ಬೆಂಗಳುರು: ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (Bangalore Officials seized gold) ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದು,
ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರು (Bangalore Officials seized gold) ಸಿಕ್ಕಿಬಿದ್ದಿದ್ದಾರೆ.
ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ 3.9 ಕೋಟಿ ರೂ. ಮೌಲ್ಯದ 5 ಕೆಜಿ 135 ಗ್ರಾಂ ಚಿನ್ನ ಸಿಕ್ಕಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ 7 ಪ್ರಯಾಣಿಕರನ್ನು
ವಶಕ್ಕೆ ಪಡೆಯಲಾಗಿದೆ.
ಕುವೈತ್, ದುಬೈ, ಅಬುದಾಬಿ, ಬ್ಯಾಂಕಾಕ್ನಿಂದ 7 ಜನ ಪ್ರಯಾಣಿಕರು ಒಳ ಉಡುಪು, ಮಹಿಳೆಯರ ಪರ್ಸ್, ಹ್ಯಾಂಡ್ಬ್ಯಾಗ್ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು. ಅನುಮಾನಗೊಂಡ ಕೆಂಪೇಗೌಡ
ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಚಿನ್ನ ಪತ್ತೆಯಾಗಿದೆ.
ದರೋಡೆಕೋರರ ಬಂಧನ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಾಗಲಗುಂಟೆ ಕಿರಣ್(24),
ಮೋಟಗಾನಹಳ್ಳಿ ಮಹದೇವ್(23), ಬೆಂಗಳೂರಿನ ಮಾಳಗಾಳ ನಿವಾಸಿ ರಕ್ಷಿತ್(23) ಬಂಧಿತರು. ಇನ್ನು ಪರಾರಿಯಾದ ನವೀನ್, ಪರ್ವೇಜ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನು ಓದಿ: KPSC ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿರುವ ಹುದ್ದೆಗಳ ವಿವರ ಇಲ್ಲಿದೆ..
- ಭವ್ಯಶ್ರೀ ಆರ್ ಜೆ