ಉತ್ತರ ಪ್ರದೇಶ ಚುನಾವಣೆ: ಕುಸ್ತಿ ಪಟು ವಿರುದ್ದ ಎಫ್‌ಐಆರ್‌

babita phogat

ಬಾಘ್‌ಪತ್, ಜ25: ಉತ್ತರ ಪ್ರದೇಶ ಚನಾವಣೆ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರವೂ ಕೂಡ ಸದ್ದಿಲ್ಲದೆ ಸಾಗುತ್ತಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ಚುನಾವಣಾ ಆಯೋಗದ ಮಾರ್ಗಸೂಚಿಗಳು ಹಾಗೂ ಕೋವಿಡ್‌ ನಿಯಮಗಳನ್ನು ಮೀರಿರುವ ಕಾರಣ ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಮಟ್ಟದಲ್ಲಿರುವ ಕಾರಣ ಭಾರತೀಯ ಚುನಾವಣಾ ಆಯೋಗವು  ಮತ್ತು ರೋಡ್‌ ಶೋಗಳ ಮೇಲಿನ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಿ ಶನಿವಾರ ಆದೇಶಿಸಿತ್ತು. ಆದರೆ ಇದರ ಬೆನ್ನಲ್ಲೇ ಕೋವಿಡ್​ ನಿಯಮಗಳನ್ನು ಉಲ್ಲಂಘನೆ ಪ್ರಕರಣ ನಡೆದಿದೆ.

ಬಬಿತಾ ಫೋಗಟ್ ಅವರು ಸೋಮವಾರ ಬಾಗ್‌ಪತ್‌ನ ಬರೌತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣಪಾಲ್ ಎಸ್. ಮಲಿಕ್ ಪರ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಫೋಗಟ್ ಹಾಗೂ ಇತರ 63 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Exit mobile version