ನಟ ದರ್ಶನ್‌ಗೆ ಅವರ ಪ್ರಾಣಿ ಪ್ರೇಮದಿಂದಾಗಿ ಮತ್ತೊಂದು ಕಂಟಕ ಸುತ್ತಿಕೊಂಡಿದೆ. ಅವರ ಮೈಸೂರಿನ (attack on Darshans farm house) ತಿ. ನರಸೀಪುರ ರಸ್ತೆಯ ಕೆಂಪಯ್ಯನ ಹುಂಡಿ ಬಳಿ ಇರುವ ದರ್ಶನ್ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳು ನಿನ್ನೆ ತಡ ರಾತ್ರಿ ದಾಳಿ ಮಾಡಿದ್ದಾರೆ.

ಪರವಾನಗಿ ಇಲ್ಲದೆ ಸಾಕುತ್ತಿದ್ದ 4 ಪಕ್ಷಿಗಳಾದ ಬಾರ್ ಹೆಡೆಡ್ ಗೂಸ್ ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪರವಾನಗಿ ಇಲ್ಲದೆ ಪ್ರಾಣಿಗಳನ್ನು ಸಾಕಿದ್ದಕ್ಕಾಗಿ ಅರಣ್ಯಾಧಿಕಾರಿಗಳು ಪ್ರಕರಣವನ್ನೂ ದಾಖಲಿಸಿದ್ದಾರೆ.
ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ತೋಟದ ಮನೆಯಲ್ಲಿ ಬಗೆ ಬಗೆ ಪ್ರಾಣಿ ಪಕ್ಷಿಗಳಿವೆ ಅನ್ನೋದು ತೆರೆದ ರಹಸ್ಯವಾಗಿತ್ತು. ಈ ಬಗ್ಗೆ ಸಾಕಷ್ಟು ಟಿ.ವಿ ಶೋಗಳಲ್ಲೂ ಅವರು ಈ ಬಗ್ಗೆ ಹೇಳಿಕೊಂಡಿದ್ದರು. ಆದ್ರೆ ಇವರು ಈ ಪ್ರಾಣಿಗಳನ್ನು ಸಾಕಲು ಪರವಾನಗಿ ಪಡೆದಿಲ್ಲ ಅನ್ನೋ ಅಂಶ ಈ ದಾಳಿಯಿಂದ ಗೊತ್ತಾಗಿದೆ.

ದರ್ಶನ್ ಅವರು ತಮ್ಮ ತೋಟದ ಮನೆಯಲ್ಲಿ ಹೈನುಗಾರಿಕೆ ಮಾಡುತ್ತಿದ್ದಾರೆ, ಅಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿದ್ದಾರೆ. ನಾನಾ (attack on Darshans farm house) ಬಗೆಯ ನಾಯಿಗಳನ್ನು ಸಾಕಿಕೊಂಡಿದ್ದಾರೆ. ಅವರು ತಮ್ಮ ಬಿಡುವಿನ ಸಮಯವನ್ನು ತೋಟದ ಮನೆಯಲ್ಲಿ ಕಳೆಯುತ್ತಾರೆ.
ಇದನ್ನು ಓದಿ : ದೇವಾಲಯಗಳಿಗೆ ದೇಣಿಗೆ ನೀಡಬೇಡಿ ಅದನ್ನೇ ಜನರ ಕಲ್ಯಾಣಕ್ಕಾಗಿ ಬಳಕೆ ಮಾಡಿ : ಪೇಜಾವರ ಶ್ರೀ