Bengaluru : ಮಂಡೂಸ್ ಚಂಡಮಾರುತದ (Bengaluru Gets Cold Winds) ಪ್ರಭಾವದಿಂದಾಗಿ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆ ಮತ್ತು ಶೀತ ಗಾಳಿಯ ಹಿನ್ನೆಲೆಯಲ್ಲಿ,
ಆರೋಗ್ಯ ಇಲಾಖೆಯು ಜನರಿಗೆ, ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವ ಜನರು ಸೂಕ್ತ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.

ಈಗಾಗಲೇ ರಾಜ್ಯದಲ್ಲಿ ಮಂಡೂಸ್ ಚಂಡಮಾರುತದ ಪರಿಣಾಮವಾಗಿ ಒಂದು ವಾರದವರೆಗೆ ಮಳೆ ಮತ್ತು ಶೀತಗಾಳಿಯ ವಾತಾವರಣ ನಿರ್ಮಾಣವಾಗಿದೆ.
ಇದೀಗ ಮುಂದಿನ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ (West Bengal) ಮತ್ತೊಂದು ಚಂಡಮಾರುತದ ಮುನ್ಸೂಚನೆ ಇದೆ.
ಇದನ್ನೂ ಓದಿ : https://vijayatimes.com/biopic-of-vijaya-sankeshwar/
ಹೀಗಾಗಿ ಮತ್ತೆ ಶೀತಗಾಳಿ ಮತ್ತು ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ (Bengaluru Gets Cold Winds) ಹೇಳಿದೆ. ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಮುನ್ಸೂಚನೆ ಇದ್ದು, ದೀರ್ಘ ಪ್ರಯಾಣ,
ವಿಶೇಷವಾಗಿ ಪ್ರವಾಸಗಳನ್ನು ಕೈಗೊಳ್ಳಬೇಡಿ, ಕೂಲ್ ಡ್ರಿಂಕ್ಸ್, ಐಸ್ ಕ್ರೀಮ್, ತಂಪು ಪಾನೀಯ ಅಥವಾ ರೆಫ್ರಿಜರೇಟೆಡ್ ನೀರನ್ನು ಸೇವಿಸಬೇಡಿ,

ಮಳೆಯಲ್ಲಿ ನೆನೆಯಬೇಡಿ, ಚಳಿ ಮತ್ತು ಗಾಳಿಯ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳಬೇಡಿ. ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಎಂದು ಆರೋಗ್ಯ ಇಲಾಖೆ ಜನರಿಗೆ ಸಲಹೆ ನೀಡಿದೆ.
ಅದೇ ರೀತಿ ಬೆಚ್ಚಗಿನ ನೀರು ಅಥವಾ ಬೆಚ್ಚಗಿನ ಸೂಪ್ ಕುಡಿಯಿರಿ. ಬಿಸಿ ಆಹಾರವನ್ನು ಸೇವಿಸಿ, ಸ್ವೆಟರ್‌ಗಳು, ಸಾಕ್ಸ್‌ಗಳು ಮತ್ತು ಕೈಗವಸುಗಳನ್ನು ಧರಿಸುವುದರ ಮೂಲಕ ದೇಹವನ್ನು ಬೆಚ್ಚಗಿರಿಸಿಕೊಳ್ಳಿ.
ಸಾಮಾನ್ಯ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು ಇರುವವರ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ. ಕೆಮ್ಮು ಅಥವಾ ಸೀನುವಾಗ ಕರವಸ್ತ್ರವನ್ನು ಬಳಸಿ.
ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ ಎಂದು ಆರೋಗ್ಯ ಇಲಾಖೆಯ ತಜ್ಞರು ಸಲಹೆ ನೀಡಿದ್ದಾರೆ.
- ಮಹೇಶ್.ಪಿ.ಎಚ್