು ರೂಪಾಯಿ ನೀಡಲು ಯೋಚಿಸಿದೆ. ಇಲ್ಲಿನ ಶಿಕ್ಷಣ ಸಚಿವರು, ಪ್ರತಿದಿನ ಶಾಲೆಗೆ ಬರುವ ಬಾಲಕಿಯರಿಗೆ ಸರ್ಕಾರ ದಿನಕ್ಕೆ 100 ರೂಪಾಯಿ ನೀಡುತ್ತೆ ಎಂದು ಘೋಷಿಸಿದ್ದಾರೆ.

ಜನವರಿ ಅಂತ್ಯದಿಂದ ಸರ್ಕಾರವು ಪ್ರತಿ ಪದವೀಧರ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 1500 ರಿಂದ 2000 ರೂಪಾಯಿಗಳನ್ನ ವರ್ಗಾಯಿಸುತ್ತಿದೆ. ಈ ಹಣದಿಂದ, ವಿದ್ಯಾರ್ಥಿಗಳು ತಮ್ಮ ಓದುವಿಕೆಗೆ ಸಂಬಂಧಿಸಿದ ವಸ್ತುಗಳನ್ನ ಖರೀದಿಸಲು ಸಾಧ್ಯವಾಗುತ್ತೆ ಎಂದು ಈ ರಾಜ್ಯದ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ರಾಜ್ಯದಲ್ಲಿ ಬಾಲಕಿಯರಿಗೆ ದ್ವಿಚಕ್ರ ವಾಹನಗಳನ್ನ ನೀಡುವ ಯೋಜನೆಯನ್ನ ಕೂಡಾ ಸರ್ಕಾರ ಮುಂದುವರಿಸಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದು, ಪ್ರಥಮ ದರ್ಜೆಯಲ್ಲಿ ಕೇವಲ ಒಂದು ಲಕ್ಷ ವಿದ್ಯಾರ್ಥಿಗಳು ಮಧ್ಯಂತರದಲ್ಲಿ ಉತ್ತೀರ್ಣರಾಗಿದ್ದರೂ ಸಹ, 2020 ರಲ್ಲಿ 22,245 ವಿದ್ಯಾರ್ಥಿಗಳು ಪ್ರಥಮ ದರ್ಜೆ ಇಂಟರ್ ಉತ್ತೀರ್ಣರಾಗಿದ್ದಾರೆ ಎಂದು ಅವರುತಿಳಿಸಿದ್ದಾರೆ. ಈ ಬಾಲಕಿಯರಿಗೆ ಬೈಕ್‌ ನೀಡಲು ಸರ್ಕಾರ 144.30 ಕೋಟಿ ರೂ. ಬಿಡುಗಡೆ ಮಾಡಿದ್ದಾಗೆ ತಿಳಿಸಿದ್ದಾರೆ.

ಮುಖಮಂತ್ರಿ ಕನ್ಯಾ ಉತ್ತರ ಯೋಜನೆ 2020, ಸರ್ಕಾರದ  ಈ ಕಾರ್ಯಕ್ರಮವೊಂದರಲ್ಲಿ ಆನ್‌ಲೈನ್ ನೋಂದಣಿ, ಉದ್ದೇಶ, ಅರ್ಹತೆ ಮತ್ತು ಪ್ರಯೋಜನಗಳನ್ನ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು. ಈ ಕಾರ್ಯಕ್ರಮದಲ್ಲಿ, ಕಳೆದ ವರ್ಷ, ಪ್ರಥಮ ದರ್ಜೆ ಅಂತರದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಕೂಟಿಗಳನ್ನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ 948 ಬಾಲಕಿಯರಿಗೆ ಸ್ಕೂಟಿ ನೀಡಲಾಗಿತ್ತು.  ಫೆಬ್ರವರಿಯಲ್ಲಿ 15000 ಕ್ಕೂ ಹೆಚ್ಚು ಬಾಲಕಿಯರಿಗೆ ಸ್ಕೂಟಿ ನೀಡಲಾಗುವುದು. ಹೆಣ್ಣು ಮಕ್ಕಳ ಶಿಕ್ಷಣವನ್ನ ಉತ್ತೇಜಿಸುವ ದೃಷ್ಠಿಯಲ್ಲಿ ಈ ರೀತಿಯ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಅಸ್ಸಾಂ.

Exit mobile version