ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್ ; ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥ ಸಾಧ್ಯತೆ

Bengaluru : ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿರೋಧಿಸಿ ಖಾಸಗಿ ಸಾರಿಗೆ ಮಾಲೀಕರ ಸಂಘವು ಸೆಪ್ಟೆಂಬರ್ (bengaluru bandh- sep11 2023)

11 ರಂದು ಬೆಂಗಳೂರು ಬಂದ್ಗೆ ಕರೆ ನೀಡಿದೆ. ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ನಂತರ ರಾಜ್ಯದ

ಎಲ್ಲ ಖಾಸಗಿ ಬಸ್ ಚಾಲಕರು, ಆಟೋ ಚಾಲಕರು ಮತ್ತು ಇತರೆ ಸಾರಿಗೆ ಸಂಸ್ಥೆಗಳು ತೀವ್ರ ನಷ್ಟಕ್ಕೆ ಸಿಲುಕಿವೆ. ಹೀಗಾಗಿ ಉಚಿತ ಸಾರಿಗೆ ಯೋಜನೆಯನ್ನು ಕಾಂಗ್ರೆಸ್ (Congress) ಸರ್ಕಾರ

ಹಿಂಪಡೆಯಬೇಕು ಅಥವಾ ನಮಗೆ ಬೇರೆ ವ್ಯವಸ್ಥೆ ಕಲ್ಪಿಸಬೇಕೆಂಬ (bengaluru bandh- sep11 2023) ಒತ್ತಾಯ ಕೇಳಿ ಬಂದಿತ್ತು.

ಪ್ರತಿ ಚಾಲಕನಿಗೆ 10,000 ಆರ್ಥಿಕ ನೆರವು ಮತ್ತು ಬೈಕ್ ಟ್ಯಾಕ್ಸಿಗಳ (Bike Taxi) ನಿಷೇಧ, ಆ್ಯಪ್ ಆಧಾರಿತ ಅಗ್ರಿಗೇಟರ್ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು, ಚಾಲಕರ ಮಕ್ಕಳಿಗೆ ಶೈಕ್ಷಣಿಕ ಸಾಲ,

ವಿದ್ಯಾರ್ಥಿ ವೇತನ, ಅಸಂಘಟಿತ ವಾಣಿಜ್ಯ ಚಾಲಕರನ್ನು ಬೆಂಬಲಿಸಲು ನಿಗಮ ಸ್ಥಾಪನೆಸುವ ಬೇಡಿಕೆಗಳನ್ನು 30ಕ್ಕೂ ಹೆಚ್ಚು ಖಾಸಗಿ ಚಾಲಕರ ಸಂಘಟನೆಗಳು ಸರ್ಕಾರದ ಮುಂದಿಟ್ಟಿವೆ.

ಕಾವೇರಿ ಕಾವು: ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಕಾನೂನು ಹೋರಾಟಕ್ಕೆ ಮುಂದಾದ ರೈತರು

ಇನ್ನು ಈ ಮುಷ್ಕರದಲ್ಲಿ ಆಟೋ ರಿಕ್ಷಾಗಳು (Auto Rikshaw), ಖಾಸಗಿ ಟ್ಯಾಕ್ಸಿಗಳು, ಕ್ಯಾಬ್ಗಳು ಮತ್ತು ಶಾಲಾ ಬಸ್ಗಳು ಚಾಲಕರು ಭಾಗಿಯಾಗುವ ಸಾಧ್ಯತೆ ಇದೆ. ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

(Ramalinga Reddy) ಅವರು ಈ ಹಿಂದೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮುಷ್ಕರವನ್ನು ಜುಲೈ 27 ಕ್ಕೆ ಮುಂದೂಡಲಾಗಿತ್ತು. ಆದರೆ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು

ಫೆಡರೇಶನ್ ಆಫ್ ಕರ್ನಾಟಕ (Federation Of Karnataka)ರಾಜ್ಯ ಖಾಸಗಿ ಸಾರಿಗೆ ಸಂಘ ಹೇಳಿದೆ.

ಇದಕ್ಕೂ ಮುನ್ನ ಜೀವಮಾನ ತೆರಿಗೆ ವಿಧಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಘೋಷಿಸಿದ ನಂತರ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟವು ಪ್ರತಿಭಟನೆಯನ್ನು ನಡೆಸಿತ್ತು,

ಆದರೆ ಅಧಿಕಾರಿಗಳು ನಿರ್ಧಾರವನ್ನು ಹಿಂಪಡೆದು ಪ್ರಸ್ತುತ ರಸ್ತೆ ತೆರಿಗೆಯನ್ನು ವಿಧಿಸಿದ ನಂತರ ಅವರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಇದೀಗ ಖಾಸಗಿ ಚಾಲಕರ ಪ್ರತಿಭಟನೆಯೂ

ರಾಜ್ಯದ ಸಾರಿಗೆ ವ್ಯವಸ್ಥೆಯ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.

Exit mobile version