ಕಣ್ಣು ಸೌಂದರ್ಯದ ಪ್ರತೀಕ, ಅದರಲ್ಲೂ ಚಿಕ್ಕ ಮಕ್ಕಳಿಗೂ ಮತ್ತು ಹೆಣ್ಣು ಮಕ್ಕಳಿಗೆ ಎಷ್ಟೇ ಕಣ್ಣಿನ ಜಾಗ್ರತೆ ಹೊಂದಿದರೂ ಅದು ಕಡಿಮೆಯೇ ಸರಿ. ಈ ಕಾಂತಿಹೀನ ಕಣ್ಣುಗಳು ಸುಂದರವಾಗಿಡಲು ಕಾಡಿಗೆ ಅಥವಾ ಕಾಜಲ್ ಹಚ್ಚಿದರೆ ಇನ್ನು ಅಂದ ಹೆಚ್ಚಿಸುತ್ತದೆ.
ಇತ್ತಿಚಿನ ದಿನಗಳಲ್ಲಿ ಅಂಗಡಿಯಲ್ಲಿ ಸಿಗುವ ಕಾಡಿಗೆಗಳು ಕೆಲವೊಮ್ಮೆ ಕಣ್ಣು ಹಾಗೂ ಚರ್ಮಕ್ಕೆ ಅಪಾಯ ತಂದೊಡ್ಡಬಹುದು, ಆದ್ದರಿಂದ ಮನೆಯಲ್ಲೇ ನೈಸರ್ಗಿಕವಾಗಿ ಮತ್ತು ಸುಲಭವಾಗಿ ಕಾಡಿಗೆ ತಯಾರಿಸುವುದು ಇನ್ನು ಪರಿಣಾಮಕಾರಿಯಾಗಿರುತ್ತದೆ. ನಾವಿಂದು ನೈಸರ್ಗಿಕವಾಗಿ ಕಾಡಿಗೆ ತಯಾರಿಸುವ ವಿದಾನವನ್ನು ತಿಳಿಸಿಕೊಡುತ್ತೇವೆ.
ಕಾಡಿಗೆ ತಯಾರಿಸುವ ವಿಧಾನ:
ಇದಕ್ಕೆ ಬೇಕಾಗುವ ಸಾಮಾಗ್ರಿಗಳು
ಬಾದಾಮಿ, ಬತ್ತಿ, ಹರಳೆಣ್ಣೆ ಮತ್ತು ತುಪ್ಪ.
ತಯಾರಿಸುವ ವಿಧಾನ:
ಒಂದು ದೀಪದ ಕಂಬದಲ್ಲಿ ಹರಳೆಣ್ಣೆ ಹಾಕಬೇಕು, ದೀಪದ ಬತ್ತಿಯಿಂದ ಬಾದಾಮಿಯನ್ನು ಇಕ್ಕಳದ ಸಹಾಯದಿಂದ ಸಣ್ಣ ಪ್ರಮಾದ ಶಾಖದಲ್ಲಿ ಸುಡಬೇಕು ತದನಂತರ, ಸುಟ್ಟು ಕರಕಲು ಆದ ಬಾದಾಮಿಯನ್ನು ತಣ್ಣಗಾಗಲು ಬಿಡಬೇಕು. ಇದನ್ನು ಚೆನ್ನಾಗಿ ನುಣ್ಣಗೆ ಪುಡಿ ಮಾಡಕೊಳ್ಳಬೇಕು, ಆದ ನಂತರ ಜರಡಿ ಮಾಡಿ ಇದಕ್ಕೆ ಸ್ವಲ್ಪ ತುಪ್ಪ ಬೆರಿಸಿದ ನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡು, ಎರಡರಿಂದ ಮೂರು ತಿಂಗಳವರೆಗು ಇದನ್ನು ಉಪಯೋಗಿಸಬಹುದು.
ಕಾಡಿಗೆಯೊಂದ ಆಗುವ ಉಪಯೋಗ
ಪ್ರತಿನಿತ್ಯ ಕಾಡಿಗೆ ಹಚ್ಚುವುದರಿಂದ ಕಣ್ಣು ಉರಿ, ಕಣ್ಣು ಕೆಂಪಾಗುವುದು ಮುಂತಾದ ಸಮಸ್ಯೆಗಳು ಇರುವುದಿಲ್ಲ, ಅಷ್ಟೇ ಅಲ್ಲದೆ ಕಣ್ಣಿನ ದೃಷ್ಟಿಗೆ ಇದು ಒಳ್ಳೆಯದು ಎಂಬುದಾಗಿ ಹೇಳಲಾಗುತ್ತದೆ.