ಬೇಲದ ಹಣ್ಣು ಬಾಯಿ ರುಚಿಗೂ ಸೈ, ಆರೋಗ್ಯಕ್ಕೂ ಸೈ!

Benefits of Bela Fruit: ಹೊರ ದೇಶಗಳಿಂದ ವಿವಿಧ ಹೊಸ ತಳಿಯ ಹಣ್ಣುಗಳ ಆಮದು ಮಾಡಿಕೊಳ್ಳಲು ಆರಂಭಿಸಿದ ಮೇಲೆ ಮೂಲೆಗುಂಪಾಗುತ್ತಿರುವ ಹಣ್ಣುಗಳಲ್ಲಿ ಬೇಲದ ಹಣ್ಣು (Bela Fruit) ಅಥವಾ ಮರಸೇಬು ಎಂದು ಕರೆಸಿಕೊಳ್ಳುವ ಹಣ್ಣು ಕೂಡ ಒಂದು. ಸಾಮಾನ್ಯವಾಗಿದೆ ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿದೆ. ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಜನರು ಪರದಾಡುವಂತಾಗುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ದಾಹ ಹೆಚ್ಚಾಗೋದ್ರಿಂದ ನಿರ್ಜಲೀಕರಣದ ಸಮಸ್ಯೆ ಕಾಡುತ್ತದೆ.

Fruits

ಸುಸ್ತು, ನಿಶಕ್ತಿ, ತಲೆಸುತ್ತು ಹೀಗೆ ಹಲವು ಸಮಸ್ಯೆಗಳು ಕಾಡಿ ಕಂಗೆಡಿಸಿ ಬಿಡುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಈ ಹಣ್ಣನ್ನ ತಿಂದರೆ, ಇಲ್ಲವೇ ಇದರ ಜ್ಯೂಸ್‌ (Juice) ಮಾಡಿ ಕುಡಿದರೆ ನಿಮ್ಮ ದೇಹದಲ್ಲಿ ಚೈತನ್ಯ ಮೂಡುವುದು ಮಾತ್ರವಲ್ಲ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಸಾಂಪ್ರದಾಯಿಕ ಔಷಧದಲ್ಲಿ ಅನೇಕ ಉಪಯೋಗಗಳನ್ನು ಹೊಂದಿರುವ ಈ ಪ್ರಮುಖ ಔಷಧೀಯ ಸಸ್ಯದ ಹಣ್ಣು ಮಾತ್ರವಲ್ಲ ಬೇರು, ಎಲೆ, ಕಾಂಡ, ಹಣ್ಣು ಮತ್ತು ಬೀಜದ ಬೀಜಗಳು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತದೆ.

ಇದು ಆಯುರ್ವೇದ ಔಷಧಗಳಲ್ಲಿ ಕೂಡ ಬಳಕೆಯಾಗುತ್ತದೆ.ಇದರಲ್ಲಿ ಪ್ರೋಟೀನ್ಗಳು, ಜೀವಸತ್ವಗಳು-ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ (Vitamin C, Beta Carotene)ಮತ್ತು ಕಬ್ಬಿಣದ ವಿಟಮಿನ್ ಬಿ-ಕಾಂಪ್ಲೆಕ್ಸ್. ಖನಿಜಗಳು – ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ (Calcium, Magnesium), ಸತು, ತಾಮ್ರ ಅಂಶಗಳಿವೆ. ಹಾಗಾಗಿ ಇದು ರಕ್ತ ಶುದ್ಧೀಕರಣ ಮಾಡಲು ಸಹಾಯ ಮಾಡುತ್ತದೆ, ಇದರಲ್ಲಿ ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ದೇಹದಿಂದ ಎಲ್ಲಾ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಕಾರಿಯಾಗಿದೆ.ಇದು ನೈಸರ್ಗಿಕ ಡಿಟಾಕ್ಸಿಫೈಯಿಂಗ್ ಏಜೆಂಟ್ (Detoxifying Agent) ಆಗಿರುವುದರಿಂದ ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ತೊಂದರೆಗಳನ್ನು ಕೂಡಾ ಹೋಗಲಾಡಿಸುತ್ತದೆ.

ತೂಕ ಇಳಿಸಿ ಕೊಳ್ಳಬೇಕು ಎನ್ನುವುದು ಹಲವರ ಕನಸು ಆದರೆ ಸಾಧ್ಯವಾಗುತ್ತಿರುವುದಿಲ್ಲ. ಅಂತವರು ಬೇಲದ ಹಣ್ಣಿನ ಜ್ಯೂಸ್ ಮಾಡಿ ಸೇವಿಸುವುದು ಬೆಸ್ಟ್ ಇದರಿಂದ ಹೆಚ್ಚುವರಿ ತೂಕ ಕಡಿಮೆ ಆಗೋದು ಮಾತ್ರವಲ್ಲ.120 ಒಳ್ಳೆಯ ಕ್ಯಾಲೋರಿ ಕೂಡ ನಮ್ಮ ದೇಹವನ್ನು ಸೇರುತ್ತದೆ. ಇದು ಆಸಿಡ್ ರಿಫ್ಲೆಕ್ಸ್ (Acid Reflex) ಆಗುವುದನ್ನು ಕೂಡಾ ಕಡಿಮೆಯಾಗಿಸಿ ದೇಹವನ್ನು ತಂಪಾಗಿಡಿಸುತ್ತದೆ. ಬಹಳಷ್ಟು ಜನರನ್ನು ಕಾಡುವ ಮಲಬದ್ಧತೆಗೆ ಕೂಡ ಇದು ಹೇಳಿ ಮಾಡಿಸಿದ ಆಹಾರ.ಇದರಲ್ಲಿರುವ ಫೈಬರ್ ಅಂಶಗಳು ಮಲಬದ್ಧತೆಯನ್ನು ನಿವಾರಿಸುತ್ತದೆ.

ಇನ್ನು ಬೇಲದ ಹಣ್ಣಿನಲ್ಲಿ ಟ್ಯಾನಿನ್‌ಗಳು, ಸಪೋನಿನ್‌ಗಳು (Tannins, Saponins), ಸ್ಟೆರಾಲ್‌ಗಳಂತಹ ಫೈಟೊನ್ಯೂಟ್ರಿಯೆಂಟ್‌ಗಳಿರುವ ಕಾರಣದಿಂದ ಇದು ಖಿನ್ನತೆ ಮತ್ತು ಆತಂಕವನ್ನು ನಿವಾರಿಸಲು ಕೂಡಾ ಸಹಾಯ ಮಾಡಿ ನಿಮ್ಮ ದೇಹದ ಹಾಗೂ ಮನಸ್ಸಿನ ಅರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

Exit mobile version