Bengaluru: ಬಿಜೆಪಿಯಿಂದ (BJP) ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆೆ ಟಿಕೆಟ್ ಕೊಡಿಸುವುದಾಗಿ ಹೋಟೆಲ್ ಉದ್ಯಮಿ (Bail for Hindu Activist Chaitra) ಗೋವಿಂದಬಾಬು ಪೂಜಾರಿಗೆ
(Govindababu Poojari) ಕೋಟ್ಯಾಂತರ ರೂಪಾಯಿ ವಂಚಿಸಿ ಬಂಧನಕ್ಕೀಡಾಗಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಸೇರಿ ಇಬ್ಬರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ (Magistrate Court)
ಜಾಮೀನು (Bail for Hindu Activist Chaitra) ಮಂಜೂರು ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿ ಚೈತ್ರಾ (Chaitra) ಅವರನ್ನು ಬಂಧಿಸಲಾಗಿತ್ತು. ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ರೂ. ಪಡೆದಿದ್ದರು ಎಂದು ಗೋವಿಂದಬಾಬು ಪೂಜಾರಿ ದೂರು ನೀಡಿದ್ದರು.
ಈ ಬಗ್ಗೆ ಸಿಸಿಬಿ (CCB) ಪೊಲೀಸರು ದೂರು ದಾಖಲಿಸಿಕೊಂಡು ಕಳೆದ ಎರಡು ತಿಂಗಳ ಹಿಂದೆ ವಶಕ್ಕೆ ಪಡೆದಿದ್ದರು.
ಡಿಸೆಂಬರ್ 5ಕ್ಕೆ ಜೈಲಿನಿಂದ ಬಿಡುಗಡೆ
ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್‌ಗೆ (Srikanth) 3ನೇ ಎಸಿಎಂಎಂ ಕೋರ್ಟ್ (ACMM Court) ಸೋಮವಾರ ಜಾಮೀನು ಮಂಜೂರು ಮಾಡಿದೆ.
ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.
9 ಮಂದಿ ಬಂಧನ:
ಸೆ.8 ರಂದು ಬಂಡೇಪಾಳ್ಯ (Bandepalya) ಠಾಣೆಯಲ್ಲಿ ವಂಚನೆ ಸಂಬಂಧ ಉದ್ಯಮಿ ಗೋವಿಂದಬಾಬು ಪೂಜಾರಿ, ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ
ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಚೈತ್ರಾ, ಗಗನ್ ಕಡೂರು (Gagan Kaduru), ಹೊಸಪೇಟೆಯ
ಸ್ವಾಮೀಜಿ ಹಾಲಶ್ರೀ ಸ್ವಾಮೀಜಿ, ಚನ್ನನಾಯ್ಕ, ಧನರಾಜ್, ಶ್ರೀಕಾಂತ್ (Srikanth), ಪ್ರಜ್ವಲ್ ಸೇರಿ 9 ಮಂದಿಯನ್ನು ಬಂಧಿಸಲಾಗಿತ್ತು.
ಚೈತ್ರಾ ಕುಂದಾಪುರ ಹೆಸರು ಬಳಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ
ಚೈತ್ರಾ ಕುಂದಾಪುರ (Chaitra Kundapura) ಎಂದು ಕರೆಯುವ ಮೂಲಕ ಕುಂದಾಪುರ ಹೆಸರಿಗೆ ಕಳಂಕ ಉಂಟು ಮಾಡಿದ್ದಾರೆ ಎಂದು ಕುಂದಾಪುರ ಮೂಲದ ಉದ್ಯಮಿಯೊಬ್ಬರು
ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆ ಚೈತ್ರಾ ಕುಂದಾಪುರ ಎಂಬ ಹೆಸರು ಬಳಸದಂತೆ ಕೋರ್ಟ್ ತಡೆಯಾಜ್ಞೆ ತಂದಿತ್ತು.
ಇದನ್ನು ಓದಿ: ರೈಲು ಇಂಡಿಯಾ ಕಂಪನಿಯಲ್ಲಿ ವಿವಿಧ ಉದ್ಯೋಗಾವಕಾಶ ; ಇಂದೇ ಅರ್ಜಿ ಸಲ್ಲಿಸಿ
- ಭವ್ಯಶ್ರೀ ಆರ್. ಜೆ