ಆಗಸ್ಟ್ 14 ‘ವಿಭಜನೆಯ ಭಯಾನಕ ನೆನಪಿನ ದಿನ’: ಫ್ರಧಾನಿ

ನವದೆಹಲಿ, ಆ. 14: ಆಗಸ್ಟ್ 14 ಅನ್ನು ‘ವಿಭಜನೆಯ ಭಯಾನಕ ನೆನಪಿನ ದಿನ’ವೆಂದು ಪರಿಗಣಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಭಜನೆಯ ನೋವನ್ನು ಮರೆಯಲಾಗದು. ದ್ವೇಷ ಮತ್ತು ಹಿಂಸಾಚಾರದಿಂದಾಗಿ ನಮ್ಮ ಲಕ್ಷಾಂತರ ಸಹೋದರ ಸಹೋದರಿಯರು ಸ್ಥಳಾಂತರಗೊಂಡಿದ್ದರು. ಅನೇಕರು ಪ್ರಾಣ ಕಳೆದುಕೊಂಡಿದ್ದರು. ನಮ್ಮ ಜನರು ಪಟ್ಟ ಪಾಡುಗಳು ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಪರಿಗಣಿಸಲಾಗುವುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ವಿಭಜನೆಯ ಭಯಾನಕ ನೆನಪಿನ ದಿನ’ವು ಸಾಮಾಜಿಕ ವಿಭಜನೆ, ಅಸಾಮರಸ್ಯದ ವಿಷವನ್ನು ತೆಗೆದುಹಾಕುವ ಅಗತ್ಯವನ್ನು ನೆನಪಿಸುತ್ತದೆ. ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣದ ಮನೋಭಾವವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಆಶಿಸಿದ್ದಾರೆ.

Exit mobile version