ಸಿಲಿಕಾನ್ ಸಿಟಿ ಜನರೇ ಜುಲೈ 17, 18ಕ್ಕೆ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ:

Dr Ambedkar Veedhi

ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷ ನಾಯಕರ ಸಭೆಗೆ ಬಿಜೆಪಿ ಹೊರತುಪಡಿಸಿ, (avoid certain roads Bangalore) ದೇಶದ ವಿವಿಧ ಪಕ್ಷಗಳ ಪ್ರಮುಖ ನಾಯಕರು

ಇಂದು ಆಗಮಿಸಿದ್ದಾರೆ. ಸುಮಾರು 26 ಪ್ರಮುಖ ಪಕ್ಷಗಳ ನಾಯಕರು ಭಾಗವಹಿಸುವ ಸಾಧ್ಯತೆ ಇರಯವುದರಿಂದ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ರಸ್ತೆಗಳಲ್ಲಿ ಸಂಚರಿಸದಂತೆ

ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ. ಇದರಂತೆ 7 ರಸ್ತೆಗಳಲ್ಲಿ ಇಂದು ಮತ್ತು ನಾಳೆ ಸಂಚಾರ ನಿರ್ಬಂಧ (avoid certain roads Bangalore) ಮಾಡಲಾಗಿದೆ.

ಇದನ್ನು ಓದಿ: ಬಿಜೆಪಿ ಜೊತೆಗಿನ ಮೈತ್ರಿಯಿಂದ ಕರ್ನಾಟಕದಲ್ಲಿ ಜೆಡಿಎಸ್‌ ಭವಿಷ್ಯ ಅಂತ್ಯ: ದಿನೇಶ್‌ ಗುಂಡೂರಾವ್‌

ಇಂದು‌ ಮತ್ತು ನಾಳೆ, ನಡೆಯುವ ಕಾಂಗ್ರೆಸ್ ನೇತೃತ್ವದ ವಿಪಕ್ಷ ನಾಯಕರ ಸಭೆ ಹಿನ್ನಲೆ ಟ್ರಾಫಿಕ್ ಕುರಿತ ಮಾರ್ಗಸೂಚಿಯನ್ನು ಬೆಂಗಳೂರು ನಗರ ಪೊಲೀಸ್ ಬಿಡುಗಡೆ ಮಾಡಿದೆ. ಜೊತೆಗೆ

ಈ ಎರಡು ದಿನದಂದು ಸಂಚಾರ ನಿರ್ಬಂಧ ಇರುವ ರಸ್ತೆಗಳ ಪಟ್ಟಿ ಹಾಕಿದ್ದು, ಓಡಾಟ ನಡೆಸದೆ, ಟ್ರಾಫಿಕ್ ಪೊಲೀಸರ ಜೊತೆ ಕೈಜೋಡಿಸಲು ಮನವಿ ಮಾಡಿದೆ.

ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಹಿನ್ನಲೆ ಬೆಂಗಳೂರಿಗೆ ಗಣ್ಯರು, ಹಾಗೂ ಅತಿಗಣ್ಯರು ಆಗಮಿಸುತ್ತಿರುವ ಕಾರಣ ಜುಲೈ 17 ಸೋಮವಾರ ಹಾಗೂ ಜುಲೈ 18 ಮಂಗಳವಾರದಂದು ಸುಲಭವಾಗಿ

ಸಂಚರಿಸಲು ಈ ರಸ್ತೆಗಳನ್ನು ಬಳಸದಂತೆ ಸೂಚನೆ ನೀಡಿದೆ‌.

ನಿರ್ಬಂಧಿತ ರಸ್ತೆಗಳು:
೧. ಡಾ ಬಿ.ಆರ್ ಅಂಬೇಡ್ಕರ್ ರಸ್ತೆ
೨. ಕಬ್ಬನ್ ರಸ್ತೆ
೩. ರಾಜ ಭವನ ರಸ್ತೆ
೪. ಪ್ಯಾಲೇಸ್ ರಸ್ತೆ
೫. ರೇಸ್ ಕೋರ್ಸ್ ರಸ್ತೆ
೬. ಶೇಷಾದ್ರಿ ರಸ್ತೆ
೭. ಬಳ್ಳಾರಿ ರಸ್ತೆ

ಬೆಂಗಳೂರು‌ ನಗರ ಪೊಲೀಸ್ ಮಾಡಿರುವ ಈ ಟ್ವಿಟರ್ ಖಾತೆಯ ಟ್ವೀಟ್ ಗೆ ನೆಟ್ಟಿಗರು ಗರಂ ಆಗಿದ್ದು, ಆಡಳಿತ ಪಕ್ಷವನ್ನು ಟೀಕೆ ಮಾಡಿ ಟ್ವಿಟಿಸಿದ್ದಾರೆ. ಯಾರು ಯಾರೋ ಬಂದ್ರೆ ನಮಗ್ಯಾಕೆ ರಿಸ್ಟ್ರಿಕ್ಷನ್ನು?

VIP, VVIP ಗಳಿಗೆ ಸಲಾಂ ಹೊಡೆಯೋದು ಬಿಡ್ರಿ. ನಮ್ಮ ಟ್ಯಾಕ್ಸ್ , ನಮ್ಮ ರೋಡ್ , ಅವ್ರೆಲ್ಲಾ ಯಾರು ಎಂದಿದ್ದಾರೆ. ಇದೇನು ಸರ್ಕಾರದ ಪ್ರೋಗ್ರಾಮ್ ಆ ರಸ್ತೆ ಬಂದ್‌ ಮಾಡಲು ಎಂದು ಇನ್ನು ಕೆಲವರು ಟ್ವೀಟ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಿಗ್ನಲ್‌ ಫ್ರೀ ರಸ್ತೆಗಳು ಬೇಡ ಎಂದು ಟ್ವೀಟ್ ಮಾಡಿದ್ದರು. ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಾರ್ವಜನಿಕರು ಯಾವುದೇ ವಿವಿಐಪಿ, ಖಾರಿಡಾರ್

ರಸ್ತೆ ಬ್ಲಾಕ್ ಮಾಡಿ ಪಬ್ಲಿಕ್ ಗೆ ತೊಂದರೆ ಕೊಡುವುದು ಬೇಡ ಎಂದು ಆಶ್ವಾಸನೆ ಕೊಟ್ಟಿದ್ದರು. ಆದ್ರೆ ಈಗ ಈ ಆಶ್ವಾಸನೆಯೂ ಕೊಚ್ಚಿ ಹೋದ ಹಾಗಿದೆ ಎಂದು ಟೀಕಿಸಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version