ನಾಪತ್ತೆಯಾದ ಮಕ್ಕಳಲ್ಲಿ ಮೂವರನ್ನು ಪತ್ತೆ ಹಚ್ಚಿದ ಪೊಲೀಸರು

missing

ಬೆಂಗಳೂರು ಅ 12 : ಮನೆಯಲ್ಲಿ ತಂದೆ ತಾಯಿ ಆಟ ಆಡುವುದಕ್ಕೆ ಬಿಡುವುದಿಲ್ಲ ಯಾವಾಗ್ಲೂ ಒದಿಕೊಳ್ಳಿ ಅಂತಾರೇ ಅಂತ ಮನೆಬಿಟ್ಟು ತೆರಳಿದ್ದ ಬಾಗಲುಗುಂಟೆ ಯ ಮೂವರು ಮಕ್ಕಳನ್ನ ಉಪ್ಪಾರಪೇಟೆ ಪೊಲೀಸರು ರಕ್ಷಿಸಿದ್ದಾರೆ. ಬಾಗಲುಗುಂಟೆಯ ಸೌಂದರ್ಯ ಸ್ಕೂಲ್ ನಲ್ಲಿ ಹತ್ತನೇ ತರಗತಿ ಓದುತ್ತಿದ್ದ ಪರೀಕ್ಷಿತ್, ನಂದನ್ ಹಾಗೂ 9 ನೇ ತರಗತಿ ವಿದ್ಯಾರ್ಥಿ ಕಿರಣ್ ಕಳೆದ ಶನಿವಾರ ಬೆಳಗ್ಗೆ 5:30 ರ ಸುಮಾರಿಗೆ ಮನೆಯಿಂದ ತೆರಳಿದ್ರು. ಮನೆಯಿಂದ ತೆರಳೋ ವೇಳೆ ತಲಾ ಒಂದು ಸಾವಿರದಂತೆ ಮೂರು ಸಾವಿರ ಹಣ ತೆಗೆದುಕೊಂಡು ಹೋಗಿದ್ರು. ಪರೀಕ್ಷಿತ್ ಹಾಗೂ ನಂದನ್ ಇಬ್ಬರು ವಿದ್ಯಾರ್ಥಿಗಳು ನಮಗೆ ಕಬ್ಬಡಿ ಅಂದ್ರೆ ತುಂಬಾ ಇಷ್ಟ. ನೀವು ಯಾವಾಗ್ಲೂ ಒದ್ಕೊಳಿ ಅಂತೀರಾ. ನಾವು ಕಬ್ಬಡಿ ಆಟದಲ್ಲೆ ಒಳ್ಳೆ ಹೆಸರುಗಳಿಸಿ ಹಣ ಸಂಪಾದನೆ ಮಾಡ್ತೀವಿ ಅಂತ ಪತ್ರ ಬರೆದು ಮನೆಬಿಟ್ಟು ತೆರಳಿದ್ರು. 

ಶನಿವಾರ ಬೆಳಗ್ಗೆ ಮನೆಯಿಂದ ಹೊರಡೋ ಬಗ್ಗೆ ಮೂವರು ಬಾಲಕರು ಶುಕ್ರವಾರ ಸಂಜೆ ಶಾಲೆಬಿಟ್ಟಾಗ ಮಾತಾಡಿಕೊಂಡಿದ್ರಂತೆ. ಅದ್ರಂತೆ ಜಾಗಿಂಗ್ ಹೋಗಿ ಬರ್ತಿವಿ ಅಂತ ಮನೆಯಿಂದ ಹೊರಬಂದವ್ರು ನೇರವಾಗಿ ಜಾಲಹಳ್ಳಿ ಬಳಿಗೆ ಬಂದಿದ್ದಾರೆ. ಅಲ್ಲಿಂದ ಬಸ್ ನ ಮೂಲಕ ಕೆಂಗೇರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಕೆಂಗೇರಿಯಿಂದ  ಮಂಗಳೂರಿಗೆ ಹೋಗಲು ಪ್ರಯತ್ನಿಸಿದ್ದಾರೆ. ಆದ್ರೆ ಮಂಗಳೂರಿನ ಟ್ರೈನ್ ಸಿಗದಿದ್ದಕ್ಕೆ ಮೈಸೂರು ಟ್ರೈನ್ ಹತ್ತಿದ್ದಾರೆ. ಶನಿವಾರ ಇಡೀ ದಿನ ಮೈಸೂರು ಸುತ್ತಾಡಿ ಭಾನುವಾರ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಭಾನುವಾರ ಸಂಜೆಯಿಂದ ನಗರದ ಕಂಟೀರವ ಸ್ಟೇಡಿಯಂ ಬಳಿ ಕಾಲ ಕಳೆದಿದ್ದಾರೆ. ಮನೆಯಿಂದ ತಂದಿದ್ದ ಹಣ ಖಾಲಿಯಾಗ್ತಿದ್ದಂತೆ ಆನಂದ್ ರಾವ್ ಸರ್ಕಲ್ ಬಳಿ ಕೆಲಸ ಹುಡುಕಲು ಶುರು ಮಾಡಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿಯ ಹೋಟೆಲ್ ಹಾಗೂ ಪೇಪರ್ ಹಾಕುವವರ ಬಳಿ ಒಂದು ದಿನದ ಮಟ್ಟಿಗೆ ಸಂಜೆವರೆಗೂ ಕೆಲಸ ಕೊಡಿ ಅಂತ ಕೇಳಿದ್ದಾರೆ. ಈ ವೇಳೆ ಬೀಟ್ ನಲ್ಲಿದ್ದ ಉಪ್ಪಾರಪೇಟೆ ಸಬ್ ಇನ್ಸ್ ಪೆಕ್ಟರ್ ಮಾರುತಿ  ಕ್ರೈಂ ಸ್ಟಾಫ್ ಮಂಜುನಾಥ್ ಹಾಗೂ ಪ್ರಕಾಶ್ ಮಕ್ಕಳನ್ನ ಠಾಣೆಗೆ ಕರೆತಂದಿದ್ದಾರೆ. ಮೊದಲಿಗೆ ಮಕ್ಕಳನ್ನ ವಿಚಾರಣೆ ಮಾಡಿದ ವೇಳೆ ನಾವು ಪೀಣ್ಯಾದಿಂದ ಜಾಗಿಂಗ್ ಮಾಡ್ಕೊಂಡ್ ಬಂದಿದ್ದೀವಿ ಅಂದಿದ್ದಾರೆ. ಕಡೆಗೆ ಪೊಷಕರು ಬಾಗಲುಗುಂಟೆ ಯಲ್ಲಿ ನೀಡಿದ್ದ ದೂರಿನ ಪ್ರತಿಯನ್ನ ತೋರಿಸಿ ವಿಚಾರಿಸಿದಾಗ ಮಕ್ಕಳು ಅಪ್ಪ ಅಮ್ಮ ಆಟವಾಡಲಿಕ್ಕೆ ಬಿಡ್ತಿರಲಿಲ್ಲ. ಹೀಗಾಗಿ ಮನೆಯಿಂದ ಹೋಗಿದ್ವಿ ಎಂದಿದ್ದಾರೆ.

 ಇನ್ನು ಸೋಲದೇವನಹಳ್ಳಿ ಯಲ್ಲಿ ನಾಪತ್ತೆಯಾಗಿರೋ ನಾಲ್ವರ ಮಕ್ಕಳ ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. 21 ವರ್ಷದ ಯುವತಿ ಅಮೃತವರ್ಷಿಣಿ ಜೊತೆ ಮೂವರು ಮಕ್ಕಳು ನಾಪತ್ತೆಯಾಗಿದ್ದು, ನಾಲ್ವರ ಚಲನವಲನದ ಸಿಸಿಟಿವಿ ದೃಶ್ಯಾವಳಿ ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದ ಬಳಿ ಪೊಲೀಸರಿಗೆ ಪತ್ತೆಯಾಗಿದೆ. ಸದ್ಯ ನಾಲ್ಕು ಪ್ರತ್ಯೇಕ ಟೀಂ ರಚಿಸಿ ನಾಲ್ವರ ಮಕ್ಕಳ ಪತ್ತೆಗಾಗಿ ಬೆಂಗಳೂರು ಮಂಡ್ಯ ಬಳ್ಳಾರಿ ಬೀದರ್ ನಲ್ಲಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

Exit mobile version