ಕರೆಂಟ್ ಶಾಕ್ ಆಗುತ್ತೆ ಎಚ್ಚರ! ಕೋರಮಂಗಲದಲ್ಲಿ ಬಲಿಗಾಗಿ ಕಾಯುತ್ತಿವೆ ವಿದ್ಯುತ್ ಕಂಬಗಳು. ಬೆಸ್ಕಾಂ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಕಾದಿದೆ ಅಪಾಯ!

ಕರೆಂಟ್ ಶಾಕ್ ಆಗುತ್ತೆ ಎಚ್ಚರ! ಕೋರಮಂಗಲದಲ್ಲಿ ಬಲಿಗಾಗಿ ಕಾಯುತ್ತಿವೆ ವಿದ್ಯುತ್ ಕಂಬಗಳು.

ವಿದ್ಯುತ್ ಕಂಬಗಳಲ್ಲಿ ನೇತಾಡುತ್ತಿರುವ ಪವರ್ ಕೇಬಲ್‌ಗಳು, ಯಾವಾಗ ಬೇಕಾದ್ರೂ ಶಾಕ್ ಹೊಡೆಯೋ ಸ್ಥಿತಿಯಲ್ಲಿರುವ ಟ್ರಾನ್ಸ್ಫಾರ್ಮರ್‌ಗಳು. ಮರ, ಮನೆಗಳ ಗೋಡೆಗಳಲ್ಲಿ ರಾಶಿ ರಾಶಿ ಬಿದ್ದಿರುವ ಕೇಬಲ್‌ಗಳು. ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಜನರ ಪ್ರಾಣದ ಜೊತೆ ಚಲ್ಲಾಟ.

ಇದು ಬೆಂಗಳೂರಿನ ಕೋರಮಂಗಲದಲ್ಲಿ ಕಂಡು ಬರುತ್ತಿರುವ ದೃಶ್ಯಗಳು. ಇಲ್ಲಿನ ವಿದ್ಯುತ್ ಕಂಬಗಳು ಜನರ ಪ್ರಾಣ ಬಲಿಗಾಗಿ ಕಾಯುತ್ತಿವೆ. ಕೋರಮಂಗಲದ ಶ್ರೀರಾಮಮಂದಿರದ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಅವ್ಯವಸ್ಥೆ ನೋಡಿದಾಗ ಸಾರ್ವಜನಿಕರಿಗೆ ಆತಂಕವುAಟಾಗುತ್ತೆ.

ಈ ರಸ್ತೆಯಲ್ಲಿರುವ ಟ್ರಾನ್ಸಫಾರ್ಮರ್ ಬಾಕ್ಸ್ಗಳನ್ನು ಸುರಕ್ಷಿತವಾಗಿ ಮುಚ್ಚಿಯೇ ಇಲ್ಲ. ಬೆಸ್ಕಾನವರ ನಿರ್ಲಕ್ಷö್ಯದಿಂದ ಜನರು ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ ಅನ್ನೋದು ಸಾರ್ವಜನಿಕರ ದೂರು.

ಇಲ್ಲಿನ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಕೇಬಲ್‌ಗಳು ಮಾತ್ರ ನೇತಾಡುತ್ತಿಲ್ಲ, ಜೊತೆಗೆ ಬೇರೆ ಬೇರೆ ಟೆಲಿಫೋನ್ ಕಂಪೆನಿಗಳ ಕೇಬಲ್‌ಗಳನ್ನು ಕೂಡ ಅಕ್ರಮವಾಗಿ ಅಳವಡಿಸಲಾಗಿದೆ. ಟೆಲಿಫೋನ್ ಕಂಪೆನಿ ಸಿಬ್ಬಂದಿ ವಿದ್ಯುತ್ ಕಂಬಗಳಿಗೆ ಅಕ್ರಮವಾಗಿ ಕೇಬಲ್ ಹಾಕುವಾಗ ವಿಜಯಟೈಮ್ಸ್ನ ಸಿಟಿಜನ್ ಜರ್ನಲಿಸ್ಟ್ ಕಿರಣ್ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ರು.

ಈ ರೀತಿ ಕೋರಮಂಗಲದಲ್ಲಿ ಹೆಚ್ಚಿನ ವಿದ್ಯುತ್ ಕಂಬಗಳು ಸುರಕ್ಷತೆ ಇಲ್ಲದೆ ಜನರಿಗೆ ಶಾಕ್ ಕೊಡಲು ಸಿದ್ಧವಾಗಿವೆ. ಅದ್ರಲ್ಲೂ ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟಬುತ್ತಿ. ಹಾಗಾಗಿ ಅಪಾಯ ಸಂಭವಿಸೋ ಮುನ್ನ ಬೆಸ್ಕಾಂನವರು ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರನ್ನು ಅಪಾಯದಿಂದ ಪಾರು ಮಾಡಬೇಕು ಅನ್ನೋದು ವಿಜಯಟೈಮ್ಸ್ ಆಗ್ರಹ.

ಬೆಂಗಳೂರಿಂದ ಕಿರಣ್, ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್

Exit mobile version