ಅವತಾರ್-2 ಟ್ರೈಲರ್ ವೀಕ್ಷಿಸಿ ಥ್ರೀಲ್ ಆದ ಪ್ರೇಕ್ಷಕರು, ಸಿನಿಮಾ ಬಿಡುಗಡೆಯತ್ತ ಕಾತುರ!

Avathar 2

ಒಂದು ದೊಡ್ಡ ಮಟ್ಟದ ಸೆನ್ಸೇಷನ್ನ್ನೇ ಕ್ರಿಯೇಟ್ ಮಾಡಿದ್ದ ಹಾಲಿವುಡ್(Hollywood) ‘ಅವತಾರ್’(Avathar) ಸಿನಿಮಾದ ಸೀಕ್ವೆಲ್ ಇದೇ ಡಿಸೆಂಬರ್ ನಲ್ಲಿ ತೆರೆ ಕಾಣಲು ಸಜ್ಜಾಗಿದೆ.

ಅವತಾರ್ ‘ದಿ ವೇ ಆಫ್ ವಾಟರ್’(Avathar- The Way Of Water) ಎನ್ನುವ ಟ್ಯಾಗ್ ಲೈನ್ ಮೂಲಕ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಟ್ರೈಲರ್ ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ಕೇವಲ ಟ್ರೈಲರ್ ನಲ್ಲಿನ ದೃಶ್ಯ ವೈಭವ ನೋಡಿಯೇ ಪ್ರೇಕ್ಷಕರು ಬೆಕ್ಕಸ ಬೆರಗಾಗಿದ್ದಾರೆ. 2009 ರಲ್ಲಿ ಅವತಾರ್ ಮೊದಲ ಭಾಗ ರಿಲೀಸ್ ಆಗಿತ್ತು. ಅದೆಷ್ಟು ದೊಡ್ಡಮಟ್ಟದಲ್ಲಿ ಆ ಸಿನಿಮಾ ಸಕ್ಸಸ್ ಆಗಿತ್ತು ಎಂದರೆ, ಇದುವರೆಗೂ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾದಷ್ಟು ಕಲೆಕ್ಷನ್ ಯಾವ ಚಿತ್ರವೂ ಮಾಡಿರಲಿಲ್ಲ ಎನ್ನುವ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿತ್ತು.

ಅವತಾರ್ ‘ದಿ ವೇ ಆಫ್ ವಾಟರ್’ ಸೀಕ್ವೆಲ್ ಕೂಡ ಅದೇ ಮಟ್ಟದ ಯಶಸ್ಸನ್ನು ಸಾಧಿಸುವ ಸೂಚನೆಯನ್ನು ಸಿನಿಮಾದ ಟ್ರೈಲರ್ ನೀಡಿದೆ. ವಿಶ್ವಮಟ್ಟದಲ್ಲೇ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಈ ಸಿನಿಮಾದಲ್ಲಿ ಸ್ಯಾಂಮ್ ವರ್ಥಿಂಗ್ಟನ್, ಜೋಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಇವರ ಅಮೋಘ ಅಭಿನಯ ಈ ಚಿತ್ರದ ಪ್ಲಸ್ ಪಾಯಿಂಟ್ ಎಂದರೂ ತಪ್ಪಿಲ್ಲ.
ಜೇಮ್ಸ್‌ ಕ್ಯಾಮರಾನ್‌ ನಿರ್ದೇಶನದ ‘ಅವತಾರ್ : ದಿ ವೇ ಆಫ್‌ ವಾಟರ್‌’ ಟೀಸರ್‌ ಸಿನಿಪ್ರಿಯರನ್ನು ಮರುಳು ಮಾಡಿರುವುದರಲ್ಲಿ ಎರಡನೇ ಮಾತಿಲ್ಲ.

ಭೂಮಿಯಂತೆ ಕಾಣುವ, ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ ‘ನಾವಿ’ ಜೀವಿಗಳ ಕುಟುಂಬದ ಬಗ್ಗೆ ಇಲ್ಲಿ ಮತ್ತಷ್ಟು ವಿಸ್ತ್ರತವಾಗಿ ವರ್ಣಿಸಲಾಗಿದೆ. ನಾವಿ ಜೀವಿಗಳ ಜೊತೆ ವಿಶೇಷವಾದ ಆತ್ಮೀಯತೆ ಹೊಂದಿರುವ ಹಾರುವ ಜೀವಿಗಳ ಜೊತೆಗೆ, ಈಜುವ ವಿಚಿತ್ರ ಜಲಚರಗಳ ದರ್ಶನವೂ ಪ್ರೇಕ್ಷಕರನ್ನು ಸೆಳೆಯುತ್ತದೆ. ನೀರಿನೊಳಗೆ, ಮೇಲೆ ಈ ಸಿನಿಮಾದ ಮುಖ್ಯ ಕಥಾವಸ್ತು ಹಾಗೂ ಆಕರ್ಷಣೆ ಎಂಬಂತೆ ಭಾಸವಾಗುತ್ತದೆ. ಹಲವಾರು ಭಾರತೀಯ ಭಾಷೆಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ.

ಕನ್ನಡಿಗರಿಗೆ ಒಂದು ಖುಷಿಯ ಸಂಗತಿಯಿದೆ, ಅದೇನಂದ್ರೆ ಈ ಬಾರಿ ಅವತಾರ್ ಚಿತ್ರವನ್ನು ಕನ್ನಡ ಭಾಷೆಯಲ್ಲೇ ನೋಡಬಹುದು ಎಂದು ಚಿತ್ರತಂಡ ಹೇಳಿದೆ. ಪ್ರೇಕ್ಷಕರನ್ನು ಸತತವಾಗಿ 13 ವರ್ಷಗಳ ಕಾಲ ಕಾಯಿಸಿದ ಬಳಿಕ ಅವತಾರ್ ಸರಣಿ ಮೂಡಿ ಬಂದಿದ್ದು, ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಒಟ್ಟು ಐದು ಸರಣಿಲ್ಲಿ ಈ ಸಿನಿಮಾ ತಯಾರಾಗಲಿದೆ ಎನ್ನುವ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಎರಡನೇ ಭಾಗ 2022 ಡಿಸೆಂಬರ್ ನಲ್ಲಿ ಬಿಡುಗಡೆಯಾದರೆ,

3ನೇ ಸರಣಿ 2024 ಡಿಸೆಂಬರ್ ನಲ್ಲಿ, 4ನೇ ಸರಣಿ 2026 ಡಿಸೆಂಬರ್ ಹಾಗೂ 5ನೇ ಸರಣಿಯು 2028 ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ ಎನ್ನುವ ಮಾಹಿತಿಯನ್ನು ಚಿತ್ರದ ನಿರ್ಮಾಪಕರು ನೀಡಿದ್ದಾರೆ. ಅವತಾರ್ ಸಿಕ್ವೆನ್ಸ್ ಬಗ್ಗೆ ಅಭಿಮಾನಿಗಳಿಗಂತೂ ಭಾರಿ ಕುತೂಹಲ ಮೂಡಿದೆ ಎಂದೇ ಹೇಳಬಹುದು.

Exit mobile version