ಯೋಗಿ ತಂತ್ರವನ್ನೇ ಕರ್ನಾಟಕದಲ್ಲಿಯೂ ಪ್ರಯೋಗಿಸಲು ಮುಂದಾದರಾ ಬುದ್ದಿವಂತ ಬೊಮ್ಮಾಯಿ!

basavaraj

ಉತ್ತರಪ್ರದೇಶದಲ್ಲಿ(Uttarpradesh) ಮತ್ತೊಮ್ಮೆ ಅಧಿಕಾರಕ್ಕೇರಿರುವ ಬಿಜೆಪಿ(BJP) ಇದೀಗ ಕರ್ನಾಟಕದ(Karnataka) ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ಮುಂದಾಗಿದೆ. ಬಿಜೆಪಿ ಹೈಕಮಾಂಡ್(Highcommand) ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುವಂತೆ ಬಸವರಾಜ್ ಬೊಮ್ಮಾಯಿಯವರಿಗೆ(Basavaraj Bommai) ಸೂಚನೆ ನೀಡಿದ್ದಾರೆ. ಯಾವುದೇ ಒರ್ವ ವ್ಯಕ್ತಿಯ ಹೆಸರಿನಲ್ಲಿ ಚುನಾವಣೆ ನಡೆಸುವ ಬದಲು, ಕೆಲ ತಂತ್ರಗಳ ಮೂಲಕ ಚುನಾವಣಾ ತಯಾರಿ ನಡೆಸಲು ಬೊಮ್ಮಾಯಿ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಈ ತಂತ್ರದ ಭಾಗವಾಗಿ ಕರ್ನಾಟಕದಲ್ಲಿಯೂ ಉತ್ತರಪ್ರದೇಶ ಮಾದರಿಯಲ್ಲಿ ಹಿಂದೂ ಮತಬ್ಯಾಂಕ್ ನ್ನು ಒಗ್ಗೂಡಿಸುವ ಪ್ರಯತ್ನ ಜೋರಾಗಿದೆ. ಉತ್ತರಪ್ರದೇಶದಲ್ಲಿ ಕಾಶಿ, ಮಥುರಾ, ಗಂಗಾ ಸೇರಿದಂತೆ ಹಿಂದೂ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಚುನಾವಣೆ ನಡೆಸಿದ್ದರು. ಹಿಂದುತ್ವವನ್ನು ಮುಖ್ಯ ಅಸ್ತ್ರವನ್ನಾಗಿ ಬಳಸಿದ್ದರು. ಈಗ ಇದೇ ತಂತ್ರವನ್ನು ಹಂತ-ಹಂತವಾಗಿ ಕರ್ನಾಟಕದಲ್ಲಿ ಪ್ರಯೋಗಿಸಲು ಬೊಮ್ಮಾಯಿ ಮುಂದಾಗಿದ್ದಾರೆ.

ಹಿಜಾಬ್ ವಿವಾದ ಬಿಜೆಪಿಯ ತಂತ್ರವಲ್ಲದಿದ್ದರು ಲಾಭ ಮಾತ್ರ ಬಿಜೆಪಿಗೆ ತಂದುಕೊಟ್ಟಿತು. ಇದೀಗ ಮದರಸಾಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರುವುದು, ಅಂಜನಾದ್ರಿ ಬೆಟ್ಟ ಅಭಿವೃದ್ದಿ, ದೇವಾಲಯಗಳಿಗೆ ಸ್ವಾಯತ್ತತೆ, ಮತಾಂತರ ನಿಷೇಧ ಕಾಯ್ದೆ ಹೀಗೆ ಈಗಾಗಲೇ ಮಾಡಿರುವ ತಂತ್ರಗಳು ಹಿಂದೂ ಮತಬ್ಯಾಂಕ್ ನ್ನು ಒಗ್ಗೂಡಿಸಿವೆ. ಮುಂದಿನ ದಿನಗಳಲ್ಲಿ ಅದರ ಪ್ರಭಾವ ಇನ್ನಷ್ಟು ತೀವ್ರವಾಗಲಿದೆ. ಇನ್ನು ಬಿಜೆಪಿ ರೂಪಿಸಿರುವ ತಂತ್ರಗಳಿವೆ. ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಹಿಂದುತ್ವದ ಅಸ್ತ್ರ ಈಗ ಕಾಂಗ್ರೆಸ್ ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಅಲ್ಪಸಂಖ್ಯಾತ ಮತಗಳ ಜೊತೆಗೆ ಹಿಂದೂ ಮತಗಳನ್ನು ಹೇಗೆ ಒಗ್ಗೂಡಿಸುವುದು ಎಂಬುದು ಕಾಂಗ್ರೆಸ್ ಗೆ ಅರ್ಥವಾಗುತ್ತಿಲ್ಲ. ಆದರೆ ಬಿಜೆಪಿ ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ ಎಂಬ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಸಾಕಷ್ಟು ಯಶಸ್ಸು ಕಂಡಿದೆ. ರಾಜ್ಯದಲ್ಲಿ ಸದ್ಯ ಜಾತಿ-ಜಾತಿಗಳ ನಡುವೆ ಸಮನ್ವಯತೆ ಇದ್ದು, ಸರಣಿ ವಿವಾದಗಳಿಂದ ಹಿಂದೂ ಮತಬ್ಯಾಂಕ್ ಒಗ್ಗೂಡಿದೆ. ಇನ್ನೊಂದೆಡೆ ಕಾಂಗ್ರೆಸ್‌ನ ಜಾತಿತಂತ್ರ ವರ್ಕೌಟ್ ಆಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯು 80 vs 20 ಆಗಲಿದೆ. ಅದರ ಲಾಭ ಬಿಜೆಪಿಗಾಗಲಿದೆ.

Exit mobile version