ಇಂದಿನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಒಂದು ವರ್ಷ ವಾಹನ ಸಂಚಾರ ನಿಷೇಧಿಸಿದ ಬಿಎಂಆರ್‌ಸಿಎಲ್

Bengaluru: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಪ್ರಮುಖ ರಸ್ತೆಯಾಗಿರುವ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿಮೆಟ್ರೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅನುಕೂಲವಾಗುವ ಉದ್ದೇಶದಿಂದ ಬನ್ನೇರುಘಟ್ಟ ರಸ್ತೆಯ 1 ಕಿಲೋ ಮೀಟರ್ ಸಂಪೂರ್ಣವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಷನ್ ಲಿಮಿಟೆಡ್ (Metro Rail Corporation Limited) ಪ್ರಕಟಣೆ ಹೊರಡಿಸಿದೆ.

ಬನ್ನೇರುಘಟ್ಟ ರಸ್ತೆಯ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಏಪ್ರಿಲ್ (April) 5 ರಿಂದ ಒಂದು ವರ್ಷದವರೆಗೆ ಮುಚ್ಚಲಾಗುತ್ತಿದೆ. ಹಾಗಾಗಿ ವಾಹನ ಸವಾರರು ಬೇರೆ ಮಾರ್ಗಗಳಲ್ಲಿ ಸಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ.
 ಲಕ್ಕಸಂದ್ರ ಮೆಟ್ರೋ ನಿಲ್ದಾಣವು 21.26 ಕಿ.ಮೀ ಪಿಂಕ್ ಲೈನ್‌ನ ಭಾಗವಾಗಿದ್ದು, ಮುಂದಿನ ವರ್ಷ ತೆರೆಯಬಹುದು ಎನ್ನಲಾಗುತ್ತಿದೆ.ಮೈಕೋ ಬಂಡೆ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಡೈರಿ ಸರ್ಕಲ್‌ನಿಂದ (Dairy Circle) ವಾಹನಗಳಿಗೆ ಹೋಗುವ ರಸ್ತೆಯನ್ನು ಏಪ್ರಿಲ್ 1 ರಂದು ಮುಚ್ಚಲು ಪ್ರಾರಂಭಿಸಬೇಕಾಗಿತ್ತು.

ಆದರೆ, ನಾಲ್ಕು ದಿನ ಮುಂದಕ್ಕೆ ತಳ್ಳಲಾಯಿತು. ಜೊತೆಗೆ ಸವಾರರ ದೃಷ್ಟಿಯಿಂದ, ಟ್ರಾಫಿಕ್ ಪೊಲೀಸರು (Traffic Police) ವಾಹನ ಬಳಕೆದಾರರಿಗೆ ಈ ಕೆಳಗಿನ ತಿರುವುಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.ಈಗಾಗಲೇ ಈ ಕುರಿತಾಗಿ ವಿವರಗಳನ್ನು ಪತ್ರಿಕಾ ಪ್ರಕಟಣೆಯನ್ನು ಬಿಎಂಆರ್‌ಸಿಎಲ್ (BMRCL) ಸಂಸ್ಥೆಯು ಹೊರಡಿಸಿದೆ.

ಡೈರಿ ವೃತ್ತದಿಂದ ಆನೆಪಾಳ್ಯ ಜಂಕ್ಷನ್ (Anepalya Junction) ಕಡೆಗೆ ತೆರಳುವ ವಾಹನಗಳು ಮೈಕೋ ಬಂಡೆ ಸಿಗ್ನಲ್ ಬಳಿ ಬಲ ತಿರುವು ಪಡೆದು ನ್ಯೂ ಮೈಕೋ ಲಿಂಕ್ ರಸ್ತೆ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಆನೆಪಾಳ್ಯ ಜಂಕ್ಷನ್ ಕಡೆಗೆ ಸಾಗಬೇಕಿದೆ. ಆನೆಪಾಳ್ಯ ಜಂಕ್ಷನ್ ಎಂದರೆ ಬನ್ನೇರುಘಟ್ಟ ರಸ್ತೆ ಮತ್ತು ಹೊಸೂರು ರಸ್ತೆಯಿಂದ ಬರುವ ಟ್ರಾಫಿಕ್ ಕ್ರಿಶ್ಚಿಯನ್ ಸ್ಮಶಾನದ ಬಳಿ ವಿಲೀನಗೊಳ್ಳುತ್ತದೆ.

ಡೈರಿ ವೃತ್ತದಿಂದ ಶಾಂತಿನಗರದ ವಿಲ್ಸನ್ ಗಾರ್ಡನ್ (Wilson Garden) ಕಡೆಗೆ ಚಲಿಸುವ ವಾಹನಗಳು ಮೈಕೋ ಬಂಡೆ ಸಿಗ್ನಲ್ ಮೂಲಕ ಚಲಿಸಬಹುದು ಮತ್ತು ವಿಲ್ಸನ್ ಗಾರ್ಡನ್ 7ನೇ ಮುಖ್ಯರಸ್ತೆ ಕ್ರಾಸ್ (ಚಿನ್ನಯ್ಯನ ಪಾಳ್ಯ ಕ್ರಾಸ್) ನಲ್ಲಿ ಎಡಕ್ಕೆ ತಿರುಗಬಹುದು. ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೇಲಿನ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version