ಆಯಾಸ ನಿವಾರಕ ಮಖಾನಾ ಸೀಡ್

ಕಮಲದ ಬೀಜದಲ್ಲಿದೆ ಅನೇಕ ಆರೋಗ್ಯಕಾರಿ  ಪೋಷಕಾಂಶಗಳಿವೆ. ದೇಹದ ಆಯಾಸ ಮೈಕೈ ನೋವು ಮುಂತಾದ ಎಲ್ಲಾ ತೊಂದರೆಗೆ ಕಮಲದ ಬೀಜದಲ್ಲಿದೆ ಪರಿಹಾರ. ಅನೇಕರಿಗೆ ವಯಸ್ಸಾದಂತೆ ದೇಹದಲ್ಲಿ ಶಕ್ತಿ ಕುಂದುತ್ತಾ ಹೋಗುವುದು ಸಾಮಾನ್ಯವಾಗಿದೆ. ಚರ್ಮದ ಸುಕ್ಕುಗಟ್ಟುವಿಕೆ ಮೂಳೆ ಸವೆತದಂತಹ ಅನೇಕ ತೊಂದರೆಗಳು ಕಾಡುವುದು ಸಾಮಾನ್ಯವಾಗಿದೆ.

ಮೂಳೆ ಸವೆತಕ್ಕೆ ಮುಖ್ಯ ಕಾರಣ ಕ್ಯಾಲ್ಸಿಯಂ ಕೊರತೆಯಾಗಿದ್ದು, ಈ ವಿಟಮಿನ್  ಕಮಲದ ಬೀಜದಲ್ಲಿ ಯಥೇಷ್ಟವಾಗಿದೆ. ಇದನ್ನು ಮಕಾನಾ ಸೀಡ್ಸ್ ಎಂದೂ ಕರೆಯುತ್ತಾರೆ. ಇದರಿಂದ ಒಂದು ಜ್ಯೂಸನ್ನು ತಯಾರಿಸಿಕೊಂಡು ಕುಡಿಯಬಹುದು ಹಾಗೂ ಈ ಬೀಜವನ್ನು ಹುರಿದುಕೊಂಡೂ ತಿನ್ನಬಹುದು. ಮಕಾನಾ ಸೀಡ್‌ಅನ್ನು ಹಾಲಿನಲ್ಲಿ ಹಾಕಿ ಕುದಿಸಬೇಕು ಕುದಿಸಿ ಆರಿಸಿದ ಬಳಿಕ ಇದನ್ನು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಕುಡಿಯಬೇಕು ಆಯಾಸ ಪರಿಹಾರವಾಗುತ್ತದೆ.  ದಿನಾಲು ಕಮಲದ ಬೀಜವನ್ನು ಹಾಲಲ್ಲಿ ಹಾಕಿ ಕುಡಿಯುವುದರಿಂದ ಮೂಳೆಗಳೂ ಗಟ್ಟಿಯಾಗುತ್ತದೆ. ನೋವು ನಿವಾರಣೆಗೂ ಇದು ಸಹಾಯಕವಾಗುತ್ತದೆ.

Exit mobile version