ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಸಲಾಡ್ ಸೇವಿಸ್ತೀರಾ? ಹಾಗಾದ್ರೆ ಏನಾಗುತ್ತೆ ಎನ್ನುವ ಮಾಹಿತಿ ಹೀಗಿದೆ.

Benefits of Salad: ನಾವು ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಸಲಾಡ (Salad)ನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡರೆ ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಟಿಕೌಂಶಗಳು ದೊರೆಯುತ್ತವೆ. ನಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಉತ್ತಮ ಆಹಾರವನ್ನು ಸೇವಿಸುವುದು ಅವಶ್ಯಕವಾಗಿದ್ದು, ಯಾವ ರೀತಿಯ ಆಹಾರವನ್ನು ಸೇವಿಸುವುದರಿಂದ ಯಾವ ರೀತಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಯಾವ ಆಹಾರದಿಂದ ತೊಂದರೆ ಅನ್ನುವುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Salad

*ನಮ್ಮ ಆರೋಗ್ಯದ ಅಭಿವೃದ್ಧಿಗಾಗಿ ನಾವು ತಿನ್ನುವ ಆಹಾರದಲ್ಲಿನ ಪೌಷ್ಟಿಕೌಂಶಗಳು ಮಹತ್ವದ ಪಾತ್ರವನ್ನುವಹಿಸುತ್ತದೆ.
*ಅನೇಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಹೃದಯದ (Heart) ಆರೋಗ್ಯಕ್ಕಾಗಿ ಒಂದು ಒಳ್ಳೆಯ ಆಹಾರವೆಂದರೆ ಅದು ಸಲಾಡ್.
*ಸಲಾಡಿನಲ್ಲಿ ವಿಶೇಷವಾಗಿ ತರಕಾರಿಗಳನ್ನು ಸೇವಿಸಿದರೇ, ತೂಕ ನಿಯಂತ್ರಣಕ್ಕೆ ಸಾಕಷ್ಟು ಸಹಾಯವಾಗುತ್ತದೆ.

*ಸಲಾಡಿನಲ್ಲಿ ನಾರಿನ ಪ್ರಮಾಣ ಹೆಚ್ಚಾಗಿದ್ದು, ಕ್ಯಾಲೋರಿಗಳು (Calories) ಕೂಡ ತುಂಬಾ ಕಡಿಮೆ ಇರುತ್ತದೆ. ವಿಶೇಷವಾಗಿ ಹಸಿರು ಎಲೆ ತರಕಾರಿಗಳು, ಕಾಳುಗಳು, ಹಣ್ಣು, ಬೇಳೆ, ಬೀನ್ಸ್ ಇತ್ಯಾದಿಗಳು ಸಲಾಡಿನಲ್ಲಿ ಸೇರಿದ್ದರೆ ಬಹಳ ಉತ್ತಮ.
*ಉತ್ತಮ ಜೀರ್ಣಶಕ್ತಿಯನ್ನು ನಿಮ್ಮದಾಗಿಸುತ್ತದೆ.

*ಸಲಾಡಿನಲ್ಲಿರುವ ನಾರಿನ ಅಂಶವು ಸಕ್ಕರೆ ಕಾಯಿಲೆ ಇರುವವರಿಗೆ ಬ್ಲಡ್ ಶುಗರ್ ಲೆವಲ್ (Blood Sugar Level) ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.
*ನಮ್ಮ ಭಾರತೀಯ ತರಕಾರಿಗಳು ಮತ್ತು ಅದರಿಂದ ತಯಾರಾಗುವ ಅಡುಗೆಗಳು ಸಾಕಷ್ಟು ಪ್ರಮಾಣದ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿವೆ.

*ಸಲಾಡಿನಲ್ಲಿ ಅಪಾರವಾಗಿ ಪ್ರೋಟೀನ್, ವಿಟಮಿನ್ (Protien, Vitamin) ಮತ್ತು ಖನಿಜಾಂಶಗಳು ಅಪಾರವಾಗಿರುವುದರಿಂದ ನಮ್ಮ ದೇಹಕ್ಕೆ ಅಗತ್ಯವಾಗಿರುವ ಪೌಷ್ಟಿಕೌಂಶಗಳನ್ನು ಒದಗಿಸುತ್ತದೆ.
*ಸಲಾಡಿನಲ್ಲಿರುವ ವಿಟಮಿನ್ ಹಾಗೂ ಖನಿಜಾಂಶಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಅನೇಕ ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತದೆ.
*ಜನರಲ್ ನ್ಯೂಟ್ರಿಯೆಂಟ್ಸ್ (Nutrients) ಎನ್ನುವ ಅಧ್ಯಯನದ ಪ್ರಕಾರ ಸಲಾಡಿನಿಂದ ನಮ್ಮ ಕರುಳಿನ ಭಾಗದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ (Bacteria) ಬೆಳವಣಿಗೆ ಹೆಚ್ಚಾಗುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಇದು ಉತ್ತಮಗೊಳಿಸುತ್ತದೆ.

Exit mobile version