vijaya times advertisements
Visit Channel

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

Dakshina Kannada

ದಕ್ಷಿಣ ಕನ್ನಡ : ದಕ್ಷಿಣ ಕನ್ನಡದ(Dakshina Kannada) ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ನಿಗಮಕ್ಕೆ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ, ಬಂಟ್ವಾಳ(Bantwala) ತಾಲೂಕಿನ ಚೆನ್ನೈ ತೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆಯ ಸಜಂಕ ಬೆಟ್ಟು( ಕನಸಡ್ಕ ) ಎಂಬಲ್ಲಿ ಇತ್ತೀಚೆಗಷ್ಟೇ 3-4 ತಿಂಗಳಗಳಿಂದ ಆರಂಭಗೊಂಡ ಕಿಂಡಿ ಅಣೆಕಟ್ಟು ಕಾರ್ಯ, ಸೇತುವೆಯ ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

Dam

ವಿಜಯಟೈಮ್ಸ್ ತಂಡ ಮಾಡಿದ್ದ ವರದಿ ಹೀಗಿತ್ತು. “ದುರಂತದಿಂದ ಯಾವುದೇ ಸಾವು ನೋವುಗಳು ಸಂಭವಿಸುವ ಮೊದಲು ಕಾನೂನು ಕ್ರಮಕೈಗೊಳ್ಳಿ. ಬಂಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ರವರ ಅನುದಾನದಲ್ಲಿ ಚೆನ್ನೈ ತೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆಯ ಸಜಂಕ ಬೆಟ್ಟು(ಕಳಸಡ್ಕ) ಎಂಬಲ್ಲಿ ಕಿಂಡಿ ಅಣೆಕಟ್ಟು ಹಾಗೂ ಸೇತುವೆಗೆ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5.40 ಕೋಟಿ ರೂಪಾಯಿ ಮಂಜೂರು ಆಗಿದ್ದು, ಕಾಮಗಾರಿಯು ಈಗಾಗಲೇ 80% ಮುಗಿದಿದೆ.

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ! ತಡೆಗೋಡೆಯು ಹೊಡೆದು ಹೋಗಿದೆ. ಸಂಪೂರ್ಣ ತಡೆಗೋಡೆಯು ಅಪಾಯ ಮಟ್ಟವನ್ನು ಎದುರಿಸುತ್ತಿದೆ. ಸಾರ್ವಜನಿಕರು ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ತಡೆಗೋಡೆಯ ಸಮೀಪ ಹೋಗದಂತೆ ಮನವಿಯನ್ನು ಮಾಡಿದ್ದೇವೆ.

ಯಾವ ಸಮಯದಲ್ಲಿ ಬೇಕಾದರೂ ದುರಂತ ಸಂಭವಿಸಬಹುದು. ಇದೆಂತಾ ಕಳಪೆ ಕಾಮಗಾರಿ ಶಾಸಕರೇ? ಯಾವುದೇ ದುರಂತಗಳು ನಡೆಯುವ ಮೊದಲು ಕಳಪೆಯಾದ ಕಾಮಗಾರಿಯ ಬಗ್ಗೆ ಇಲಾಖೆ ತಕ್ಷಣವೇ ಕಾನೂನಿನ ಕ್ರಮ ಕೈಗೊಳ್ಳಿ. ಮುಂದಾಗುವ ದುರಂತವನ್ನು ತಪ್ಪಿಸಿ” ಎಂದು ಮನವಿ ಸ್ಥಳೀಯರು ಮನವಿ ಮಾಡಿದ್ದಾರೆ.

Dam danger

ಕಿಂಡಿ ಅಣೆಕಟ್ಟು ಹಾಗೂ ಸೇತುವೆ ತಡೆಗೋಡೆಯು ಅಡಿಪಾಯವು ನದಿಯ( ಸಣ್ಣ ನದಿ, ದೊಡ್ಡದಾದ ತೋಡು ) ನೀರಿನ ಕೆಳಮಟ್ಟದಿಂದ ಕನಿಷ್ಠ 8 ಅಡಿಯಿಂದ ತಡೆಗೋಡೆ ಅಡಿಪಾಯವನ್ನು ಹಾಕಬೇಕು. ಆದರೆ ಈ ತಡೆಗೋಡೆಯ ಅಡಿಪಾಯವು ಮೇಲ್ನೋಟಕ್ಕೆ 1 ಅಡಿ ಅಂತರದಲ್ಲಿದೆ.

ತಡೆಗೋಡೆಯು ಅಡಿಪಾಯದಿಂದ ಹಿಡಿದು ಹಲವು ಕಡೆ ಬಿರುಕು ಬಿಟ್ಟಿದೆ. ಒಟ್ಟಿಗೆ ಸೇತುವೆ ಅಪಾಯ ಮಟ್ಟದಲ್ಲಿದೆ. ಒಂದು ಸೈಡಿನ ತಡೆಗೋಡೆಯು 2 ಇಂಚು ಈಗಾಗಲೇ ಹೊಡೆದು ಹೊರಗೆ ಬಂದಿದೆ, ಯಾವಾಗ ಬೇಕಾದರೂ ದುರಂತ ನಡೆಯಬಹುದು. ಯಾವಕಡೆ ನೀರು ಹರಿಯಬಾರದೆಂದು ತಡೆಗೋಡೆ ಕಟ್ಟಿದ್ದಾರೋ, ಆ ತಡೆಗೋಡೆಯ ಅಡಿಪಾಯದಿಂದಲೇ ನೀರು ಹೊರಗಡೆ ಬರುತ್ತಿದೆ. ಸೇತುವೆಯ ಮೇಲ್ಭಾಗದಲ್ಲಿ ಕೆಲವು ಕಡೆ ಬಿರುಕು ಬಿಟ್ಟಿದೆ.

Dam

ಸಾಮಾನ್ಯ ಒಬ್ಬ ನಾಗರಿಕನು RCC ಮನೆ ಕಟ್ಟುವಾಗ ಕಬ್ಬಿಣದ ಸಲಾಕೆಯನ್ನು 16/20 ಇಂಚಿನ ಸಲಾಕೆಯನ್ನು ಉಪಯೋಗಿಸುತ್ತಾನೆ. ಸರ್ಕಾರದ ಇಷ್ಟು ದೊಡ್ಡ ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯಲ್ಲಿ ಬಳಸಿದ ಕಬ್ಬಿಣದ ಸಲಹೆಯ ಇಂಚು 8-10-12 ಅಲ್ಲವೇ?( ಕಾಮಗಾರಿಯ ಕಿಂಡಿ ಅಣೆಕಟ್ಟಿನ ತಡೆಗೋಡೆಯ ಹಾಗೂ ಸೇತುವೆಯ ತಡೆಗೋಡೆಯಲ್ಲಿ ಕಾಣುವ ಕಬ್ಬಿಣದ ಸಲಾಕೆಯನ್ನು ಗಮನಿಸಬೇಕಾಗಿದೆ)

ಈ ಕಾಮಗಾರಿಯಲ್ಲಿ ಕನಿಷ್ಠ ಎಂದರು 30 ಇಂಚಿನ ಮೇಲ್ಪಟ್ಟ ಕಬ್ಬಿಣದ ಸಲಾಕೆಯನ್ನು ಉಪಯೋಗಿಸಬೇಕಿತ್ತು ಹಾಗೂ ತುರ್ತು ಸ್ಥಳಕ್ಕೆ ಆಗಮಿಸಿ ವೀಕ್ಷಣೆಯನ್ನು ಮಾಡಿ. ಯಾವುದೇ ದುರಂತ ನಡೆಯುವ ಮೊದಲು ಅಧಿಕಾರಿ ವರ್ಗದವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿ ವಿನಂತಿ” ಎಂದು ಪ್ರಕಟಿಸಿತ್ತು.

Dakshina Kannada

ಸಾಮಾಜಿಕ ಜಾಲತಾಣದಲ್ಲಿ ನಮ್ಮ ವರದಿ ನೋಡಿ ಎಚ್ಚೆತ್ತುಕೊಂಡ ಕರ್ನಾಟಕ ಸರಕಾರದ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಶ್ರೀ ಶಿವ ಪ್ರಸನ್ನ ಹಾಗೂ ಕಾಮಗಾರಿ ನಡೆಸುವ ಗುತ್ತಿಗೆದಾರರ ಜೊತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಕಾಮಗಾರಿಯು ಬೇಜವಾಬ್ದಾರಿಯಿಂದ ಹಾಗೂ ಭೀಕರ ಮಳೆಯಿಂದಲೂ ಭಾಗಶಃ ತಡೆಗೋಡೆಯು ನಾಶವಾಗಿದೆ ಎಂದು ತಿಳಿಸಿದರು. ತಕ್ಷಣವೇ ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು.


ನಾಶವಾದ ತಡೆಗೋಡೆಯನ್ನು ಅಡಿಪಾಯದಿಂದಲೇ ಹೊಡೆದು ತೆಗೆದು. ಬಲಿಷ್ಠವಾದ ಅಡಿಪಾಯದೊಂದಿಗೆ ಪುನರ್ ನಿರ್ಮಿಸಲು ಆದೇಶಿಸಿದರು. ಸೇತುವೆಯ ಪ್ರಥಮ ಬುಡದ ಹತ್ತಿರ ಹಾಗೂ ಸೇತುವೆಯ ಕೊನೆಯ ಬುಡದ ಹತ್ತಿರ ಹೆಚ್ಚುವರಿ ಬಲಿಷ್ಠವಾದ ಭೀಮಗಳನ್ನು ನಿರ್ಮಾಣ ಮಾಡಲು ಆದೇಶಿಸಿದರು.

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.