ಬೆಂಗಳೂರಿನಲ್ಲಿ ಶೇ.85ರಷ್ಟು ಕೆರೆಗಳು ಕಣ್ಮರೆಯಾಗಿವೆ!

Bengaluru

ರಾಜಧಾನಿ(Capital) ಬೆಂಗಳೂರಿನಲ್ಲಿ(Bengaluru) ಶೇಕಡಾ 85ರಷ್ಟು ಕೆರೆಗಳು(Lakes) ಇಂದು ಕಣ್ಮರೆಯಾಗಿವೆ. ಅತಿಯಾದ ನಗರೀಕರಣ, ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣದಿಂದ ಕೆರೆಗಳು ಕಣ್ಮರೆಯಾಗಿವೆ ಎಂದು ರಾಜ್ಯ ಹೈಕೋರ್ಟ್(Highcourt) ನಾಯಮೂರ್ತಿ ಬಿ. ವೀರಪ್ಪ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ರಾಜ್ಯ ಕಾನೂನು(Law) ಸೇವೆಗಳ ಪ್ರಾಧಿಕಾರ ಮತ್ತು ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ ಜಂಟಿಯಾಗಿ ಆಯೋಜಿಸಿದ್ದ, “ಕರ್ನಾಟಕ ಕೆರೆಗಳ, ಕಾಲುವೆಗಳ, ಸಾಮೂಹಿಕ ನೀರಿನ ನೆಲೆಗಳ ವಿಕೇಂದ್ರೀಕೃತ, ಸಾಮಾಜಿಕ ಒಳ್ಳಗೊಳ್ಳುವ ಮತ್ತು ಪರಿಸರ ವಿವೇಕದ ರಕ್ಷಣೆ ಮತ್ತು ಪುನರ್ವಸತಿ” ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 1780ರಲ್ಲಿ ಸಾವಿರಕ್ಕೂ ಅಧಿಕ ಕೆರೆಗಳಿದ್ದವು. ನಾಡಪ್ರಭು ಕೆಂಪೇಗೌಡರು(Nadaprabhu Kempegowdaru), ಮೈಸೂರು ಮಹಾರಾಜರು(Mysuru Maharajas) ಮತ್ತು ಬ್ರಿಟಿಷರು ಅನೇಕ ಕೆರೆಗಳನ್ನು ನಿರ್ಮಾಣ ಮಾಡಿದ್ದರು.

18ನೇ ಶತಮಾನದ ಪ್ರಾರಂಭದಲ್ಲಿ ಬೆಂಗಳೂರು ಕೆರೆಗಳಿಂದ ಸಮೃದ್ದವಾಗಿತ್ತು. ವಾತಾವರಣವು ಉತ್ತಮವಾಗಿತ್ತು. ಆದರೆ ಬೆಂಗಳೂರು ನಗರ ಬೆಳೆದಂತೆ ಕೆರೆಗಳು ಕಣ್ಮರೆಯಾದವು. ಅತಿಯಾದ ನಗರೀಕರಣ ಮತ್ತು ಕೆರೆಗಳ ಒತ್ತುವರಿ ಪರಿಣಾಮ 1970ರ ವೇಳೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಯ ಸಮಸ್ಯೆ ಕಾಣಿಸಿಕೊಂಡಿತು. ಆದರೆ ಜನರು ಆಗಲೂ ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ಇಂದು ಬೆಂಗಳೂರಿನ ಶೇಕಡಾ 85ರಷ್ಟು ಕೆರೆಗಳು ನಾಶವಾಗಿವೆ.

ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಯೋಜನೆಗಳನ್ನು ರೂಪಿಸಬೇಕು. ಕೆರೆಗಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನುಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಎನ್.ಕೆ ಪಾಟೀಲ್, ಕೆರೆಗಳಿಂದಲೇ ಬೆಂಗಳೂರು ಸುಂದರ ನಗರವಾಗಿ ಕಾಣಿಸುತ್ತಿತ್ತು. ಆದರೆ ಇಂದು ಕೆರೆಗಳು ಕಣ್ಮರೆಯಾಗಿವೆ. ಕೆರೆಗಳ ಮಹತ್ವದ ಅರಿವು ಇಂದಿಗೂ ಸಾರ್ವಜನಿಕರಲ್ಲಿ ಮೂಡಿಲ್ಲ.

ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಂಗಳೂರು ನಗರ ತೀವ್ರ ನೀರಿದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮ ಮುಂಬರುವ ಪೀಳಿಗೆ ಮೇಲೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Exit mobile version