ಆಯಾಸ ಪರಿಹಾರವಾಗಲು ಇದನ್ನು ಬಳಸಿ…

ಉಷ್ಣಕಾರಕ ದೇಹ ಇರುವವರು ಈ ಸೋರೆಕಾಯಿಯಿಂದ ಅನೇಕ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಉರಿಮೂತ್ರ ಇರುವವರಿಗೆ ಇದು ಉತ್ತಮ ಮನೆ ಮದ್ದಾಗಿದೆ. ಸೋರೆಕಾಯಿಯನ್ನು ಬೇಯಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹ ತಂಪಾಗುವುದು. ಇನ್ನು ಸೋರೆಕಾಯಿಯ ಗಂಜಿ ಮಾಡಿ ತಿನ್ನುವುದರಿಂದಲೂ ದೇಹಕ್ಕೆ ತಂಪು ಹಾಗೂ ಉಲ್ಲಾಸ ಸಿಗುತ್ತದೆ. ಅಸಿಡಿಟಿಯಾಗಿದ್ದರೆ ಸೋರೆಕಾಯಿಯ ಜ್ಯೂಸ್ ಕುಡಿಯುವುದರಿಂದ ಸರಿ ಹೋಗುವುದು.

ಬೇಸಿಗೆಯಲ್ಲಿ ಅತಿಯಾಗಿ ಬೆವರುವುದು, ಹಾಗೂ ವಿಪರೀತ ಉಷ್ಟವಾಗಿ ದೇಹ ದಣಿವಾಗಿದ್ದಾಗ ಸೋರೆಕಾಯಿಯ ಜ್ಯೂಸ್ ಗೆ ಸ್ವಲ್ಪ ಪ್ರಮಾಣದಲ್ಲಿ ಲಿಂಬೆರಸ ಸೇರಿಸಿ ಕುಡಿಯುವುದರಿಂದ ಆಯಾಸ ಪರಿಹಾರವಾಗುವುದು. ಇನ್ನು ಸೋರೆಕಾಯಿ ಪಿತ್ತನಾಶ ಮಾಡುವುದರಲ್ಲಿ ಒಳ್ಳೆಯ ಕೆಲಸ ಮಾಡುತ್ತದೆ.  ಇದರಲ್ಲಿ ನಾರಿನಾಂಶವು ಅಧಿಕವಾಗಿರುತ್ತದೆ. ಇದರಿಂದಾಗಿ ಇದು ಜೀರ್ಣಕ್ರಿಯೆಗೆ ಸಹಾಯಕವಾಗುವುದು. ದೇಹದ ಆರೋಗ್ಯ ಹೆಚ್ಚಿಸುವುದರೊಂದಿಗೆ ಇದು ತೂಕ ನಷ್ಟ ಮಾಡುವುದರಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಮಲಬದ್ಧತೆಯನ್ನು,ಹೃದಯ ಕಾಯಿಲೆಯನ್ನು,ಮೂತ್ರನಾಳದ ಸಮಸ್ಯೆಯನ್ನು  ನಿವಾರಣೆ ಮಾಡುತ್ತದೆ.

ಸೋರೆಕಾಯಿ ಹೃದಯದ ಸಮಸ್ಯೆಗೆ ಉತ್ತಮ ಆಹಾರವಾಗಿದೆ ಹಲವಾರು ಹಲವಾರು ಪೋಷಕಾಂಶಗಳನ್ನೊಳಗೊಂಡಿದೆ. ವಿಟಮಿನ್ ಎ ಮತ್ತು ಸಿ ಸೋಡಿಯಂ ಕ್ಯಾಲ್ಸಿಯಂ ವಿಟಮಿನ್ ಬಿ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ಹಲವಾರು ಕಾಯಿಲೆಗಳು ಇದರಿಂದ ವಾಸಿಯಾಗುವುದು ಆದ್ದರಿಂದ ಇದನ್ನು ಆಯುರ್ವೇಧ ಔಷದಿಗಳಲ್ಲಿ ಬಳಸುತ್ತಾರೆ.

Exit mobile version