ಬೆಲ್ಲ ತಿನ್ನುವ ಮೊದಲು ಒಂದು ಬಾರಿ ಯೋಚಿಸಿ!

ಮಂಡ್ಯ, ಡಿ. 11: ಕರ್ನಾಟಕದ ಪ್ರಸಿದ್ಧ ಜಿಲ್ಲೆ ಸಕ್ಕರೆನಾಡು ಮಂಡ್ಯ. ಇದು ಹೆಸರು ಮಾತ್ರ ಅಲ್ಲ. ಇದಕ್ಕೆ ಆದ ಇತಿಹಾಸವಿದೆ,ರಾಜ ಮಹಾರಾಜರು ಆಳಿದ ಪ್ರದೇಶವಾಗಿದೆ. ಆದರೆ ಕೆಲವೊಂದು ವಿಷಯಗಳಿಂದ ತೊಂದರೆ ಶುರುವಾಗುತ್ತಿದೆ. ಅದರಲ್ಲಿ ಕಲಬೆರಕೆ ಬೆಲ್ಲವೂ ಒಂದು.

ಕೆಲವು ಆಲೆಮನೆಗಳಲ್ಲಿ ತಯಾರಾಗುವ ಬೆಲ್ಲಕ್ಕೆ ಕಳಪೆ ಸಕ್ಕರೆ ಬಳಸಲಾಗುತ್ತಿದೆ ಎನ್ನುವ ಆರೋಪ ಬಹುಕಾಲದಿಂದ ಕೇಳಿ ಬಂದಿದೆ. ಬೆಲ್ಲ ಕಲರ್ ಬರಲಿ ಅನ್ನೋ ಕಾರಣಕ್ಕೆ ಉತ್ತರ ಭಾರತ ಮೂಲದ ಒಡೆತನದಲ್ಲಿರುವ ಕೆಲವು ಮಂದಿ ಕೆಲ ರಾಸಾಯನಿಕಗಳನ್ನು ಮಿಶ್ರಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡಿರುವ ಅಲೆಮನೆಗಳನ್ನು ನಡೆಸುತ್ತಿರುವ ಮಂಡ್ಯದ  ಸ್ಥಳೀಯ ರೈತರು, ಸಕ್ಕರೆ ಹಾಕಿ ಬೆಲ್ಲ ತಯಾರಿಸುತ್ತಿರುವವರ ವಿರುದ್ಧ ಕ್ರಮಕ್ಕಾಗಿ ಡಿಸಿ ಬಳಿ ದೂರು ನೀಡಿದ್ದಾರೆ.

ನಾವು ತಿನ್ನುವ ಪದರ್ಥಾಗಳು ನಮ್ಮ ದೇಹಕ್ಕೆ ಸೇರಿ ಪೌಷ್ಟಿಕಾಂಶ ನೀಡಬೇಕು ಅದರ ಬದಲು ಅನಾರೋಗ್ಯ ಉಂಟುಮಾಡುತ್ತಿವೆ. ಇದರ ಪರಿಣಾಮ ಹಲವು ರೋಗಗಳನ್ನು ಹುಟ್ಟಿಹಾಕುತ್ತಿವೆ. ಬಡ ಜನರಿಗೆ ಇದು ತುಂಬ ಸಮಸ್ಯೆ ತಂದೊಡ್ಡುತ್ತಿವೆ ಯಾಕೆಂದರೆ ಇವರಿಗೆ ಸರಿಯಾದ ರೀತಿಯಲ್ಲಿ ಆಹಾರ ಸಿಗುವುದಿಲ್ಲ, ಇದರಲ್ಲು ಈ ರೀತಿಯ ಕಲಬೆರಕೆ ಆಹಾರ ಸೇವನೆಯಿಂದ ಇನ್ನೂ ಅನಾರೋಗ್ಯಗಳು ಉಂಟಾಗುತ್ತಿವೆ. ಅದಕ್ಕೆ ಚಿಕಿತ್ಸೆ ಪಡೆಯಲು ಸಹ ಹಣದ ಕೊರತೆ ಉಂಟಾಗುವುದು ಕಾಣುತ್ತದೆ. ಆದ್ದರಿಂದ ಇಂತಹ ಚಟುವಟಿಕೆಗಳನ್ನು ಸರ್ಕಾರ ಆದಷ್ಟು ಬೇಗನೆ ಕಡಿವಾಣ ಹಾಕಬೇಕಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಯಾವೆಲ್ಲ ಕಡೆಯಲ್ಲಿ ಬೆಲ್ಲವನ್ನು ತಯಾರು ಮಾಡಲಾಗುತ್ತಿದೆ ಎನ್ನುವ ವಿವರವನ್ನು ನೀಡುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಕೆಲವು ಮಂದಿ ಹೀಗೆ ಬೆಲ್ಲಕ್ಕೆ ಕೆಮಿಕಲ್‌ ಮಿಕ್ಸ್‌ ಮಾಡುವದರಿಂದ ಬೇಗನೇ ಹಾಳಾಗುತ್ತದೆ. ಜೊತೆಗೆ ಹಲವು ರೋಗಗಳಿಗೂ ಕಾರಣವಾಗುತ್ತದೆ ಎನ್ನಲಾಗಿದೆ. ಇದಲ್ಲದೇ ಮಂಡ್ಯ ಬೆಲ್ಲಕ್ಕೆ ಇರುವ ಹೆಸರನ್ನು ಕೂಡ ಹಾಳು ಮಾಡುತ್ತಿರುವುದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಇದು ಒಂದು ರೀತಿಯಲ್ಲಿ ಯಾರೋ ಮಾಡೋ ಕೃತ್ಯಕ್ಕೆ ಇಡಿ ಊರಿನ ಹೆಸರು ಹಾಳುಮಾಡುವಂತೆ ಕಾಣುತ್ತದೆ.

Exit mobile version