ಬೆಂಗಳೂರು-ಮೈಸೂರು ಹೆದ್ದಾರಿ ‘ನಮ್ಮ ಐಡಿಯಾ’ ; ಕಾಂಗ್ರೆಸ್‌- ಬಿಜೆಪಿ ನಡುವೆ ಮುಗಿಯದ ಕ್ರೆಡಿಟ್‌ ಕಿತ್ತಾಟ

Bengaluru : ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು (bangalore-mysore expressway) ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟನೆಗೊಳಿಸಿದ (Bangalore Mysore Highway) ಬಳಿಕವೂ ಬಿಜೆಪಿ-ಕಾಂಗ್ರೆಸ್‌ (BJP-Congress) ನಡುವೆ ʻಇದು ನಮ್ಮ ಐಡಿಯಾʼ ಎಂಬ ಕಿತ್ತಾಟ ಮುಗಿದಿಲ್ಲ!

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ (Pratap Singh) ಅವರ ನೇತೃತ್ವದಲ್ಲಿ ತಯಾರಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ರಸ್ತೆ,

ಮಾರ್ಚ್‌ ೧೨ ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಪಡೆಯಿತು. ಚಾಲನೆಗೂ ಮುನ್ನ ಮತ್ತು ಬಳಿಕವು ಕಾಂಗ್ರೆಸ್‌ ಆರೋಪಗಳು ಮುಗಿಯುವ ಲಕ್ಷಣವನ್ನು ತೋರುವಂತಿಲ್ಲ!

ಈ ಬಗ್ಗೆ ಮಂಡ್ಯಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅದನ್ನು ಉಲ್ಲೇಖಿಸಿ ಮಾತನಾಡಿದರು.

ಕಾಂಗ್ರೆಸ್ ನನ್ನ ಸಮಾಧಿಯನ್ನು ಅಗೆಯುತ್ತಿದೆ, ಆದ್ರೆ ನಾನು ಬೆಳವಣಿಗೆಗಳಲ್ಲಿ ನಿರತನಾಗಿದ್ದೇನೆ ಎಂದು ಹೇಳಿದರು.

ಇತ್ತೀಚೆಗಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಎಕ್ಸ್ ಪ್ರೆಸ್ ವೇ ಕ್ರೆಡಿಟ್‌ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು ಎಂದು ಹೇಳಿದ್ದರು.

ಇದನ್ನೂ ಓದಿ : https://vijayatimes.com/amitsha-thought/

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷವು ಈ ಪ್ರತಿಷ್ಠಿತ ಎಕ್ಸ್‌ಪ್ರೆಸ್‌ವೇಯ ಕ್ರೆಡಿಟ್‌ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ.

ನಾನು ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕೆಲಸಗಳಲ್ಲಿ ನಿರತರಾಗಿರುವಾಗ ನನಗೆ ಸಮಾಧಿ ತೋಡುವುದು ಅದರ ಕನಸು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸುವ ವಿಶ್ವಾಸವಿದೆ ಎಂದು ಹೇಳಿದರು.

ಉದ್ಘಾಟನೆಗೂ ಮುನ್ನ ಮಾತನಾಡಿದ್ದ ಸಿದ್ದರಾಮಯ್ಯ ಅವರು, ತಾವು ಹಾಗೂ ಅವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ

ಅವರು ದಶಪಥ ಎಕ್ಸ್ ಪ್ರೆಸ್ ವೇಯನ್ನು ರಾಜ್ಯ ಹೆದ್ದಾರಿಯಿಂದ (State Highway) ರಾಷ್ಟ್ರೀಯ ಹೆದ್ದಾರಿಯಾಗಿ (National Highway) ಮೇಲ್ದರ್ಜೆಗೇರಿಸಿದ್ದು ಎಂದು ಹೇಳಿದ್ದರು.

ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ (Oscar Fernandes)

ಅವರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು ಮಾತ್ರವಲ್ಲದೆ, ಹೆದ್ದಾರಿಯನ್ನು 10 ಪಥದ ರಸ್ತೆಯನ್ನಾಗಿ ವಿಸ್ತರಿಸುವ ಪ್ರಸ್ತಾವನೆಯನ್ನು ಅನುಮೋದಿಸಿದ್ದರು ಎಂದು ಹೇಳಿದ್ದರು.

ಕಾಂಗ್ರೆಸ್‌ ದಶಪಥ ರಸ್ತೆಗೆ ಈ ಹಿಂದೆಯೇ ನಾವು ಶ್ರಮಿಸೆದ್ದವು, ಇದರ ಕ್ರೆಡಿಟ್‌ ನಮಗೆ ಸಲ್ಲಬೇಕು ಎಂದು ವಾದಿಸಿದರೇ,

ಇತ್ತ ಬಿಜೆಪಿ ಇದು ಕೇವಲ ಕ್ರೆಡಿಟ್ ಕಸಿದುಕೊಳ್ಳುವ ಸಂಚು ಎಂದು ತಿರುಗೇಟು ನೀಡಿದೆ. ಸದ್ಯ ಇದೀಗ ಮುಕ್ತ ಸಂಚಾರಕ್ಕೆ ಸಿದ್ದವಿರುವ ಮೈಸೂರು-ಬೆಂಗಳೂರು ದಶಪಥ ಎಕ್ಸ್‌ಪ್ರೆಸ್‌ವೇ ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ : https://vijayatimes.com/sumalta-ambarish-supports-bjp/

ಬೆಂಗಳೂರು-ನಿಡಘಟ್ಟ ನಡುವಿನ 58 ಕಿ.ಮೀ ಮತ್ತು ನಿಡಘಟ್ಟ-ಮೈಸೂರು ನಡುವಿನ 61 ಕಿ.ಮೀ. ಈ ಸಂಪೂರ್ಣ ನಿಯಂತ್ರಿತ ಹೆದ್ದಾರಿಯು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳವರೆಗೆ ಕಡಿತಗೊಳಿಸುತ್ತದೆ ಎಂದು ಹೇಳಲಾಗಿದೆ.

Exit mobile version