ಬೆಂಗಳೂರು ಬಂದ್: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಹಿನ್ನೆಲೆ ಹೆಚ್ಚುವರಿ ಬಿಎಂಟಿಸಿ ಕಾರ್ಯಾಚರಣೆ

Bengaluru: ಸಾರಿಗೆ ಸಂಘಟನೆಗಳು ಬೆಂಗಳೂರು (Bengaluru bandh live) ಬಂದ್ಗೆ ಕರೆ ನೀಡಿರುವ ಬೆನ್ನಲ್ಲೇ ರಸ್ತೆ ತೆರಿಗೆ ಸಂಪೂರ್ಣವಾಗಿ ರದ್ದು ಮಾಡಬೇಕು ಹಾಗೂ ಶಕ್ತಿ

ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಣೆ ಮಾಡಬೇಕು ಎಂಬ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ಇಂದು (ಸೋಮವಾರ 11) ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್ಗೆ

(Bandh)ಕರೆ ನೀಡಿರುವ ಕಾರಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಚರಣೆ ಮಾಡಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಪ್ರತಿದಿನ 5,061ರ ವೇಳಾಪಟ್ಟಿಯಲ್ಲಿ 57,450 ಬಸ್ಗಳನ್ನು ಕಾರ್ಯಾಚರಣೆ ಗೊಳಿಸುತ್ತಿದ್ದು, ಬೆಂಗಳೂರು ನಗರ ಹಾಗೂ ಹೊರಹಲಯದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಟ್ರಿಪ್ ಗಳನ್ನು

ಹೆಚ್ಚು ಮಾಡಲು ಬಿಎಂಟಿಸಿಯು (BMTC) ಕ್ರಮ ಕೈಗೊಂಡಿದೆ ಅಲ್ಲದೆ ಇದರ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ (Ramalinga Reddy) ಅವರು ಪ್ರಯಾಣಿಕರಿಗೆ

ಈ ಬಂಧನಿಂದ ಯಾವುದೇ ರೀತಿಯ ಅನಾನುಕೂಲ ಆಗದಂತೆ (Bengaluru bandh live) ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಖಾಸಗಿ ಆಟೋ(Auto), ಟ್ಯಾಕ್ಸಿ (Taxi) ಮತ್ತು ವಾಹನಗಳ ಚಾಲಕರ ಒಕ್ಕೂಟವು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯ ರಾತ್ರಿಯವರೆಗೂ

ಕರೆ ಕೊಟ್ಟಿದ್ದು, ಬಿಎಂಟಿಸಿಯು ಬೆಂಗಳೂರಿನ ಶಾಲಾ, ಕಾಲೇಜು (College) ಮಕ್ಕಳು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಗರದ ಪ್ರಮುಖ ಬಸ್ ನಿಲ್ದಾಣವಾದ ಕೆಂಪೇಗೌಡ

ಬಸ್ ನಿಲ್ದಾಣ ಕೆ.ಆರ್ ಮಾರ್ಕೆಟ್ (K R Market) ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಸರ್ಜಾಪುರ (Sarjapura), ಕಾಡುಗೋಡಿ, ಅತ್ತಿಬೆಲೆ, ಆನೇಕಲ್ (Anekal), ಬನ್ನೇರುಘಟ್ಟ,

ಜಿಗಣಿ, ಬಿಡದಿ, ತಾವರೆಕೆರೆ, ನೆಲಮಂಗಲ (Nelamangala) ಹೊಸಕೋಟೆ ಹಾಗೂ ವರವರ್ತಲ, ಒಳವರ್ತುಲ ರಸ್ತೆಗಳಿಗೆ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ

ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ 500 ವೇಳಾಪಟ್ಟಿ ಹಾಗೂ ಸುಮಾರು ನಾಲ್ಕು ಸಾವಿರ ಹೆಚ್ಚುವರಿ ಟ್ರಿಪ್ಗಳನ್ನು ನಡೆಸಲು ಯೋಜನೆಯನ್ನು ರೂಪಿಸಲಾಗಿದೆ.

ಅಲ್ಲದೆ ಪ್ರಾಮಾಣಿಕರ ಅಧಿಕ ದಟ್ಟಣೆ ಕಂಡುಬರುವ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆಗೆ ಕ್ರಮವಹಿಸುವುದಾಗುವುದಲ್ಲದೆ ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ

ಜಂಕ್ಷನ್ಗಳಲ್ಲಿ (Junction) ಸಂಸ್ಥೆಯ ಅಧಿಕಾರಿ ಸಿಬ್ಬಂದಿಗಳನ್ನು ಮತ್ತು ಸಾರಥಿಗಸ್ತು ಪಡೆಗಳನ್ನು ನಿಯೋಜಿಸಲಾಗುತ್ತಿದೆ.

ಸುಮಾರು 100 ಹೆಚ್ಚುವರಿ ಟ್ರಿಪ್ಗಳನ್ನು (Trip) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕಲ್ಪಿಸಲಾಗಿದ್ದು, ಬೇಡಿಕೆಗನುಗುಣವಾಗಿ ಇನ್ನು ಹೆಚ್ಚಿನ ಟ್ರಿಪ್ ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ

ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಟ್ರಾಫಿಕ್‌ ಗುಡ್ ನ್ಯೂಸ್‌: ದಂಡ ಕಟ್ಟದೆ ಬಾಕಿ ಉಳಿಸಿದವರಿಗೆ 50% ರಿಯಾಯಿತಿ

Exit mobile version