ಬರಿಗಾಲಿನ ನಡಿಗೆಯಿಂದ ಆರೋಗ್ಯದ ಲಾಭ

ಪ್ರಸ್ತುತ ದಿನಗಳಲ್ಲಿ ಪಾದರಕ್ಷೆ ಇಲ್ಲದೆ ನಡೆಯುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಮನುಷ್ಯ ಪ್ರತೀ ದಿನ ಕೇವಲ ಅರ್ದ ಗಂಟೆಯಾದರೂ ಬರಿಗಾಲಲ್ಲಿ ನಡೆಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವುದು ಕಟುಸತ್ಯ. ಇತ್ತೀಚಿನ ದಿನಗಳಲ್ಲಿ ಅನೇಕರು ಬಿಪಿ ಮತ್ತು  ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂತಹವರು ಬರಿಗಾಲಲ್ಲಿ ನಡೆದರೆ ಉತ್ತಮ ಆರೋಗ್ಯ ಲಾಭಗಳು ನಮ್ಮದಾಗುತ್ತವೆ.

ಕೊಲೆಸ್ಟ್ರಾಲ್ ಹೆಚ್ಚಾಗಿ ಬಿ.ಪಿ ಹಾಗೂ ಸಕ್ಕರೆ ಕಾಯಿಲೆಗಳು ಬರುವುದರಿಂದ ದೇಹದ ಕೊಲೆಸ್ಟ್ರಾಲ್ ಕರಗಲು ಬರೀ ಕಾಲಲ್ಲಿ ಒಂದು ಗಂಟೆ ನಡೆದಾಡಬೇಕು ಈ ಕ್ರಮವನ್ನು ತಪ್ಪದೆ ಪ್ರತೀ ದಿನ ಮಾಡಿ ನೋಡಿ ನಿಮಗೇ ಇದರ ಅರಿವಾಗುವುದು. ಬರಿಗಾಲಲ್ಲಿ ನಡೆದರೆ ದೇಹಕ್ಕೆ ರಕ್ತ ಸಂಚಾರ ಸುಗಮವಾಗಿ ದೇಹ ಚುರುಕಾಗುವುದು. ಮೆದುಳಿಗೆ ಸರಾಗವಾಗಿ ರಕ್ತ ಸಂಚಾರವುಂಟಾಗಿ ಸುಲಭವಾಗಿ ನಿದ್ರೆ ಆವರಿಸಿಕೊಳ್ಳುತ್ತದೆ. ನಿದ್ರಾ ಹೀನತೆ ದೂರವಾಗುತ್ತದೆ.

ದೇಹದ ನರ-ನಾಡಿಗಳು ಹಾಗೂ ಮೂಳೆಗಳು ಸದೃಡವಾಗುತ್ತವೆ. ಇದರಿಂದಾಗಿ ದೇಹ ಶಕ್ತಿಯುತವಾಗಿ ಆರೋಗ್ಯಯುತವಾಗುತ್ತದೆ. ಅದರಲ್ಲೂ ಸ್ವಲ್ಪ ಬಿಸಿಲಲ್ಲಿ ನಡೆದರೆ ಇನ್ನೂ ಒಳ್ಳೆಯದು ಯಾಕೆಂದರೆ ದೇಹಕ್ಕೆ ಕ್ಯಾಲ್ಸಿಯಂ ಅಂಶ ಬಿಸಿಲಲ್ಲಿ ಬೇಕಾದಷ್ಟು ಸಿಗುತ್ತದೆ. ವೇಗವಾಗಿ ಬರಿಗಾಲಲ್ಲಿ ನಡೆಯುವುದರಿಂದ ಕಾಲಿನ ಪಾದಗಳು ಗಟ್ಟಿಯಾಗುವುದಲ್ಲದೆ ರಕ್ತ ಸಂಚಾರ ವೇಗವಾಗುವುದರಿಂದಾಗಿ ದೇಹದ ಚಟುವಟಿಕೆಗಳು ಸಗಮವಾಗುವುದರಿಂದ ದೇಹದಲ್ಲಿ ಮಾಂಸ ಖಂಡಗಳು ಸದೃಡವಾಗುತ್ತವೆ. ದೇಹದಲ್ಲಿ ಬೊಜ್ಜು ಕರಗಿ ದೇಹ ಹಗುರವಾಗುವುದಲ್ಲದೆ, ಆರೋಗ್ಯಯುತವಾಗಿರಲು ಸಹಾಯಕವಾಗುತ್ತದೆ.

Exit mobile version