ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ವಾರ್ನರ್ ಹಾಗೂ ಅಬಾಟ್ ಔಟ್

ಮೆಲ್ಬೋರ್ನ್, ಡಿ. 23: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೂ ಮೊದಲು ಆಸೀಸ್ ಪಡೆಗೆ ದೊಡ್ಡ ಹಿನ್ನಡೆ ಅನುಭವಿಸಿದ್ದು, ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಮತ್ತು ವೇಗದ ಬೌಲರ್ ಸೀನ್ ಅಬಾಟ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗಾಯದಿಂದಾಗಿ ಇಬ್ಬರೂ ಆಟಗಾರರು ಪಂದ್ಯದಿಂದ ಹೊರಗುಳಿದಿದ್ದರು. ಚಿಕಿತ್ಸೆಯ ನಂತರ ಗುಣಮುಖರಾಗಿದ್ದ ಇಬ್ಬರು ಆಟಗಾರರು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವ ಭರವಸೆ ಮೂಡಿಸಿದ್ದರು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಡಿಸೆಂಬರ್ 23 ಬುಧವಾರದಂದು ಈ ಎರಡೂ ಆಟಗಾರರು ಮೆಲ್ಬೋರ್ನ್ ಟೆಸ್ಟ್ನಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಈ ನಿಲುವಿಗೆ ಪ್ರಮುಖ ಕಾರಣವೆಂದರೆ ಈ ಇಬ್ಬರೂ ಆಟಗಾರರು ಕೆಲವು ದಿನಗಳ ಹಿಂದೆ ಸಿಡ್ನಿಯಲ್ಲಿದ್ದರು. ಹಾಗಾಗಿ ಸಿಡ್ನಿಯಲ್ಲಿ ಈಗಾಗಲೇ ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಬಳಿಕ ಭೀತಿ ಉಂಟಾಗಿದೆ. ಈ ಕಾರಣದಿಂದಾಗಿ ಡೇವಿಡ್ ವಾರ್ನರ್ ಮತ್ತು ವೇಗದ ಬೌಲರ್ ಸೀನ್ ಅಬಾಟ್ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಮರ್ಥನೆ ನೀಡಿದೆ.

Exit mobile version