ಬಂದ್ ಕಾವು: ರಾಪಿಡೊ ಚಾಲಕರ ಮೇಲೆ ಪ್ರತಿಭಟನಾಕಾರರಿಂದ ಹಲ್ಲೆ, ರಸ್ತೆಗಿಳಿದ ವಾಹನಗಳ ಟೈಯರ್ ಪಂಚರ್

Bengaluru: ಬೆಂಗಳೂರಿನಲ್ಲಿ (Bengaluru) ಬಂದ್ ಬಿಸಿ ಹೆಚ್ಚಾಗುತ್ತಿದ್ದು, ಕೆಲ ಕಡೆ ರಾಪಿಡೊ, ಗೂಡ್ಸ್ (Bengaluru bandh live updates) ವಾಹನಗಳು ಎಂದಿನಂತೆ ಸೇವೆ ಆರಂಭಿಸಿದ್ದು,

ಹೀಗಾಗಿ ಪ್ರತಿಭಟನಾಕಾರರು ಟಯರ್​​ಗಳ ಗಾಳಿ ಬಿಟ್ಟು ವಾಹನ ಸವಾರರನ್ನು ಹಿಗ್ಗಾಮುಗ್ಗ ಥಳಿಸಿ ಆಕ್ರೋಶ ಹೊರ ಹಾಕಿದ ಘಟನೆ ನಗರದ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ

ರಾಪಿಡೊ (Rapido) ಚಾಲಕ ಮತ್ತು ಹಿಂಬದಿ ಸವಾರನ (Bengaluru bandh live updates) ಮೇಲೆ ಹಲ್ಲೆ ನಡೆದಿದೆ.

ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗೆ ಆಗ್ರಹಿಸಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೃಹತ್ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಖಾಸಗಿ ಬಸ್, ಓಲಾ ಆಟೋ (Ola Auto), ಕ್ಯಾಬ್, ಉಬರ್

ಆಟೋ ಕ್ಯಾಬ್, ಗೂಡ್ಸ್ ವಾಹನಗಳು ರಸ್ತೆಗೆ ಇಳಿದಿಲ್ಲ. ಆದರೆ ಬೆಂಗಳೂರಿನ ಕೆಲವೆಡೆ ರಾಪಿಡೊ, ಗೂಡ್ಸ್ ವಾಹನಗಳು ಎಂದಿನಂತೆ ಸೇವೆ ಆರಂಭಿಸಿರುವ ಕಾರಣ ಪ್ರತಿಭಟನಾಕಾರರು

ಟಯರ್​​ಗಳ ಗಾಳಿ ಬಿಟ್ಟು ವಾಹನ ಸವಾರರನ್ನು ಹಿಗ್ಗಾಮುಗ್ಗ ಥಳಿಸಿ ಆಕ್ರೋಶ ಹೊರ ಹಾಕಿರುವ ಘಟನೆ ಸಂಭವಿಸಿದೆ.

ನಗರದ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ರಾಪಿಡೊ ಚಾಲಕ ಮತ್ತು ಹಿಂಬದಿ ಸವಾರನ ಮೇಲೆ ಹಲ್ಲೆ ನಡೆದಿದ್ದು, ಅವರುಗಳು ಹೆಲ್ಮೆಟ್ (Helmet) ಹಾಕಿದ್ದರೂ ತಲೆ ಮೇಲೆ ಹೊಡೆದು

ಹಲ್ಲೆ ಮಾಡಲಾಗಿದೆ. ಅಲ್ಲದೆ ಹತ್ತಕ್ಕೂ ಹೆಚ್ಚು ಕ್ಯಾಬ್ ಚಾಲಕರು ರಾಪಿಡೋ ಸವಾರನ ಬೈಕ್ ಬೀಳಿಸಿ ಚಾಲಕನನ್ನು ಅಟ್ಟಾಡಿಸಿ ಹೊಡೆದಿರುವುದಲ್ಲದೆ ರಾಪಿಡೊ ಚಾಲಕರು ಖಾಸಗಿ ಸಾರಿಗೆ

ಸಂಘಟನೆ ಒಕ್ಕೂಟದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಬಾಡಿಗೆ ಹೋಗ್ತಿದ್ದ ಕಾರು ಚಾಲಕನ ಮೇಲೆ‌ ಗಾಂಧಿನಗರದ (Gandhi Nagar) ಮೌರ್ಯ ಸರ್ಕಲ್‌ ಬಳಿ ಹಲ್ಲೆ ನಡೆಸಿದ್ದು, ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕಾರು ಚಾಲಕನ ರಕ್ಷಣೆ ಮಾಡಿದ್ದು, ಇನ್ನು ಮತ್ತೊಂದೆಡೆ ರಾಪಿಡೊ ಬೈಕ್ ಸವಾರನ ಜೊತೆ ಗಲಾಟೆ ಮಾಡಿಕೊಂಡು ಹಲ್ಲೆಗೆ ಯತ್ನಿಸಿದ ಘಟನೆ

ನಡೆದಿರುವುದು ಬೆಳಕಿಗೆ ಬಂದಿದೆ.

ಖಾಸಗಿ ಸಾರಿಗೆ ಒಕ್ಕೂಟದವರೇ ರಾಪಿಡೊ ಬೈಕ್ ಬುಕ್ ಮಾಡಿ, ಬೈಕನ್ನ ಬೊಮ್ಮನಹಳ್ಳಿಯ (Bommanhalli) ಮುಖ್ಯ ರಸ್ತೆಗೆ ಕರಿಸಿಕೊಂಡು ಸ್ಥಳಕ್ಕೆ ಬೈಕ್ ಬಂದ ಮೇಲೆ ಚಾಲಕನ ಮೇಲೆ

ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ. ಮತ್ತು ಬೆಂಗಳೂರಿನ ಎಸ್​ಪಿ ರೋಡ್​ನ ಸುಜಾತಾ ಥಿಯೇಟರ್ ಬಳಿ ಐದಾರು ಗೂಡ್ಸ್ ಗಾಡಿಗಳ ಟೈರ್ ಗಾಳಿ ತೆಗೆದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.

ಅಲ್ಲದೆ ಟೈರ್ ಗಾಳಿ ತೆಗೆದಿದ್ದರಿಂದ ಕೆಲವೊತ್ತು ವಾಹನಗಳು ನಿಂತಲ್ಲೇ ನಿಂತಿದ್ದವು. ಈ ವೇಳೆ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿತ್ತು. ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು,

ಟ್ರಾಫಿಕ್ ಕ್ಲಿಯರ್ ಮಾಡಿದರು. ಇನ್ನು ಪೊಲೀಸರು ಬರುತ್ತಿದ್ದಂತೆ ವಾಹನಗಳ ಗಾಳಿ ತೆಗೆದವರು ಎಸ್ಕೇಪ್ ಆಗಿದ್ದರು ಈ ವೇಳೆ ಕೆಲ ಚಾಲಕರು ಗಾಳಿ ಹೋಗಿದ್ದ ಟೈರ್ ನಲ್ಲೇ ವಿಧಿ ಇಲ್ಲದೇ ಸಂಚಾರ

ಮಾಡುವ ಪರಿಸ್ಥಿತಿ ಎದುರಾಯಿತು.

ಇದನ್ನು ಓದಿ: ಸಿಸಿಬಿ ದಾಳಿ: ಅಪ್ರಾಪ್ತವರಿಗೆ ಮಧ್ಯ ಮಾರಾಟ ಹಿನ್ನೆಲೆ ಬೆಂಗಳೂರಿನ ಪಬ್, ಬಾರ್ ಗಳ ಮೇಲೆ ಸಿಸಿಬಿ ದಾಳಿ

Exit mobile version