ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾನುಕಾ

ಕೊಲಂಬೊ ಜ 6 : ಶ್ರೀಲಂಕಾ ತಂಡದ ಅನುಭವಿ ಆಟಗಾರ ಭಾನುಕಾ ರಾಜಪಕ್ಷ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ಜಿಂಬಾವ್ವೆ ವಿರುದ್ದ ನಡೆಯಬೇಕಿದ್ದ ಏಕದಿನ ಕ್ರಿಕೆಟ್‌ಗೂ ಮುನ್ನಾ ಹಠಾತ್ ನಿವೃತ್ತಿ ಘೋಷಿಸಿದ್ದು ಶ್ರೀಲಾಂಕ ತಂಡಕ್ಕೆ ದೊಡ್ಡ ಅಘಾತವಾಗಿದೆ.

ಕೌಟುಂಬಿಕ ಸಮಸ್ಯೆಗಳ ಕಾರಣ 30 ವರ್ಷದ ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ. ಶ್ರೀಲಂಕಾ ತಂಡದ ಪರ ಈವರೆಗೆ 5 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಭಾನುಕಾ ರಾಜಪಕ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲಿ 18 ಪಂದ್ಯಗಳನ್ನು ಆಡಿ ತಂಡದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್‌ಮನ್‌ ಆಗಿದ್ದರು.

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಲಂಕಾ ಆಟಗಾರರ ಫಿಟ್ನೆಸ್‌ ವಿಚಾರವಾಗಿ ತರಲಾಗಿರುವ ನೂತನ ನಿಯಮಗಳಿಂದಾಗಿ ಭಾನುಕ ರಾಜಪಕ್ಷ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ. ಆಟಗಾರರ ಫಿಟ್ನೆಸ್‌ ಗುಣಮಟ್ಟ ಹೆಚ್ಚಿಸಲು ಲಂಕಾ ಕ್ರಿಕೆಟ್‌ ಮಂಡಳಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ

“ಒಬ್ಬ ಆಟಗಾರನಾಗಿ, ಪತಿಯಾಗಿ ನನ್ನ ಸ್ಥಾನವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಒಬ್ಬ ತಂದೆಯಾಗಿ ನನ್ನ ಕುಟುಂಬದ ಕಡೆಗೆ ಗಮನ ನೀಡಲು ಆದ್ಯತೆ ನೀಡಿದ್ದೇನೆ. ಕೌಟುಂಬಿಕ ಕಾರಣಗಳಿಂದಾಗಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ,” ಎಂದು ಶ್ರೀಲಂಕಾ ತಂಡದ ಆಟಗಾರ ಭಾನುಕಾ ರಾಜಪಕ್ಷ ತಿಳಿಸಿದ್ದಾರೆ

Exit mobile version