ಎಸ್ಸೆಸ್ಸೆಲ್ಸಿ ಪರೀಕ್ಷೆಯಂತೆ ದ್ವಿತೀಯ ಪರೀಕ್ಷೆಗೂ ಕೂಡ ಹಿಜಾಬ್ ನಿಷೇಧ : ಬಿ.ಸಿ ನಾಗೇಶ್!

bc nagesh

ಬೆಂಗಳೂರು : ಇದೇ ಏಪ್ರಿಲ್ ತಿಂಗಳ 22 ರಿಂದ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ(Second PUC) ಪರೀಕ್ಷೆಗೆ(Exam) ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್(Hijab) ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ ಎಂದು ಶಿಕ್ಷಣ ಸಚಿವರಾದ(Education Minister) ಬಿ.ಸಿ ನಾಗೇಶ್(BC Nagesh) ತಿಳಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಚರ್ಚೆಯಾದಂತ ಹಿಜಾಬ್ ಪ್ರಕರಣ, ಹೈಕೋರ್ಟ್ ಮೆಟ್ಟಿಲೇರಿ ತೀರ್ಪಿನ ಮೂಲಕ ಅಂತ್ಯವಾಯಿತು. ಹೈಕೋರ್ಟ್ ಆದೇಶದ ಮೇರೆಗೆ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಕೂಡ ಹೈಕೋರ್ಟ್ ಕೊಟ್ಟ ತೀರ್ಪಿನಂತೆ ಶಾಲಾ-ಕಾಲೇಜು ವಸ್ತ್ರಸಂಹಿತೆ ನಿಯಮ ಪಾಲನೆ ಕಡ್ಡಾಯ ಎಂಬುದನ್ನು ಹೇಳಿತು. ಅದೇ ನಿಯಮದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ಅವಕಾಶ ಕೊಡುವುದಿಲ್ಲ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದರು. ಆದ್ರೂ ಕೂಡ ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಪ್ರತಿಭಟಿಸಿದರು.

ಸದ್ಯ,ಈಗ ಏಪ್ರಿಲ್ 22 ರಿಂದ ಮೇ 18 ರವರೆಗೂ ನಡೆಯಲಿರುವ ದ್ವಿತೀಯ ಪರೀಕ್ಷೆಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ. ಹಿಜಾಬ್ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಪ್ರವೇಶ ಮಾಡುವಂತಿಲ್ಲ. ಈ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಲಿದೆ. ರಾಜ್ಯದಲ್ಲಿ ಶೇ.90 ರಷ್ಟು ಕಾಲೇಜುಗಳಲ್ಲಿ ಸಮವಸ್ತ್ರ ಚಾಲ್ತಿಯಲ್ಲಿದೆ.

ಆದ್ರೆ ಕೇವಲ 10 ರಷ್ಟು ಕಾಲೇಜಿನಲ್ಲಿ ಸಮವಸ್ತ್ರವಿಲ್ಲ! ಇದೇ ಕಾರಣವಿಟ್ಟುಕೊಂಡು ಪರೀಕ್ಷಾ ಕೊಠಡಿಗೆ ಯಾವುದೇ ಧರ್ಮ ಸೂಚನೆ ವಸ್ತ್ರಧರಿಸಿ ಹಾಜರಾಗುವಂತಿಲ್ಲ. ಪರೀಕ್ಷೆಗೆ ಹಾಜರಾಗದೇ, ಗೈರು ಹಾಜರಾದರೇ ಮರು ಪರೀಕ್ಷೆ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

Exit mobile version