ಭಾರತದ ಗಡಿಗೆ ನುಸುಳಿದ ಚೀನಾ ಸೈನಿಕರು – ದಾಳಿಗೆ 20 ಸೈನಿಕರು ಗಾಯ

ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ( LOC) ಚೀನಾ ಮತ್ತೆ ಕ್ಯಾತೆ ತೆಗೆದಿದೆ.ಭಾರತದ ಭೂ ಭಾಗ ಆಕ್ರಮಿಸಲು ಚೀನಾ ಯೋಧರ ಮುಂದಾಗಿದ್ದಾರೆ.‌

ಸಿಕ್ಕಿಂನ ನಾಥು ಭಾರತೀಯ ಸೇನೆ ಮತ್ತು ಚೀನಾದ ಪಿಎಲ್ ಎ ನಡುವೆ ಈ ಘರ್ಷಣೆ ನಡೆದಿದೆ.ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ. ಭಾರತೀಯ ಭೂ ಪ್ರದೇಶವನ್ನು ಪ್ರವೇಶಿಸಲು ಪಿಎಲ್ ಎ ಗಸ್ತು ಪಡೆ ಪ್ರಯತ್ನಿಸುತ್ತಿದೆ.

ಈ ವೇಳೆ ತಡೆಯಲು ಬಂದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದಾರೆ.ಈ ಘಟನೆಯಲ್ಲಿ ಚೀನಾದ 20 ಸೈನಿಕರ ಗಾಯಗಳಾಗಿವೆ. ಹಾಗೆಯೇ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ

Exit mobile version