ನಾಳೆ 4 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿಗಾಗಿ ವೀಕ್ಷಿಸಿ ವಿಜಯಟೈಮ್ಸ್

ಈಗಾಗಲೇ ಪಂಚರಾಜ್ಯಗಳ ಚುನಾವಣೆಯ (Five State Election) ಮತದಾನ ಮುಗಿದಿದ್ದು, (Assembly Election Result 2023) ಲೋಕಸಭೆ ಚುನಾವಣೆಯ ಹಣೆಬರಹ ನಿರ್ಧರಿಸಲು

‘ಪಂಚರಾಜ್ಯ ಫಲಿತಾಂಶ’ ಸಿದ್ಧವಾಗಿದೆ. ಇನ್ನು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ (BJP) ವರ್ಸಸ್​ ಕಾಂಗ್ರೆಸ್ ಮಧ್ಯೆ ಅಖಾಡ ರಂಗೇರಿದೆ. ಗೆಲುವೊಂದೇ ಏಕೈಕ ಮಂತ್ರ ಎಂದು

ಮುನ್ನುಗ್ಗುತ್ತಿರುವ 2 ಪಕ್ಷಗಳಿಗೆ ಡಿಸೆಂಬರ್ (December) 3ರ ಭಾನುವಾರ ಅಂತಿಮ ಫಲಿತಾಂಶ ಹೊರಬೀಳಲಿದೆ.

ಡಿಸೆಂಬರ್ 3 ರಂದು ಅಂದರೆ ನಾಳೆ (ಡಿಸೆಂಬರ್ 02) ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಇದರ ನಡುವೆ ಮಿಜೋರಾಂನಲ್ಲಿ ಮತ ಎಣಿಕೆ ಕಾರ್ಯ ಒಂದು ದಿನಕ್ಕೆ ಮುಂದೂಡಲಾಗಿದೆ.

ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 4 ಕ್ಕೆ ಮತ ಎಣಿಕೆ ಕಾರ್ಯ ನಡೆಸುವುದಾಗಿ ಚುನಾವಣಾ ಆಯೋಗವು ಘೋಷಣೆ ಮಾಡಿದೆ.

ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆಯಿಂದಲೇ ‘ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ (Rajasthan, Madhya Pradesh, Chhattisgarh, Telangana)ವಿಧಾನಸಭೆ

ಚುನಾವಣೆಯ ಮತ ಎಣಿಕೆ ಕಾರ್ಯ ಶುರುವಾಗಲಿದ್ದು, ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ವಿಜಯಟೈಮ್ಸ್ (Vijayatimes) ನೀಡಲಿದೆ. ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆ

ಫಲಿತಾಂಶಗಳು ಮುಂದಿನ ಚುನಾವಣೆಗಳ ಮೇಲೆ ಪ್ರಭಾವ ಬೀರಲಿದ್ದು, ಈ ಫಲಿತಾಂಶವು ಸದ್ಯಕ್ಕೆ ಆಡಳಿತದಲ್ಲಿರುವ ಬಿಜೆಪಿ, ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ (Congress) ಮತ್ತು ವಿವಿಧ

ಪ್ರಾದೇಶಿಕ ಪಕ್ಷಗಳಿಗೆ (Assembly Election Result 2023) ಮಹತ್ವದ ಘಟ್ಟವಾಗಿದೆ.

ಇನ್ನು 4 ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿರುವುದರಿಂದ. ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮತ ಎಣಿಕಾ

ಕೇಂದ್ರಗಳ ಸುತ್ತಮುತ್ತ ಹೆಚ್ಚುವರಿ ಬಿಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮಿಜೋರಾಂ (Mizoram) ಮತ ಎಣಿಕೆ ಮುಂದೂಡಿದ್ಯಾಕೆ?
ಡಿಸೆಂಬರ್ 3 ರಂದು ಭಾನುವಾರ ಆಗಿದ್ದು, ಕ್ರಿಶ್ಚಿಯನ್ನರ ಪವಿತ್ರ ದಿನವಾಗಿದೆ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಎನ್‌ಜಿಒ ಸಮನ್ವಯ ಸಮಿತಿ ಪ್ರತಿಭಟನೆಗಳನ್ನು ನಡೆಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು

ದಿನಾಂಕವನ್ನು ಪರಿಷ್ಕರಿಸಿದ್ದು, ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 4 ಕ್ಕೆ ಮತ ಎಣಿಕೆ ಕಾರ್ಯ ನಡೆಸುವುದಾಗಿ ತಿಳಿಸಿದೆ. ನವೆಂಬರ್ 7 ರಂದು ಮಿಜೊರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ

ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಇದೀಗ ಚುನಾವಣಾ ಫಲಿತಾಂಶದ ದಿನಾಂಕ ಬದಲಾವಣೆ ಆಗಿದೆ. ಸರ್ಕಾರ ರಚನೆಗೆ 21 ಮ್ಯಾಜಿಕ್ ನಂಬರ್ (Magic Number) ಆಗಿದೆ.

ಇದನ್ನು ಓದಿ: ಪೊಕ್ಸೊ ಪ್ರಕರಣ: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 11 ತಿಂಗಳಲ್ಲಿ 171 ಪೊಕ್ಸೊ ಪ್ರಕರಣ ದಾಖಲೆ

Exit mobile version