ಅಕ್ಟೋಬರ್‌ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳ ಬ್ಯಾಂಕ್‌ ರಜೆಗಳ ಪಟ್ಟಿ

ಆರ್ಬಿಐನಿಂದ ಬಿಡುಗಡೆ ಮಾಡಿರುವ ಅಕ್ಟೋಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕ್ಗಳಿಗೆ ಬಹುತೇಕ ರಜಾ ದಿನಗಳಿಂದಲೇ ತುಂಬಿ ಹೋಗಿದೆ. ಭಾರತದ ಅನೇಕ ನಗರಗಳಲ್ಲಿ ವಿವಿಧ ಹಬ್ಬ- ಆಚರಣೆಗಳ ಪ್ರಯುಕ್ತ ಬ್ಯಾಂಕ್ಗಳಿಗೆ ರಜಾ ಇರುತ್ತವೆ. ಒಟ್ಟಾರೆಯಾಗಿ, ಬ್ಯಾಂಕ್ಗಳಿಗೆ ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ರಜಾ ದಿನಗಳನ್ನು ನಿರೀಕ್ಷಿಸಬಹುದು. ಇದರಲ್ಲಿ ಶನಿವಾರ- ಭಾನುವಾರದ ವಾರಾಂತ್ಯಗಳು ಮತ್ತು ಆರ್ಬಿಐನಿಂದ ಕಡ್ಡಾಯವಾದ ಅಧಿಕೃತ ರಜಾ ದಿನಗಳು ಒಳಗೊಂಡಿವೆ. ಸ್ವತಃ ಆರ್‌ಬಿಐ ಅಕ್ಟೋಬರ್ ತಿಂಗಳಿಗೆ ಒಟ್ಟು 14 ರಜಾದಿನಗಳನ್ನು ನೀಡಿದೆ. ವಾರಾಂತ್ಯದ ರಜಾದಿನಗಳಲ್ಲಿ ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಅವೆಲ್ಲ ಒಟ್ಟು ಸೇರಿಸಿ ಏಳು ದಿನಗಳು ಒಳಗೊಂಡಿವೆ.

ಆರ್‌ಬಿಐನ ರಜಾದಿನಗಳ ಪಟ್ಟಿ ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳ ವರ್ಗಕ್ಕೆ ಬರುತ್ತದೆ. ಆದರೂ ಅಧಿಕೃತ ವರ್ಗೀಕರಣಗಳನ್ನು ಪರಿಗಣಿಸಬೇಕಾದರೆ, ರಜಾದಿನಗಳ ಪಟ್ಟಿಯನ್ನು ಸಾಮಾನ್ಯವಾಗಿ ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು’, ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳು’ ಮತ್ತು ‘ಬ್ಯಾಂಕುಗಳ’ ಖಾತೆಗಳ ಕ್ಲೋಸಿಂಗ್ ಎಂಬ ಶೀರ್ಷಿಕೆಗಳ ಅಡಿಯಲ್ಲಿ ವಿಭಾಗದ ಅಡಿಯಲ್ಲಿ ಮಾಡಲಾಗುತ್ತದೆ.’ ಅಕ್ಟೋಬರ್‌ನ ಸಂದರ್ಭದಲ್ಲಿ ಹೆಚ್ಚಿನ ರಜಾದಿನಗಳು ‘ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ’ ಅಡಿಯಲ್ಲಿ ಬರುತ್ತವೆ. ಬಹುಪಾಲು ರಜಾದಿನಗಳು ಕೆಲವು ರಾಜ್ಯಗಳು ಮತ್ತು ನಗರಗಳಲ್ಲಿ ಮಾತ್ರ ನಡೆಯುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಬ್ಯಾಂಕ್ ಗ್ರಾಹಕರಾಗಿ, ಇಲ್ಲಿರುವ ಪಟ್ಟಿ ನಿಮಗೆ ಸಹಾಯ ಮಾಡಲಿದೆ.


1) ಅಕ್ಟೋಬರ್ 1- ಅರ್ಧ ವಾರ್ಷಿಕ ಬ್ಯಾಂಕ್ ಖಾತೆಗಳ ಕ್ಲೋಸಿಂಗ್ (ಗ್ಯಾಂಗ್ಟಕ್)
2) ಅಕ್ಟೋಬರ್ 2 – ಗಾಂಧೀ ಜಯಂತಿ (ಎಲ್ಲ ರಾಜ್ಯಗಳು)
3) ಅಕ್ಟೋಬರ್ 3 – ಭಾನುವಾರ
4) ಅಕ್ಟೋಬರ್ 6 – ಮಹಾಲಯ ಅಮಾವಾಸ್ಯೆ (ಅಗರ್ತಲಾ, ಬೆಂಗಳೂರು, ಕೋಲ್ಕತ್ತಾ)
5) ಅಕ್ಟೋಬರ್ 7 – ಮೇರಾ ಚೌರೆನ್ ಹೌಬಾ ಲೈನಿಂಗ್‌ಥೌ ಸನಾಮಹಿ (ಇಂಫಾಲ್)
6) ಅಕ್ಟೋಬರ್ 9 – ಎರಡನೇ ಶನಿವಾರ
7) ಅಕ್ಟೋಬರ್ 10 – ಭಾನುವಾರ
8) ಅಕ್ಟೋಬರ್ 12 – ದುರ್ಗಾ ಪೂಜೆ (ಮಹಾ ಸಪ್ತಮಿ)/(ಅಗರ್ತಲಾ, ಕೋಲ್ಕತ್ತಾ)
9) ಅಕ್ಟೋಬರ್ 13 – ದುರ್ಗಾ ಪೂಜೆ (ಮಹಾ ಅಷ್ಟಮಿ) / (ಅಗರ್ತಲಾ, ಭುವನೇಶ್ವರ, ಗ್ಯಾಂಗ್ಟಕ್, ಗುವಾಹತಿ, ಇಂಫಾಲ್, ಕೋಲ್ಕತ್ತಾ, ಪಾಟ್ನಾ, ರಾಂಚಿ)
10) ಅಕ್ಟೋಬರ್ 14 – ದುರ್ಗಾ ಪೂಜೆ/ದಸರಾ (ಮಹಾ ನವಮಿ)/ಆಯುಧ ಪೂಜೆ (ಅಗರ್ತಲಾ, ಬೆಂಗಳೂರು, ಚೆನ್ನೈ, ಗ್ಯಾಂಗ್ಟಕ್, ಗುವಾಹತಿ, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಖನೌ, ಪಾಟ್ನಾ, ರಾಂಚಿ, ಶಿಲ್ಲಾಂಗ್, ಶ್ರೀನಗರ, ತಿರುವನಂತಪುರಂ)
11) ಅಕ್ಟೋಬರ್ 15 – ದುರ್ಗಾ ಪೂಜೆ/ದಸರಾ/(ವಿಜಯ ದಶಮಿ)/(ಇಂಫಾಲ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲ ಬ್ಯಾಂಕ್ಗಳು)
12) ಅಕ್ಟೋಬರ್ 16 – ದುರ್ಗಾ ಪೂಜೆ (ದಸೈನ್) / (ಗ್ಯಾಂಗ್ಟಕ್)
13) ಅಕ್ಟೋಬರ್ 17 – ಭಾನುವಾರ
14) ಅಕ್ಟೋಬರ್ 18- ಕತಿ ಬಿಹು (ಗುವಾಹತಿ)
15) ಅಕ್ಟೋಬರ್ 19- ಈದ್-ಮಿಲಾದ್/ಈದ್-ಇ-ಮಿಲದುನ್ನಬಿ/ಮಿಲದ್-ಇ-ಷರೀಫ್ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ)/ಬರವಫತ್/(ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ)
16) ಅಕ್ಟೋಬರ್ 20- ಮಹರ್ಷಿ ವಾಲ್ಮೀಕಿ ಜನ್ಮದಿನ/ಲಕ್ಷ್ಮಿ ಪೂಜೆ/ಈದ್-ಇ-ಮಿಲಾದ್ (ಅಗರ್ತಲಾ, ಬೆಂಗಳೂರು, ಚಂಡೀಗಡ, ಕೋಲ್ಕತ್ತಾ, ಶಿಮ್ಲಾ)
17) ಅಕ್ಟೋಬರ್ 22- ಶುಕ್ರವಾರ ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ)
18) ಅಕ್ಟೋಬರ್ 23 – 4ನೇ ಶನಿವಾರ
19) ಅಕ್ಟೋಬರ್ 24 – ಭಾನುವಾರ
20) ಅಕ್ಟೋಬರ್ 26 – ಆಕ್ಸೆಷನ್ ಡೇ (ಜಮ್ಮು, ಶ್ರೀನಗರ)
21) ಅಕ್ಟೋಬರ್ 31 – ಭಾನುವಾರ

Exit mobile version