ಭಾರತದಿಂದ ಮಾರಿಷಸ್‌ಗೆ ಕೋವ್ಯಾಕ್ಸಿನ್ ರವಾನೆ

ಮುಂಬೈ, ಜ. 22: ದೇಶಾದ್ಯಂತ  ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಇದೀಗ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಿಗೂ ಸಹ ಲಸಿಕೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಯ ಪಿ-8 ವಿಮಾನದ ಮೂಲಕ ಮಾರಿಷಸ್​​ಗೆ 1 ಲಕ್ಷ ಡೋಸೇಜ್​​​, ಸೀಶೆಲ್​ಗೆ 50 ಸಾವಿರ ಡೋಸೇಜ್​ ವ್ಯಾಕ್ಸಿನ್​ಗಳನ್ನು ರವಾನಿಸಲಾಗಿದೆ.

ಮೊದಲಿಗೆ ಸೀಶೆಲ್ಸ್​ಗೆ ನಂತರ ಮಾರಿಷಸ್​ಗೆ ಲಸಿಕೆ ತಲುಪಿಸಲಾಗುವುದು. ಮೂರು ದಿನಗಳ ಹಿಂದಷ್ಟೇ ಭೂತಾನ್ ಹಾಗೂ ಮಾನ್ಯಾರ್​ಗೆ ವ್ಯಾಕ್ಸಿನ್ ರವಾನಿಸಲಾಗಿತ್ತು.

Exit mobile version