ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಹರ್ಮಿಲನ್‌ ಕೌರ್

ತೆಲಂಗಾಣ ಸೆ 17 : ವಾರಂಗಲ್‌ ನಲ್ಲಿ ನಡೆಯುತ್ತಿರುವ 60ನೇ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ ಹರ್ಮಿಲನ್‌ ಕೌರ್‌ ಬೈನ್ಸ್‌ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

ಈ ಪದಕದೊಂದಿಗೆ 19 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದು, ಹೊಸ ದಾಖಲೆಯನ್ನು ರಚಿಸಿದ್ದಾರೆ ಗುರುವಾರ ನಡೆದ ಸ್ಪರ್ಧೆಯಲ್ಲಿ 19 ವರ್ಷದ ಕೌರ್‌ 4:05.39 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದರೊಂದಿಗೆ 2002ರ ಏಷ್ಯನ್‌ ಗೇಮ್ಸ್‌ನಲ್ಲಿ ಸುನಿತಾ ರಾಣಿ ನಿರ್ಮಿಸಿದ್ದ 4:06.03 ಸೆಕೆಂಡ್‌ ದಾಖಲೆಯನ್ನು ಮುರಿದರು. ಇದು ಮಾತ್ರವಲ್ಲದೆ 2006ರಲ್ಲಿ ಓಪಿ ಜೈಶಾ4:11.83 ಸೆಕೆಂಡ್‌ ನಿರ್ಮಿಸಿದ್ದ ದಾಖಲೆಯನ್ನು ಕೂಡ ಕೌರ್‌ ಮುರಿದರು. ಆದರೆ 4:04.20 ನಿಮಿಷದಲ್ಲಿ ಗುರಿ ತಲುಪಿದರೆ ಇವರು 2022ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಬುಹುದಾಗಿತ್ತು ಆದರೆ ಕೌರ ಅದರಲ್ಲಿ ವಿಫಲರಾದರು.

Exit mobile version