ಔಷಧೀಯ ದೈತ್ಯ ಅಸ್ಟ್ರಾಜೆನೆಕಾದ (AstraZeneca) ಕೋವಿಡ್-19 ಲಸಿಕೆ ಅಪರೂಪದ ಮತ್ತು ಅಪಾಯಕಾರಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಕಂಪನಿಯು ಒಪ್ಪಿಕೊಂಡ ನಂತರ ಜಾಗತಿಕವಾಗಿ ಹಿಂತೆಗೆದುಕೊಳ್ಳಲಾಗುತ್ತಿದೆ. ಆದರೆ, ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಗುತ್ತಿದೆ ಎಂದು ಫಾರ್ಮಾ ತಿಳಿಸಿದೆ. ಲಸಿಕೆಯನ್ನು ಇನ್ನು ಮುಂದೆ ತಯಾರಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

ಬ್ರಿಟಿಷ್ ಹೈಕೋರ್ಟ್ನಲ್ಲಿ (British Highcourt) ಸಲ್ಲಿಸಿದ ದಾಖಲೆಗಳ ಪ್ರಕಾರ, ಕಂಪನಿಯು ತನ್ನ ಕೊರೊನಾ ಲಸಿಕೆ ಥ್ರಂಬೋಸಿಸ್, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು.ಇದು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ (Heart Attack) ಕಾರಣವಾಗಬಹುದು ಎಂದು ಹೇಳಿತ್ತು.
ಅಸ್ಟ್ರಾಜೆನೆಕಾ ಸ್ವೀಡಿಶ್ ಬಹುರಾಷ್ಟ್ರೀಯ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಕೇಂಬ್ರಿಡ್ಜ್ ಬಯೋಮೆಡಿಕಲ್ ಕ್ಯಾಂಪಸ್ನಲ್ಲಿ (Cambridge Biomedical Campus) ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ತನ್ನ ಕೋವಿಡ್ ಲಸಿಕೆಗಳನ್ನು (Covid vaccines) ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಂದ ಹಿಂಪಡೆಯುತ್ತಿದೆ. ಹೆಚ್ಚುವರಿಯಾಗಿ ಇದು ಯುರೋಪ್ನಲ್ಲಿ (Europe) ಮಾರ್ಕೆಟಿಂಗ್ ಅನುಮೋದನೆಯನ್ನು ಹಿಂಪಡೆಯಲು ಯೋಜಿಸಿದೆ. ರಕ್ತ ಹೆಪ್ಪುಗಟ್ಟುವಿಕೆ (Blood clotting) ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಗೆ (blood platelet count) ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ವ್ಯಾಕ್ಸೆವ್ರಿಯಾ ಜಾಗತಿಕ ಪರಿಶೀಲನೆಯಲ್ಲಿದೆ.

ಫೆಬ್ರವರಿಯಲ್ಲಿ ಹೈಕೋರ್ಟ್ಗೆ (High Court) ಸಲ್ಲಿಸಿದ ನ್ಯಾಯಾಲಯದ ದಾಖಲೆಗಳಲ್ಲಿ, ಲಸಿಕೆ ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್ಗೆ (TTS) ಕಾರಣವಾಗಬಹುದು ಎಂದು ಅಸ್ಟ್ರಾಜೆನೆಕಾ ಒಪ್ಪಿಕೊಂಡಿತು. ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವಲ್ಲಿ ವ್ಯಾಕ್ಸೆವ್ರಿಯಾ (Waxevria) ವಹಿಸಿದ ಪಾತ್ರದ ಬಗ್ಗೆ ನಾವು ನಂಬಲಾಗದಷ್ಟು ಹೆಮ್ಮೆಪಡುತ್ತೇವೆ.
ಅಂದಾಜಿನ ಪ್ರಕಾರ, ಬಳಕೆಯ ಮೊದಲ ವರ್ಷದಲ್ಲಿಯೇ 6.5 ಮಿಲಿಯನ್ಗಿಂತಲೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ ಮತ್ತು ಜಾಗತಿಕವಾಗಿ ಮೂರು ಬಿಲಿಯನ್ ಡೋಸ್ಗಳನ್ನು (Doses) ಪೂರೈಸಲಾಗಿದೆ. ನಮ್ಮ ಪ್ರಯತ್ನಗಳನ್ನು ಪ್ರಪಂಚದಾದ್ಯಂತದ ಸರ್ಕಾರಗಳು (Government) ಗುರುತಿಸಿವೆ ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಅಸ್ಟ್ರಾಜೆನೆಕಾ ಸಂಸ್ಥೆ ತಿಳಿಸಿದೆ.