ವಿಶ್ವಕಪ್ -2023 : ಭಾರತಕ್ಕೆ ಬಾಂಗ್ಲಾ ಸವಾಲು ; ಹೈವೋಲ್ಟೇಜ್ ಪಂದ್ಯಕ್ಕೆ ಪುಣೆ ಸಜ್ಜು..!

Pune: ಐಸಿಸಿ (ICC) ಏಕದಿನ ವಿಶ್ವಕಪ್ನಲ್ಲಿ ಸತತವಾಗಿ ಮೂರು ಗೆಲುವುಗಳನ್ನುದಾಖಲಿಸಿರುವ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಇದೀಗ ನಾಲ್ಕನೇ ಗೆಲುವು ದಾಖಲಿಸಿ, ಅಜಯರಾಗಿ ಉಳಿಯಲು ಬಾಂಗ್ಲಾದೇಶದ ಸವಾಲನ್ನು ಎದುರಿಸಲು ಸಜ್ಜಾಗಿದೆ.

ಪುಣೆಯಲ್ಲಿನ ಮಹಾರಾಷ್ಟ್ರೀಯ (Maharashtra) ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್ 19) ಈ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಮೊದಲ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಅಫಘಾನಿಸ್ತಾನ ಮತ್ತು ಪಾಕಿಸ್ತಾನ (Pakistan) ತಂಡವನ್ನು ಬಗ್ಗುಬಡಿದಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆತ್ಮವಿಶ್ವಾಸದ ಅಲೆಯಲ್ಲಿದ್ದು, ಬಾಂಗ್ಲಾದೇಶದ (Bangladesh) ಎದುರು ಸುಲಭ ಗೆಲುವು ದಾಖಲಿಸುವ ತವಕದಲ್ಲಿದೆ. ಇನ್ನು ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಗೆದ್ದು ಶುಭಾರಂಭ ಮಾಡಿದರೂ, ನಂತರ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (New Zealand) ಎದುರು ಸೋಲುಂಡಿದೆ. ಇದೀಗ ಭಾರತ ತಂಡದ ಎದುರು ಕಮ್ಬ್ಯಾಕ್ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ.

ಪಂದ್ಯದ ವಿವರಗಳು :
ಭಾರತ vs ಬಾಂಗ್ಲಾದೇಶ
ದಿನಾಂಕ: ಅಕ್ಟೋಬರ್ 19, ಗುರುವಾರ
ಸಮಯ: ಮಧ್ಯಾಹ್ನ 2 ಗಂಟೆಗೆ ಆರಂಭ
ಸ್ಥಳ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಪುಣೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ (Star Sports) ವಾಹಿನಿ
ಲೈವ್ ಸ್ಟ್ರೀಮಿಂಗ್: ಹಾಟ್ ಸ್ಟಾರ್ (Hot Star)

ಟೀಮ್ ಇಂಡಿಯಾ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಶುಭಮನ್ ಗಿಲ್ ವಿರಾಟ್ ಕೊಹ್ಲಿ (Virat Kohli), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ (Ravindra Jadeja), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಮೊಹಮ್ಮದ್ ಸಿರಾಜ್, ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್,.ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್,

ಬಾಂಗ್ಲಾದೇಶ ತಂಡ
ಲಿಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹುಸೇನ್ ಶಾಂತೊ, , ಶಕೀಬ್ ಅಲ್ ಹಸನ್ (Shakeeb Al Hasan) (ನಾಯಕ), ಮುಷ್ಫಿಕರ್ ರಹೀಮ್ (ವಿಕೆಟ್ಕೀಪರ್), ತೌಹಿದ್ ಹೃದಯ್, , ತಾಸ್ಕಿನ್ ಅಹ್ಮದ್, ತಂಝಿಮ್ ಹಸನ್ ಶಕಿಬ್ ಶೋರಿಫುಲ್ ಇಸ್ಲಾಂ, ಮೆಹಿದಿ ಹಸನ್ ಮಿರಾಜ್ ಮಹೇದಿ ಹಸನ್ ಮುಸ್ತಾಫಿಝುರ್ ರೆಹಮಾನ್, ಮಹ್ಮೂದುಲ್ಲಾ ರಿಯಾದ್.ಹಸನ್ ಮಹ್ಮೂದ್, , ನಸುಮ್ ಅಹ್ಮದ್ (Nasum Ahammed),

Exit mobile version