Bengaluru: ಇತ್ತೀಚೆಗೆ ಬೆಂಗಳೂರು (Bengaluru) ಜನರು ಬೀದಿ ನಾಯಿಗಳ ಹಾವಳಿಗೆ ಒಳಗಾಗುತ್ತಿದ್ದು, ಹಾಗಾಗಿ ಬೃಹತ್ ಬೆಂಗಳೂರು (BBMP Released Street Dogs List) ಮಹಾನಗರ
ಪಾಲಿಕೆ ಬೀದಿ ನಾಯಿಗಳ ಸಮೀಕ್ಷೆ ಮಾಡಿ ಮುಗಿಸಿದೆ. ವಲಯವಾರು ಬೀದಿ ನಾಯಿಗಳ ಪಟ್ಟಿಯನ್ನು ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ (Trilok Chandra) ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಲ್ಲಿ ಒಟ್ಟು 2,79,335 ಬೀದಿ ನಾಯಿಗಳನ್ನು (BBMP Released Street Dogs List) ಪಾಲಿಕೆ ಗುರುತಿಸಿದೆ.
ನಗರದಲ್ಲಿ 2019ರ ಸಮೀಕ್ಷೆ ಪ್ರಕಾರ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದ್ದು, ಸುಮಾರು 32000 ಬೀದಿ ನಾಯಿಗಳು ಕಾಲಕ್ರಮೇಣವಾಗಿ ಕಡಿಮೆಯಾಗಿದೆ. ಈ 2.79 ಲಕ್ಷ ಬೀದಿ ನಾಯಿಗಳ
ಪೈಕಿ 71.85% ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಬಿಬಿಎಂಪಿ (BBMP) ಬೀದಿ ನಾಯಿ ಸಮೀಕ್ಷೆಗೆ ಒಟ್ಟು 50 ತಂಡಗಳನ್ನು ಪಾಲಿಕೆ ರಚಿಸಿತ್ತು.
ರೇಬೀಸ್ (Rabbis) ರೋಗವನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಬಿಬಿಎಂಪಿ ಸ್ಪೆಷಲ್ ಕಮಿಷನರ್ ತ್ರಿಲೋಕ್ ಚಂದ್ರ ಪ್ರತಿಕ್ರಿಯಿಸಿದ್ದಾರೆ. ಪರಿಪಾಲನೆ ದೃಷ್ಟಿಯಿಂದಲೂ ಬೀದಿನಾಯಿಗಳ
ಸಮೀಕ್ಷೆ ನಡೆಸಲಾಗಿದ್ದು, ಪಾಲಿಕೆ ಸತತವಾಗಿ ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೀದಿ ನಾಯಿಗಳ ಸಮೀಕ್ಷೆ ನಡೆದು ನಾಲ್ಕು ವರ್ಷ ಆಗಿತ್ತು. ವೈಜ್ಞಾನಿಕವಾಗಿ 50 ತಂಡಗಳ ಮೂಲಕ ನಾವು ಸಮೀಕ್ಷೆ ನಡೆಸಿ ವರದಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಬಿಬಿಎಂಪಿ ಕಡೆಯಿಂದಲೇ ಸಮೀಕ್ಷೆ
ಸಿಬ್ಬಂದಿಗಳಿಗೆ ನಾವು ತರಬೇತಿ ಕೊಟ್ಟಿದ್ದೆವು. ಸಮೀಕ್ಷೆ ನಡೆಸಲು ಡ್ರೋನ್ ಅನ್ನು ಕೂಡ ಬಳಸಲಾಗಿದೆ. ಕೆರೆ ಹಾಗೂ ಖಾಲಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಡ್ರೋನ್ ಬಳಸಲಾಗಿದೆ.
ಬೀದಿನಾಯಿಗಳ ವಿವರ
ಪಶ್ಚಿಮ ವಲಯ : 22026
ದಕ್ಷಿಣ ವಲಯ : 23241
ಪೂರ್ವ ವಲಯ : 37685
ಆರ್.ಆರ್.ನಗರ : 41266
ಬೊಮ್ಮನಹಳ್ಳಿ ವಲಯ : 39183
ದಾಸರಹಳ್ಳಿ ವಲಯ : 21221
ಮಹಾದೇವಪುರ : 58372
ಯಲಹಂಕ ವಲಯ : 36434
ಒಟ್ಟು : 279335
ಟೆಕ್ನಾಲಜಿ (Technology) ಮೂಲಕ ಈ ರೀತಿ ಬೀದಿನಾಯಿಗಳ ಸಮೀಕ್ಷೆಗೂ ಬಳಸಿ ಯಶಸ್ವಿಯಾಗಿದ್ದೇವೆ. ಬೀದಿನಾಯಿಗಳ ಮೇಲೆ ನಿಗಾ ಇಡಲು ನಾಯಿಗಳಿಗೆ ಜಿಯೋ ಟ್ಯಾಗಿಂಗ್ (Geo Tagging)
ಮಾಡಲಾಗುತ್ತೆ. ಮೈಕ್ರೋ ಚಿಪ್ (Micro Chip) ಅಳವಡಿಕೆ ಮಾಡುವ ಮೂಲಕ ಬೀದಿನಾಯಿಗಳ ಮೇಲೆ ನಿಗಾ ಇಡಬಹುದು ಎಂದು ತಿಳಿಸಿದ್ದಾರೆ.
- ಭವ್ಯಶ್ರೀ ಆರ್.ಜೆ