ಮಾಸ್ಕೋ : ಕೋವಿಡ್ -19(Covid 19) ಸಾಂಕ್ರಾಮಿಕ ರೋಗ ಮತ್ತು ರಷ್ಯಾ-ಉಕ್ರೇನ್(Russia-Ukraine) ಯುದ್ಧದಿಂದಾಗಿ ದೇಶದಲ್ಲಿ ನಿರ್ಮಾಣವಾಗಿರುವ ಜನಸಂಖ್ಯಾ ಬಿಕ್ಕಟ್ಟನ್ನು ಪರಿಹರಿಸಲು ರಷ್ಯಾದ ಅಧ್ಯಕ್ಷ(Russia President) ವ್ಲಾಡಿಮಿರ್ ಪುಟಿನ್(Vladimar Putin) ರಷ್ಯಾದ ಮಹಿಳೆಯರಿಗೆ 10 ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಲು ಸಹಾಯ ಧನವಾಗಿ ಹಣವನ್ನು ನೀಡುತ್ತಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ.

ವ್ಲಾಡಿಮಿರ್ ಪುಟಿನ್ ಸರ್ಕಾರ 10 ಮಕ್ಕಳಿಗೆ ಜನ್ಮ ನೀಡಲು ಮತ್ತು ಜೀವಂತವಾಗಿಡಲು ಮಹಿಳೆಯರಿಗೆ £13,500 ಹಣವನ್ನು ನೀಡುತ್ತಿದೆ. ಆದರೆ “ಇದೊಂದು ಹತಾಶ ಪ್ರಯತ್ನ”ವೆಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆಯು,
ಕ್ಷೀಣಿಸುತ್ತಿರುವ ರಷ್ಯಾದ ಜನಸಂಖ್ಯೆಯನ್ನು ಮರುಸ್ಥಾಪಿಸುವ ಕ್ರಮವಾಗಿ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಹತ್ತು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಸೋವಿಯತ್ ಯುಗದ “ಮದರ್ ಹೀರೋಯಿನ್” ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ಉಕ್ರೇನ್ನಲ್ಲಿನ ಯುದ್ಧದಿಂದ ಉಂಟಾಗಿರುವ ರಷ್ಯಾದ ಜನಸಂಖ್ಯಾ ಬಿಕ್ಕಟ್ಟನ್ನು ಪುನಃಸ್ಥಾಪಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

ಇನ್ನು ಈ ವರ್ಷದ ಮಾರ್ಚ್ನಿಂದ ರಷ್ಯಾ ತನ್ನ ಅತಿ ಹೆಚ್ಚು ದೈನಂದಿನ ಕರೋನವೈರಸ್(Corona Virus) ಪ್ರಕರಣಗಳನ್ನು ವರದಿ ಮಾಡಿದ ನಂತರ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ದದಲ್ಲಿ ರಷ್ಯಾದ ಸುಮಾರು 50000 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ನಡುವೆ ದೊಡ್ಡ ಕುಟುಂಬಗಳನ್ನು ಹೊಂದಿರುವ ಜನರು ಹೆಚ್ಚು ದೇಶಭಕ್ತರು. ರಷ್ಯಾದ ಜನಸಂಖ್ಯೆಯನ್ನು ಮರುಸ್ಥಾಪಿಸುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜನತೆಗೆ ಮನವಿ ಮಾಡಿದ್ದಾರೆ.