ಹೆಸರಿಗೆ ಮಾತ್ರ ಸೇವಾ ಟ್ರಸ್ಟ್ ಸ್ಥಾಪಿಸಿ ಉದ್ಯಮ ವಿಸ್ತರಣೆ ಮಾಡಲು ಬಳಸಿಕೊಂಡ ಯೋಗ ಗುರು ರಾಮದೇವ್‌ !

New Delhi: ಕೆಲ ದಿನಗಳ ಹಿಂದಷ್ಟೇ ಜನರ ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ (Supreme Court) ಛೀಮಾರಿ ಹಾಕಿದ ಬಳಿಕ ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮದೇವ್‌ ಮತ್ತು ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಘಟನೆ ನಡೆದ ಕೆಲವೇ ದಿನಗಳ ಬಳಿಕ ಸಂಸ್ಥೆ ವಿರುದ್ಧ ಈಗ ಮತ್ತೊಂದು ಆಪಾದನೆ ಕೇಳಿ ಬರುತ್ತಿದೆ. ಹೆಸರಿಗಷ್ಟೇ ಸೇವಾ ಟ್ರಸ್ಟ್ (Seva Trust) ಸ್ಥಾಪಿಸಿ ತೆರಿಗೆ ಮುಕ್ತವಾಗಿಸಿಕೊಂಡು ಅದನ್ನು ತಮ್ಮ ಉದ್ಯಮವನ್ನು ಬೆಳೆಸುವುದಕ್ಕೆ ಬಳಸುತ್ತಿರುವುದು ಇದೀಗ ಬಯಲಾಗಿದೆ.

ಬಡ ಜನರ ಒಳಿತಿಗಾಗಿ ಆರೋಗ್ಯಕರ ಪದಾರ್ಥಗಳನ್ನು ಸೇಲ್ ಮಾಡುತ್ತೇವೆ.ಯೋಗ ಮತ್ತು ಆಯುರ್ವೇದವನ್ನು ಉತ್ತೇಜಿಸಲೆಂದೇ ಸ್ಥಾಪಿಸಿದ್ದೇವೆ ಎಂದು ಹೇಳಲಾದ ಪತಂಜಲಿ ಚಾರಿಟೇಬಲ್ ಸಂಸ್ಥೆ ಹಲವು ವರ್ಷಗಳಿಂದ ಚಾರಿಟಿಯಾಗಿ ಯಾವ ಕೆಲಸವನ್ನೂ ಮಾಡಿಲ್ಲ. ಬದಲಾಗಿ ತಮ್ಮ ವ್ಯಾಪಾರ ಕೆಲಸವನ್ನೂ ಮಾಡಿಲ್ಲ. ಬದಲಾಗಿ ತಮ್ಮ ವ್ಯಾಪಾರ ವಿಸ್ತರಣೆಗೆ ಹೋಡಿಕೆ ಮತ್ತು ಫಂಡ್ ಶೇಖರಣೆಗೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ reporters-collective.in ನಲ್ಲಿ ಎಂದು ತಪಸ್ಯಾ ಅವರ ತನಿಖಾ ವರದಿಯಿಂದ ಬಹಿರಂಗಗೊಂಡಿದೆ.

ಈ ಹಿಂದೆ ಯೋಗಕ್ಷೇಮ್ ಸಂಸ್ಥಾನ ಎಂಬ ದತ್ತಿಸಂಸ್ಥೆ ಪತಂಜಲಿ ಸ್ವಾಧೀನಪಡಿಸಿಕೊಂಡು ಪತಂಜಲಿ ಫುಡ್ಸ್ (Patanjali Foods) ಎಂದು ಬದಲಾಗಿರುವ ರುಚಿ ಸೋಯಾ ಕಂಪನಿಯಲ್ಲಿನ ಹೂಡಿಕೆಯ ಭಾರೀ ಆದಾಯದ ಮೇಲಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು ಬಳಕೆಯಾಗಿತ್ತು. ತೆರಿಗೆ ವಿನಾಯಿತಿಗಾಗಿ ಪಾಲಿಸಬೇಕಾದ ನಿಯಮಗಳನ್ನು ಪೂರೈಸದಿದ್ದರೂ ತನ್ನ ತೆರಿಗೆ ಮುಕ್ತ ಸೌಲಭ್ಯವನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಅದು ಯಶಸ್ವಿಯಾಗಿತ್ತು.

ಪರಿಸರ ಸೂಕ್ಷ್ಮ ಅರಾವಳಿ ಅರಣ್ಯ ಪ್ರದೇಶದಲ್ಲಿ ಕೂಡ ಲಾಭ ಗಳಿಕೆಗೆ ಪತಂಜಲಿ ಇದೇ ರೀತಿಯಲ್ಲಿ ವ್ಯವಹರಿಸಿತ್ತು. ಆಯುರ್ವೇದ ಔಷಧಗಳು ಮತ್ತು ಉತ್ಪನ್ನಗಳ ತಯಾರಿಕೆಗೆಂದು ಆ ಭೂಮಿಯನ್ನು ಉಲ್ಲೇಖಿಸಿದ್ದರೂ ಕೂಡ ಅದು ಬೇರೆಯೇ ವ್ಯವಹಾರಕ್ಕೆಂದೇ ಬಳಕೆ ಆಗಿತ್ತು. ಶೂನ್ಯ ಆದಾಯದ ಕಂಪನಿಗಳು, ಮಾಲಕತ್ವದ ಬಗೆಗಿನ ಅಸ್ಪಷ್ಟತೆ, ತೆರಿಗೆ ತಗ್ಗಿಸಲು ಅವಕಾಶವಾಗುವಂತೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಣ ವಿನಿಮಯ ಮಾಡಿಕೊಂಡಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್ (Congress) ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುವ ಮೂಲಕ ಪ್ರಭಾವ ಬೀರಿದ್ದ ರಾಮದೇವ್‌, ನಂತರ ಬಿಜೆಪಿ (BJP) ಸರ್ಕಾರದ ಜೊತೆ ಗುರುತಿಸಿಕೊಂಡಿದ್ದರು.ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡುವುದಕ್ಕೂ ನಿಂತರು. ತನ್ನನ್ನು ಉತ್ತಮ ಯೋಗ ಗುರು, ಆರೋಗ್ಯದಾಯಕ ಜೀವನ ಶೈಲಿ ಎಂದು ಬ್ರಾಂಡ್ ಮಾಡಿಕೊಂಡು, ತನ್ನ ಉದ್ಯಮ ಸಾಮ್ರಾಜ್ಯ ರಾಷ್ಟ್ರ ಸೇವೆಗಾಗಿ ಮತ್ತು ಅಂತರರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಡುವುದಕ್ಕಾಗಿ ಮೀಸಲು ಎಂದು ಬಿಂಬಿಸಿಕೊಂಡರು.

ಆದರೆ ಇಂಥ ದೇಶಭಕ್ತ ಸೋಗಿನ ಅವರ ಉದ್ಯಮ ಸಾಮ್ರಾಜ್ಯದಲ್ಲಿ ನಡೆಯುತ್ತಿರುವುದೆಲ್ಲ ಮೊಸವೇ ಆಗಿದೆ. ಮರಾಟ ಮಾಡುತ್ತಿರುವುದೆಲ್ಲ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳೇ ಆಗಿರುತ್ತದೆ. ಇನ್ನು ಈ ಕುರಿತಾಗಿ ಈ ಬಗ್ಗೆ ಆಚಾರ್ಯ ಬಾಲಕೃಷ್ಣ ಮತ್ತು ಯೋಗಕ್ಷೇಮ್ (Acharya Balakrishna And Yogakshem) ಸಂಸ್ಥಾನಕ್ಕೆ ಪ್ರಶ್ನೆಗಳನ್ನು ಕಳಿಸಿದರೂ ಪ್ರತಿಕ್ರಿಯೆ ಬಂದಿಲ್ಲ ಎಂದು reporters-collective.in ಹೇಳಿರುತ್ತದೆ.

Exit mobile version