ರಾಜ್ಯ(State) ಬಿಜೆಪಿ ಸರ್ಕಾರ(BJP Government) ಮತಾಂತರ(Conversion) ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದೆ.
ಈಗಾಗಲೇ ಮತಾಂತರ ನಿಷೇಧ ಕಾಯ್ದೆಯೂ ಬೆಳಗಾವಿ(Belagavi) ಅಧಿವೇಶನದಲ್ಲಿ ವಿಧಾನಸಭೆಯಲ್ಲಿ(VidhanSabha) ಅಂಗೀಕಾರಗೊಂಡಿದೆ. ವಿಧಾನಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲದ ಕಾರಣ ಮಸೂದೆಯನ್ನು ಮಂಡಿಸಿರಲಿಲ್ಲ. ಹೀಗಾಗಿ ಇದೀಗ ಸುಗ್ರಿವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾಯ್ದೆ ಜಾರಿಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ ನಂತರ ರಾಜ್ಯಪಾಲರ ಅಂಕಿತ ಪಡೆದ ಬಳಿಕ ಕಾಯ್ದೆ ಜಾರಿಯಾಗಲಿದೆ.
ಕಾಯ್ದೆಯ ಮುಖ್ಯಾಂಶಗಳು :
ಧರ್ಮ ಬದಲಿಸುವ ೬೦ ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಮತಾಂತರ ಆಗುವವರು ಡಿಸಿ, ಪೊಲೀಸ್ ಸಮ್ಮುಖದಲ್ಲಿ ವಿಚಾರಣೆ ಮತಾಂತರಗೊಂಡ ಎಸ್ಸಿ ಮತ್ತು ಎಸ್‌ಟಿ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯ ರದ್ದು. ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‌ಜಿಒಗಳಿಗೆ ನಿರ್ಬಂಧ
ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಕಡಿತ. ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದು ಅಪರಾಧ.
ಬಲವಂತದ ಮತಾಂತರ ಜಾಮೀನುರಹಿತ ಅಪರಾಧ
ಅಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅಸಿಂಧು. ಈ ಬಗ್ಗೆ ಘೋಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಅವಕಾಶ. ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ. ಬಲವಂತದ ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ ೫ ಲಕ್ಷ ಪರಿಹಾರ. ಪರಿಹಾರದ ಮೊತ್ತವನ್ನು ಮತಾಂತರ ಮಾಡಿದವನಿಂದಲೇ ವಸೂಲಿ ಮಾಡಬೇಕಾಗುತ್ತದೆ.
ಎರಡನೇಯ ಬಾರಿಗೆ ಮತಾಂತರ ಮಾಡಿದ್ದಲ್ಲಿ ದುಪ್ಪಟ್ಟು ದಂಡ
ಬಲವಂತವಾಗಿ ಮತಾಂತರಿಸಿದ್ದಲ್ಲಿ ೩ ರಿಂದ ೫ ವರ್ಷ ಜೈಲು ಶಿಕ್ಷೆ ಮತ್ತು ೨೫ ಸಾವಿರ ರೂ. ದಂಡ. ಸಾಮೂಹಿಕ ಮತಾಂತರ ಮಾಡಿದವರಿಗೆ ೩ರಿಂದ ೧೦ ವರ್ಷ ಜೈಲು ಶಿಕ್ಷೆ, ೧ ಲಕ್ಷ ರೂ. ದಂಡ.