ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ: ಬೆಂಗಳೂರು – ಹೊಸೂರು ಮೆಟ್ರೋ ಸಂಪರ್ಕ ಕಲ್ಪಿಸಲು 11 ಕಂಪನಿಗಳ ಆಸಕ್ತಿ

Bengaluru: ಚೆನ್ನೈ ಮೆಟ್ರೋ ರೈಲು ಲಿಮಿಟೆಡ್‌ (ಸಿಎಂಆರ್‌ಎಲ್‌) ಕರೆದಿದ್ದ ಟೆಂಡರ್‌ನಲ್ಲಿ (Tender) 11 ಕಂಪನಿಗಳು, ದೇಶದ ಮೊದಲ ಅಂತಾರಾಜ್ಯ ಮೆಟ್ರೋ, ಬೊಮ್ಮಸಂದ್ರದಿಂದ (Bommasandra) ತಮಿಳುನಾಡಿನ ಹೊಸೂರಿನವರೆಗೆ ಸಂಪರ್ಕ ಕಲ್ಪಿಸುವ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು ಭಾಗವಹಿಸಿದ್ದು, ತಮಿಳುನಾಡು ಸರ್ಕಾರ ಹಣ ಮೀಸಲಿಟ್ಟಿದ್ದು, ಕರ್ನಾಟಕದಲ್ಲಿ ಬರುವ ಮಾರ್ಗಕ್ಕೆ ಇಲ್ಲಿನ ಸರ್ಕಾರ ವೆಚ್ಚ ಮಾಡಬೇಕಿದೆ.

ಸಿಎಂಆರ್‌ಎಲ್‌ (CMRL) ಕಳೆದ ಆಗಸ್ಟ್‌ 1 ರಂದು ಈ ಯೋಜನೆ ಕಾರ್ಯಸಾಧ್ಯತೆ ವರದಿ ರೂಪಿಸುವ ಸಂಬಂಧ ಟೆಂಡರ್‌ ಕರೆದಿತ್ತು. ಈ ಯೋಜನೆಯ ಕಾರ್ಯಸಾಧ್ಯತೆ ವರದಿ ರೂಪಿಸಲು ಎಲ್‌ ಆ್ಯಂಡ್‌ ಟಿ ಇನ್‌ಫ್ರಾಸ್ಟ್ರಕ್ಚರ್‌ ಲಿ., ಅಲ್ಮೊಂಡ್ಸ್‌ ಗ್ಲೋಬಲ್‌ ಇನ್ಫ್ರಾ(Almonds Global Info) , ಬಾಲಾಜಿ ರೈಲ್‌ ರೋಡ್‌ ಸಿಸ್ಟಂ, ರಾಯಿಟ್ಸ್‌ ಲಿ,, ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌, ರೈನಾ ಕನ್ಸಲ್ಟಿಂಗ್‌ ಸೇರಿದಂತೆ 11 ಕಂಪನಿಗಳು ಭಾಗವಹಿಸುತ್ತಿವೆ.

ಇದೇ ಫೆಬ್ರವರಿಯಲ್ಲಿ ಹೊಸೂರು ಮತ್ತು ಬೆಂಗಳೂರು ನಡುವೆ ಮೆಟ್ರೊ (Metro) ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚೆನ್ನೈ ಮೆಟ್ರೊ ರೈಲು ನಿಗಮವು (ಸಿಎಂಆರ್‌ಎಲ್‌) ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಅನುಮತಿ ಕೋರಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು,ದೇಶದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆಗೆ ಆರಂಭಿಕ ಹೆಜ್ಜೆ ಇಟ್ಟಂತಾಗಿದೆ.

ಎಷ್ಟು ಕಿ.ಮೀ. ಮಾರ್ಗ:
2021ರಲ್ಲಿ ನಡೆದ ಎಲ್ಲಾ ಮೆಟ್ರೋ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ಬೊಮ್ಮಸಂದ್ರ – ಹೊಸೂರು ಮೆಟ್ರೋ ಸಂಪರ್ಕ ಸಾಧ್ಯತೆ ಕುರಿತು ವರದಿ ನೀಡುವಂತೆ ಬಿಎಂಆರ್‌ಸಿಎಲ್‌ (BMRCL) ಅನ್ನು ಒತ್ತಾಯಿಸಿದ್ದು, ಹೊಸೂರು – ಬೊಮ್ಮಸಂದ್ರ (Hosur-Bommansandra) ನಡುವಿನ 20.5 ಕಿ.ಮೀ. ಮಾರ್ಗದ ಪೈಕಿ 11.7 ಕಿ.ಮೀ. ಕರ್ನಾಟಕದಲ್ಲಿದೆ. ಉಳಿದ 8.8 ಕಿ.ಮೀ. ತಮಿಳುನಾಡಿನಲ್ಲಿದೆ. ಕರ್ನಾಟಕದಲ್ಲಿ ಬರುವ ಮಾರ್ಗವನ್ನು ಬಿಎಂಆರ್‌ಸಿಎಲ್‌ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್‌ ನಿರ್ಮಿಸುವ ಸಾಧ್ಯತೆ ಇದೆ.

75 ಲಕ್ಷ ರೂಪಾಯಿ ಮಂಜೂರು ಮಾಡಿದ ತಮಿಳುನಾಡು ಸರ್ಕಾರ:
ಸಿಎಂಆರ್‌ಎಲ್‌ಗೆ ತಮಿಳುನಾಡು ಸರ್ಕಾರ 75 ಲಕ್ಷ ರೂಪಾಯಿ ಮಂಜೂರು ಮಾಡಿ ಕಾರ್ಯ ಸಾಧ್ಯತೆ ಅಧ್ಯಯನ ನಡೆಸುವಂತೆ ಸೂಚಿಸಿತ್ತು. ಕರ್ನಾಟಕ ಸರ್ಕಾರವು ಈಗಾಗಲೇ ಬೊಮ್ಮಸಂದ್ರದಿಂದ ಹೊಸೂರಿನವರೆಗೆ ಮೆಟ್ರೋ ವಿಸ್ತರಿಸಲು ಅನುಮೋದನೆ ನೀಡಿ 2022 ರಲ್ಲಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿತ್ತು.

ಭವ್ಯಶ್ರೀ ಆರ್.ಜೆ

Exit mobile version