Visit Channel

ತುಳಸಿ ದಳಗಳು ಕೀಳುವ ಮುನ್ನ ಈ ನಿಯಮಗಳು ತಿಳಿದಿರಲಿ

1-1625920242

ಜಗತ್ತಿನ ಸೃಷ್ಠಿಕರ್ತನಾದ ವಿಷ್ಣುವಿಗೆ ತುಳಸಿ ತುಂಬಾ ಪ್ರಿಯವಾದ ಸಸ್ಯ. ತುಳಸಿ ಇಲ್ಲದೆ ಯಾವುದೇ ಧಾರ್ಮಿಕ ಆಚರಣೆಯೂ ಸಂಫೂರ್ಣವಾಗದು. ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡ ಬಹಳ ಪವಿತ್ರವಾಗಿದ್ದು, ಪ್ರತಿ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲ, ಅದರ ಔಷಧೀಯ ಗುಣಗಳಿಂದಾಗಿ ಈ ಸಸ್ಯಕ್ಕೆ ವಿಶೇಷ ಸ್ಥಾನಮಾನ ಇದೆ. ಇಂತಹ ತುಳಸಿ ಎಲೆಗಳನ್ನು ಮುರಿಯಲು ಕೆಲವೊಂದು ನಿಮಯಮಗಳಿವೆ. ಅವುಗಳಾವುವು ಇಲ್ಲಿ ನೋಡೋಣ.

ತುಳಸಿ ಗಿಡದ ಧಾರ್ಮಿಕ ಮಹತ್ವ:
ತುಳಸಿ ದಳವಿಲ್ಲದೆ ವಿಷ್ಣು ಮತ್ತು ಶ್ರೀ ಕೃಷ್ಣನ ಯಾವುದೇ ಪೂಜೆ ಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಜೊತೆಗೆ ತುಳಸಿ ದಳವು ಹನುಮಂತನಿಗೂ ತುಂಬಾ ಪ್ರಿಯವಾಗಿದೆ. ಸಾಯುವ ವೇಳೆ ತುಳಸಿ ದಳದಿಂದ ಗಂಗಾಜಲ ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಸಿಗುವುದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ತುಳಸಿ ಎಲೆಗಳು ಮತ್ತು ಗಂಗಾಜಲ ಈ ಎರಡೂ ವಿಷಯಗಳನ್ನು ಯಾವುದೇ ಸಂದರ್ಭದಲ್ಲೂ ಹಳೆಯ ಮತ್ತು ಅಶುದ್ಧವೆಂದು ಹೇಳುವುದಿಲ್ಲ. ತುಳಸಿಯನ್ನು ಪ್ರತಿದಿನ ಪೂಜಿಸುವ ಮನೆಗಳಿಗೆ ದುಷ್ಟ ಶಕ್ತಿಗಳು ಪ್ರವೇಶಿಸುವುದಿಲ್ಲ ಎಂದು ನಂಬಿಕೆಯಿದೆ. ಇದರೊಂದಿಗೆ ಮನೆಯ ಸಂತೋಷ ಮತ್ತು ಸಮೃದ್ಧಿಯೂ ಹೆಚ್ಚಾಗುವುದು.

ತುಳಸಿಯ ವೈಜ್ಞಾನಿಕ ಪ್ರಾಮುಖ್ಯತೆ:
ತುಳಸಿಯು ಪ್ರತಿಜೀವಕ ಗುಣಗಳನ್ನು ಹೊಂದಿದ್ದು, ಅದು ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಸಸ್ಯವನ್ನು ಎಲ್ಲಿ ನೆಡಲಾಗುತ್ತದೆಯೋ, ಅದರ ಸುತ್ತಲಿನ ಗಾಳಿಯು ಶುದ್ಧವಾಗುತ್ತದೆ. ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ, ದೇಹದಲ್ಲಿ ಶಕ್ತಿ ಹೆಚ್ಚಾಗುವುದರ ಜೊತೆಗೆ ವ್ಯಕ್ತಿಯ ಆಯಸ್ಸು ವೃದ್ಧಿಸುವುದು. ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ತುಳಸಿ ಬಹಳ ಪರಿಣಾಮಕಾರಿ ಪರಿಹಾರವಾಗಿದೆ.

ತುಳಸಿ ಎಲೆಗಳನ್ನು ಕೊಯ್ಯುವ ನಿಯಮಗಳು:
ವಾಸ್ತು ಪ್ರಕಾರ, ತುಳಸಿಯನ್ನು ಯಾವಾಗಲೂ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನೆಡಬೇಕು. ತುಳಸಿ ಸಸ್ಯವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಮತ್ತು ಅಡುಗೆಮನೆಯ ಬಳಿ ನೆಡಬಾರದು.
ತುಳಸಿ ವಿಷ್ಣುವಿಗೆ ತುಂಬಾ ಪ್ರಿಯ, ಆದರೆ ತುಳಸಿ ಎಲೆಗಳನ್ನು ಶಿವ ಮತ್ತು ಅವನ ಮಗ ಗಣೇಶನಿಗೆ ಎಂದಿಗೂ ಅರ್ಪಿಸಬಾರದು.
ತುಳಸಿ ಸಸ್ಯ ಮತ್ತು ಅದರ ಎಲೆಗಳನ್ನು ಸ್ನಾನ ಮಾಡದೇ ಎಂದಿಗೂ ಮುಟ್ಟಬಾರದು ಅಥವಾ ಮುರಿಯಬಾರದು.
ತುಳಸಿ ಎಲೆಗಳನ್ನು ಉಗುರುಗಳ ಬದಲಾಗಿ ಬೆರಳುಗಳ ಸಹಾಯಗಳಿಂದ ಮುರಿದು ತೆಗೆಯಬೇಕು. ಏಕೆಂದರೆ ತುಳಸಿ ಎಲೆಯನ್ನು ಉಗುರಿನಿಂದ ಮುರಿಯುವುದು ದೋಷಕ್ಕೆ ಕಾರಣವಾಗುವುದು.
ಕಾರಣಾಂತರಗಳಿಂದ ಮನೆಯಲ್ಲಿ ತುಳಸಿ ಒಣಗಿ ಹೋದರೆ ಅದನ್ನು ನದಿಗೆ ಎಸೆಯಬೇಕು ಅಥವಾ ನೆಲದಲ್ಲಿ ಹೂಳಬೇಕು. ತುಳಸಿ ಸಸ್ಯವನ್ನು ಎಂದಿಗೂ ಇಲ್ಲಿ ಮತ್ತು ಅಲ್ಲಿ ಎಸೆಯಬಾರದು.
ತುಳಸಿ ಎಲೆಗಳನ್ನು ಭಾನುವಾರದಂದು ಹರಿದುಹಾಕಬಾರದು ಅಥವಾ ಮುರಿಯಬಾರದು ಏಕೆಂದರೆ ಭಾನುವಾರ ವಿಷ್ಣುವಿನ ಅತ್ಯಂತ ನೆಚ್ಚಿನ ದಿನವೆಂದು ಪರಿಗಣಿಸಲಾಗಿದೆ.
ಏಕಾದಶಿ, ಸಂಕ್ರಾಂತಿ, ಸೂರ್ಯಗ್ರಹಣ, ಚಂದ್ರ ಗ್ರಹಣ ಮತ್ತು ಸಂಜೆಯ ಸಮಯದಲ್ಲಿ ತುಳಸಿ ಎಲೆಗಳನ್ನು ಕೊಯ್ದು ತರಬಾರದು.

Latest News

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

Lal singh Chadda
ಮನರಂಜನೆ

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.