ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಲಿದೆ ಐತಿಹಾಸಿಕ ಕ್ಷೇತ್ರವಾದ ಬೇಲೂರು, ಹಳೆಬೀಡು, ಸೋಮನಾಥಪುರ!

unesco

ಕರ್ನಾಟಕದಲ್ಲಿ ಇತಿಹಾಸಕ್ಕೆ ತನ್ನದೇ ಆದ ವಿಶೇಷವಾದ ಗೌರವವಿದೆ. ಪುರಾತನಕಾಲದಿಂದಲೂ ಕೂಡ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು, ಮೈಸೂರಿನ ಸೋಮನಾಥಪುರ ಮುಂತಾದ ಪ್ರಸಿದ್ಧ ತಾಣಗಳು ಉತ್ತಮ ಖ್ಯಾತಿಯನ್ನು ಪಡೆದುಕೊಂಡಿದೆ. ಅಂದಿನಿಂದ ಇಂದಿಗೂ ಕೂಡ ಈ ದೇವಾಲಯವು ಇದೆ ಖ್ಯಾತಿಯನ್ನು ಮುಂದುವರೆಸಿಕೊಂಡು ಬಂದಿದೆ. ಬೇಲೂರು, ಹಳೇಬೀಡು, ಸೋಮನಾಥಪುರ ಇವೆಲ್ಲವೂ ಕೂಡಾ ಶಿಲ್ಪ ಕಲೆಯ ತವರೂರು ಎಂಬ ಖ್ಯಾತಿ ಪಡೆದುಕೊಂಡಿದೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಕ್ಕೆ ಬರುತ್ತಾರೆ.

ಬೇಲೂರಿನ ಚೆನ್ನಕೇಶವ ದೇವಾಲಯ ಬಹು ಪ್ರಸಿದ್ಧವಾದ ದೇವಾಲಯವಾಗಿದೆ. ಹಾಗೆಯೇ ಹಳೇಬೀಡಿನ ಪುಷ್ಪಗಿರಿ ಬೆಟ್ಟದ ತುದಿಯಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಮೈಸೂರಿನಲ್ಲಿಯೂ ಕೂಡ ಸೋಮನಾಥಪುರದಲ್ಲಿ ಚನ್ನಕೇಶವ ದೇವಾಲಯವಿದೆ. ಹೀಗೆ ಈ ಕ್ಷೇತ್ರಗಳು ಒಂದಲ್ಲ ಒಂದು ರೀತಿಯಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಆದ್ದರಿಂದಲೇ ಇಂದು ವಿಶ್ವಪರಂಪರೆಗೆ ಈ ಮೂರು ದೇವಾಲಯಗಳು ಕೂಡ ಸೇರ್ಪಡೆಯಾಗಲು ನಾಮನಿರ್ದೇಶನಗೊಂಡಿದೆ.

ಈ ದೇವಾಲಯಗಳು ವಿಶ್ವಪರಂಪರೆ ಪಟ್ಟಿಗೆ ಸೇರುವುದು ನಮ್ಮ ಕರ್ನಾಟಕ ಮತ್ತು ನಮ್ಮ ಇತಿಹಾಸಕ್ಕೆ ಮತ್ತಷ್ಟು ಹೆಮ್ಮೆಯನ್ನು ತಂದಿದೆ. ಹೊಯ್ಸಳರು ಹಳೆಬೀಡನ್ನು 13ನೇ ಶತಮಾನದಿಂದ 19ನೇ ಶತಮಾನಗಳವರೆಗೂ ಕೂಡ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನು ಆಳ್ವಿಕೆ ಮಾಡುತಿದ್ದರು. ಕರ್ನಾಟಕದ ಬೇಲೂರು, ಹಳೇಬೀಡು, ಮತ್ತು ಸೋಮನಾಥಪುರ ದೇವಾಲಯಗಳು ವಿಶ್ವಪರಂಪರೆ ಪಟ್ಟಿಗೆ ತಾತ್ಕಾಲಿಕವಾಗಿ ನಾಮನಿರ್ದೇಶನಗೊಂಡಿದೆ.

ಈ ಹೊಯ್ಸಳ ಶಿಲ್ಪಕಲಾ ಶೈಲಿಯ ಸಂಯೋಜನೆ ಏಪ್ರಿಲ್ 15-2014 ರಿಂದಲೇ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದೆ. ಅದರಂತೆಯೇ ಈಗಿನ 2022-23ರ ವರ್ಷಕ್ಕೆ ವಿಶ್ವಪರಂಪರೆಯ ಪಟ್ಟಿಯಲ್ಲಿ ನಮ್ಮ ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ವಿಶ್ವಪರಂಪರೆ ಪಟ್ಟಿಯಲ್ಲಿ ಪರಿಗಣಿಸಲು ನಾಮನಿರ್ದೇಶನಗೊಂಡಿದೆ. ಈ ಒಂದು ಕಾರ್ಯದಲ್ಲಿ ಯುನೆಸ್ಕೋಗೆ ದಾಖಲೆಯನ್ನು ಸಲ್ಲಿಸುವುದು ಮತ್ತು ಆ ದಾಖ ಲೆಗಳನ್ನು ಪರಿಶೀಲನೆ ಮಾಡುವುದು ಇದು ಪ್ರಥಮ ಹಂತವಾಗಿದೆ.

ಭಾರತದ ಖಾಯಂ ಪ್ರತಿನಿಧಿಯಾದ ವಿಶಾಲ್ ಶರ್ಮಾರವರು ಈ ನಾಮನಿರ್ದೇಶನವನ್ನು ಯುನೆಸ್ಕೋದ ಲಾಜ್ ಎಲುಂಡೆಗೆ ಸಲ್ಲಿಸಿದ್ದಾರೆ. ಇದು ನಮ್ಮ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. ವಿಶ್ವಪರಂಪರೆಗೆ ಬೇಲೂರು ಹಳೇಬೀಡು ಮತ್ತು ಸೋಮನಾಥಪುರ ನಾಮನಿರ್ದೇಶನಗೊಂಡಿದ್ದು ನಮ್ಮ ಕರ್ನಾಟಕಕ್ಕೆ ಹೆಮ್ಮೆ ತರುವಂತಹ ವಿಚಾರವಾಗಿದೆ ಮತ್ತು ನಮ್ಮ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದೆ ಎನ್ನಬಹುದು.

Exit mobile version