Bengaluru : ಬೆಂಗಳೂರಿನ ಅತಿಕ್ರಮಣದಾರರ ಪಟ್ಟಿಯಲ್ಲಿ ವಿಪ್ರೋ, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಅನೇಕ VVIP ಹೆಸರುಗಳು!

Bengaluru

Bengaluru : : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಸುಮಾರು 700 ಪ್ರಮುಖ ಚರಂಡಿಗಳನ್ನು ಅತಿಕ್ರಮಿಸಿದ ವಿವಿಐಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಟೆಕ್ ಪಾರ್ಕ್ಗಳು, ಉನ್ನತ ಮಟ್ಟದ ಬಿಲ್ಡರ್ಗಳು, ಖಾಸಗಿ ಆಸ್ಪತ್ರೆಗಳು ಮತ್ತು ಡೆವಲಪರ್ಗಳು ಸೇರಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ ಸಮೀಕ್ಷೆ(Survey) ನಡೆಸಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ವಿಪ್ರೋ, ಇಕೋ ಸ್ಪೇಸ್, ಪ್ರೆಸ್ಟೀಜ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಬಾಗ್ಮನೆ ಟೆಕ್ ಪಾರ್ಕ್ ಮತ್ತು ದಿವ್ಯಶ್ರೀ ವಿಲ್ಲಾಗಳಂತಹ ಪ್ರತಿಷ್ಠಿತ ಹೆಸರುಗಳು ಕಂಡು ಬಂದಿವೆ.

ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸುವಂತೆ ಅವರಿಗೆಲ್ಲಾ ನೋಟಿಸ್ ನೀಡಿದೆ. ಮುಂದಿನ ವಾರಗಳಲ್ಲಿ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಸಾಮಾನ್ಯ ಜನರು, ವ್ಯಾಪಾರಿಗಳು, ರಾಜಕಾರಣಿಗಳು,

https://youtu.be/7CZbXW4vyjs

ವಿವಿಐಪಿ ಅಥವಾ ಟೆಕ್ ಕಂಪನಿಗಳು ಸೇರಿದಂತೆ ಎಲ್ಲರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ, ಬಿಬಿಎಂಪಿ ಬೆಂಗಳೂರು ನಗರದಲ್ಲಿ 696 ಅತಿಕ್ರಮಣ ಮಾಡಿರುವ ಪ್ರದೇಶಗಳನ್ನು ಗುರುತಿಸಿದ್ದು, ಮಳೆನೀರು ಚರಂಡಿಗಳನ್ನು ಕಟ್ಟಡಗಳು ಅತಿಕ್ರಮಿಸಿ ಮಳೆನೀರಿನ ಹರಿಗೆ ತಡೆಯೊಡ್ಡಿವೆ.

ಈ ಪೈಕಿ ಮಹದೇವಪುರದಲ್ಲಿ(Mahadevpura) ಅತಿ ಹೆಚ್ಚು (175) ಅತಿಕ್ರಮಣಗಳಾಗಿವೆ. ವಿನಾಶಕಾರಿ ಪ್ರವಾಹದ ಹಿನ್ನೆಲೆಯಲ್ಲಿ ಬೇಂಗಳೂರು ನಗರದ ನಾಗರಿಕ ಸಂಸ್ಥೆಯು ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇನ್ನು ಬಿಬಿಎಂಪಿ ಅಧಿಕಾರಿಗಳ ಮುಂದಿರುವ ಸವಾಲೆಂದರೆ ಮಹದೇವಪುರದ ವಸತಿ ಅಪಾರ್ಟ್ಮೆಂಟ್ ಕಟ್ಟಡ ಮಳೆನೀರು ಹರಿಯಲು ಅಡ್ಡಿಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಮಹಾವೀರ್ ರೀಗಲ್ ಅಪಾರ್ಟ್ಮೆಂಟ್ನಲ್ಲಿರುವ ಮನೆ ಮಾಲೀಕರಿಗೆ ತೆರವು ನೋಟಿಸ್ ಕಳುಹಿಸಲಾಗಿದೆ, ಆದರೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version