ಬಿ.ಕೆ ಹರಿಪ್ರಸಾದ್‌ಗೆ ತಿಳಿದಿರುವ ಮಾಹಿತಿ, ಗೃಹ ಇಲಾಖೆಗೆ ತಿಳಿದಿಲ್ಲವೆಂದರೆ ಇಂಟೆಲಿಜೆನ್ಸ್ ವಿಫಲವಾಗಿದೆ: ಬಸವರಾಜ್ ಬೊಮ್ಮಾಯಿ

Bengaluru: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ @BasavarajBommayi ಅವರು ಬೆಂಗಳೂರಿನಲ್ಲಿ ಇಂದು (ಜ.4) ಮಾತಾನಾಡಿದ್ದು, ಬಿ.ಕೆ ಹರಿಪ್ರಸಾದ್‌ಗೆ ಗೊತ್ತಿರುವ ಮಾಹಿತಿ, ಗೃಹ ಇಲಾಖೆಗೆ ಗೊತ್ತಿಲ್ಲವೆಂದರೆ, ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಹೇಳಿದ್ದಾರೆ.

ಗೃಹ ಸಚಿವ ಪರಮೇಶ್ವರ್ (Parameshwar) ಅವರು ಹರಿಪ್ರಸಾದ್ ಅವರ ಹೇಳಿಕೆ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ ಅಂತ ಹೇಳಿದ್ದು,ಆದ್ರೆ ಬಿ.ಕೆ ಹರಿಪ್ರಸಾದ್‌ಗೆ ಗೋದ್ರಾ ಮಾದರಿ ಹಿಂಸೆ ನಡೆಯಬಹುದು ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಒಬ್ಬ ಎಂ.ಎಲ್.ಸಿ (MLC) ಗೆ ಇರುವ ಮಾಹಿತಿ ಗೃಹ ಇಲಾಖೆಗೆ ಇಲ್ಲ ಎಂದರೆ ಇಂಟ್ಲಿಜೆನ್ಸ್ ವಿಫಲವಾಗಿದೆ ಎಂದರು.

ಮಹಿಳೆಯರ ಮೇಲೆ ದೌರ್ಜನ್ಯ, ಅಕ್ರಮ ಸಾರಾಯಿ ದಂಧೆ, ಇಸ್ಪೀಟ್ (Ispeet) ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ರಿವೆ. ಗೃಹ ಇಲಾಖೆ ಮುಖ್ಯಸ್ಥರಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಹುತೇಕ ತಾಲ್ಲೂಕುಗಳು ಬರ ಅಂತ ಆಗಿದೆ. ಮುಂಗಾರು, ಹಿಂಗಾರು ವಿಫಲವಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ.

ಆರು ತಿಂಗಳು ಕಳೆದರೂ ಸಿದ್ದರಾಮಯ್ಯ (Siddaramaiah) ಸರ್ಕಾರ ಯಾವುದೇ ಕೆಲಸ ಮಾಡಿಲ್ಲ.. ಯಾವುದೇ ಕಾಮಗಾರಿ ಆರಂಭಿಸಿಲ್ಲ ಎಂದು ಆರೋಪಿಸಿದ್ದು, ಆಹಾರ ಉತ್ಪಾದನೆ ಕಡೆಮೆಯಾಗಲಿದೆ ಅಂತ ಕೃಷಿ ಇಲಾಖೆ ವರದಿ ಹೇಳುತ್ತಿದೆ. ಹಾಗಿದ್ದರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕೇಂದ್ರದ ಕಡೆ ಬೆರಳುಮಾಡಿ ತೋರಿಸುತ್ತಾರೆ.

ಮುಂಗಾರು, ಹಿಂಗಾರು ವಿಫಲವಾಗಿದ್ದು, ಕರ್ನಾಟಕ (Karnataka)ದಲ್ಲಿ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ಆದರೆ ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಕಾಮಗಾರಿ ಆರಂಭಿಸಿಲ್ಲ. ಆರು ತಿಂಗಳು ಕಳೆದರೂ ಸಿದ್ದರಾಮಯ್ಯ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ಶ್ರೀಕಾಂತ ಪೂಜಾರಿ (Srikanth Pujari) ವಿರುದ್ದ ಎಷ್ಟೇ ಪ್ರಕರಣ ಇರಲಿ ಅವು‌ ಕೋರ್ಟ್ನಲ್ಲಿ ಇವೆ. ಆದರೆ ,ಈ ಸಂದರ್ಭದಲ್ಲಿ ಕರಸೇವಕರ ಆರೋಪದ ಪ್ರಕರಣದಲ್ಲಿ ಬಂಧಿಸುವ ಉದ್ದೇಶವೇನಿತ್ತು. ಹುಬ್ಬಳ್ಳಿಯಲ್ಲಿ ಅನೇಕ ಕರ ಸೇವೆಕರು ಗಡಿ ಪಾರ್ ಆದವರು ಇದ್ದಾರೆ. ಇವರೊಬ್ಬರ ಮೇಲೆ ಏಕೆ ಈ ಸಂದರ್ಭದಲ್ಲಿ ಕ್ರಮ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಅವರು ವಿತಂಡ ವಾದ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಹರಿಪ್ರಸಾದ್ (Hariprasad) ಮೇಲೆ ನಂಬಿಕೆ ಇಲ್ಲ. ಆದರೆ, ವಿತಂಡ ವಾದ ಮಾಡುವುದೇ ಅವರ ಸ್ವಭಾವ‌ ಎಂದರು.

ಇನ್ನು ಶ್ರೀಕಾಂತ್ ಪೂಜಾರಿ ವಿರುದ್ಧ ಎಷ್ಟೇ ಪ್ರಕರಣವಿದ್ದರು ಅದು ಕೋರ್ಟ್ನಲ್ಲಿದೆ. ಆದರೆ ಈ ಸಮಯದಲ್ಲಿ ಕರಸೇವಕರ ಆರೋಪದ ಪ್ರಕರಣದಲ್ಲಿ ಬಂಧಿಸುವ ಕಾರಣವೇನಿತ್ತು. ಹುಬ್ಬಳ್ಳಿಯಲ್ಲಿ ಅನೇಕ ಕರಸೇವಕರು ಗಡಿಪಾರಾ ಇದ್ದಾರೆ. ಇವರ ಮೇಲೆ ಮಾತ್ರ ಯಾಕೆ ಕ್ರಮ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು..

ಭವ್ಯಶ್ರೀ ಆರ್ ಜೆ

Exit mobile version