ಮಣಿಪುರದಿಂದ ಮುಂಬಯಿಗೆ ರಾಹುಲ್ ಗಾಂಧಿ ‘ಭಾರತ ನ್ಯಾಯ ಯಾತ್ರೆ’

New Delhi : ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ(Bharat Nyay Yatra-Rahulgandhi) ಅವರು ಭಾರತ್ ಜೋಡೋ ಯಾತ್ರೆಯ (Bharat Nyay Yatra) ಯಶಸ್ಸಿನ

ಬಳಿಕ ಪೂರ್ವ ಮತ್ತು ಪಶ್ಚಿಮದ ನಡುವೆಯೂ ಯಾತ್ರೆ ನಡೆಸುವುದಾಗಿ ಹೇಳಿಕೆ ನೀಡಿದ್ದರು ಈ ಬೆನ್ನಲ್ಲೇ ಜನವರಿ 14 ರಿಂದ ತಮ್ಮ ಎರಡನೇ ಹಂತದ ಯಾತ್ರೆಯನ್ನು ಆರಂಭಿಸಲಿದ್ದಾರೆ. ಮಣಿಪುರದಿಂದ

ಮುಂಬೈವರೆಗೆ (Manipur to Mumbai) 6,200 ಕಿಮೀ ಉದ್ದದ ಮಾರ್ಗದಲ್ಲಿ ‘ಭಾರತ್ ನ್ಯಾಯ ಯಾತ್ರೆ’ಯನ್ನು ರಾಹುಲ್ ಗಾಂಧಿ ಹಮ್ಮಿಕೊಳ್ಳಲಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (Kanyakumari to Kashmir) ಐದು ತಿಂಗಳ ಕಾಲ ಪಾದಯಾತ್ರೆ ನಡೆಸಲಾಗಿತ್ತು. ಕರ್ನಾಟಕ ಮತ್ತು ತೆಲಂಗಾಣ (Karnataka and Telangana)

ರಾಜ್ಯಗಳಲ್ಲಿನ ಪಕ್ಷದ ಗೆಲುವಿಗೆ ಭಾರತ ಐಕ್ಯತಾ ಯಾತ್ರೆ ಕಾರಣ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪೂರ್ವ- ಪಶ್ಚಿಮ ಯಾತ್ರೆಯು ಗಮನ ಸೆಳೆದಿದೆ.

ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ (Assam, Meghalaya, West Bengal, Bihar, Odisha), ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ,

ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳ 85ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಭಾರತ ನ್ಯಾಯ ಯಾತ್ರೆ’ ಸಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಕೆಲವೊಂದು ಸ್ಥಳಗಳಲ್ಲಿ ಮಾತ್ರ ರಾಹುಲ್ ಗಾಂಧಿ ಹಾಗೂ ಇತರೆ ನಾಯಕರು ಪಾದಯಾತ್ರೆ ಮಾಡಲಿದ್ದಾರೆ. ಆದರೆ ಇದು ಸಂಪೂರ್ಣ ಪಾದಯಾತ್ರೆ ಆಗಿರುವುದಿಲ್ಲ. ಗರಿಷ್ಠ ಜನರ ಪಾಲ್ಗೊಳ್ಳುವಿಕೆಗೆ ಅವಕಾಶ

ಮಾಡಿಕೊಡಲು ಕಾಲ್ನಡಿಗೆ ಇರುತ್ತದೆ. ಬಹುತೇಕ ಭಾಗ ಬಸ್ ಪ್ರಯಾಣ ಇರಲಿದ್ದು, (Bharat Nyay Yatra-Rahulgandhi) ಮಾರ್ಚ್ 20ರಂದು ಪಾದಯಾತ್ರೆ ಅಂತ್ಯಗೊಳ್ಳಲಿದೆ.

ಲೋಕಸಭೆ ಚುನಾವಣೆಗೂ ಮುನ್ನ ಯಾತ್ರೆ ಮುಗಿಯಲಿದೆ. ಹೀಗಾಗಿ ಈ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯಾತ್ರೆ ನೆರವಾಗಲಿದೆ ಎನ್ನುವುದು ಕಾಂಗ್ರೆಸ್ (Congress) ಲೆಕ್ಕಾಚಾರ.

ಭಾರತ್ ಜೋಡೋ ಯಾತ್ರೆಯನ್ನು ಜನರು ತಿರಸ್ಕರಿಸಿದ್ದರು. ಅದಕ್ಕೆ ಹೊಸ ಹೆಸರು ಇರಿಸುವುದರಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿ (BJP) ಲೇವಡಿ ಮಾಡಿದೆ.

14 ರಾಜ್ಯ 85 ಜಿಲ್ಲೆಗಳು ಕಾಂಗ್ರೆಸ್‌ನ ಈ ಭಾರತ ನ್ಯಾಯ ಯಾತ್ರೆ 14 ರಾಜ್ಯಗಳು ಮತ್ತು 85 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ, ಜಾರ್ಖಂಡ್,

ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಯುಪಿ, ರಾಜಸ್ಥಾನ, ಗುಜರಾತ್ ಮತ್ತು ಮೂಲಕ ಮುಂಬೈ (Mumbai) ತಲುಪಲಿದೆ. ಬಸ್​ ಮೂಲಕ ಯಾತ್ರೆ ನಡೆಸಲಿದ್ದು, ಕೆಲವೆಡೆ ಕಾಲ್ನಡಿಗೆಯಲ್ಲಿಯೂ ಯಾತ್ರೆ

ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ‘ಭಾರತ ನ್ಯಾಯ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ.

ಇದನ್ನು ನೋಡಿ: ಮಣಿಪುರದಿಂದ ಮುಂಬಯಿಗೆ ರಾಹುಲ್ ಗಾಂಧಿ ‘ಭಾರತ ನ್ಯಾಯ ಯಾತ್ರೆ’

Exit mobile version